More

    ಸಮಾಜದ ಏಳ್ಗೆಗೆ ಸಂಘಟಿತ ಹೋರಾಟ ಅಗತ್ಯ

    ಜೇವರ್ಗಿ: ಸಮಾಜದ ಸಮಗ್ರ ಏಳ್ಗೆಗಾಗಿ ಸಂಘಟಿತ ಹೋರಾಟ ಅಗತ್ಯವಾಗಿದೆ. ಅಲ್ಲದೆ ಹಡಪದ ಸಮಾಜದ ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ವಿದ್ಯಾವಂತರನ್ನಾಗಿ ಮಾಡಬೇಕು ಎಂದು ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಕರೆ ನೀಡಿದರು.
    ಪಟ್ಟಣದ ಹೊರವಲಯದ ಹಡಪದ ಅಪ್ಪಣ್ಣ ಸಮುದಾಯ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಹಡಪದ ಅಪ್ಪಣ್ಣ ಅವರ 886ನೇ ಜಯಂತಿಗೆ ಚಾಲನೆ ನೀಡಿದ ಅವರು, ಆಥರ್ಿಕ, ಸಾಮಾಜಿಕ, ಶೈಕ್ಷಣಿಕವಾಗಿ ಸಮಾಜ ಮುಂದೆ ಬರಬೇಕಾಗಿದೆ. ಈ ಹಿಂದೆ ನಾನು ಶಾಸಕನಾಗಿದ್ದಾಗ ಹಡಪದ ಅಪ್ಪಣ್ಣನ ಸಮುದಾಯ ಭವನ ನಿಮರ್ಾಣಕ್ಕೆ 5 ಲಕ್ಷ ರೂ. ಬಿಡುಗಡೆಗೊಳಿಸಿದ್ದೆ. ಈ ಮೂಲಕ ಸಮಾಜದ ಏಳ್ಗೆಗೆ ಶ್ರಮಿಸಿದ್ದೇನೆ ಎಂದರು.
    ಶ್ರೀ ಬಾಲ ಬ್ರಹ್ಮಚಾರಿ ರಾಜಶಿವಯೋಗಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾದ್ಯಕ್ಷ ಈರಣ್ಣ ಸಣ್ಣೂರ, ತಾಲೂಕು ಅಧ್ಯಕ್ಷ ತಿಪ್ಪಣ್ಣ ಹಡಪದ ನರಿಬೋಳ, ಪ್ರಮುಖರಾದ ಬಸವರಾಜ ಪಾಟೀಲ್ ನರಿಬೋಳ, ಮಲಕಣ್ಣ ಹಂದನೂರ, ಸಂತೋಷ ಮದ್ರಿ, ಸೋಮಶೇಖರ ನರಿಬೋಳ, ಮಲ್ಲೇಶಿ ಜೇವಗರ್ಿ, ಶ್ರೀಶೈಲ ಸೊನ್ನ, ಮಲ್ಲಿಕಾಜರ್ುನ ಅತನೂರ, ಸಿದ್ದಣ್ಣ ಕೋಳಕೂರ, ಶಿವರಾಯ ಹಂದನೂರ, ಸಿದ್ದಣ್ಣ ಸೊನ್ನ, ಸಾವಿತ್ರಿ ಕೆಲ್ಲೂರ, ಹಣಮಂತ್ರಾಯ ಗಂವ್ಹಾರ, ಬಸಣ್ಣ ಹರವಾಳ, ಗುರುರಾಜ ನಂದೆಳಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts