More

    ಸಮಾಜದ ಉನ್ನತಿಗೆ ಮಹಿಳೆಯರ ಪಾತ್ರ ಅಪಾರ

    ಖಾನಾಪುರ, ಬೆಳಗಾವಿ: ಸಮಾಜದ ಉನ್ನತಿಯಲ್ಲಿ ಮುಖ್ಯ ಪಾತ್ರ ವಹಿಸುವ ಮಹಿಳಾ ಸಮುದಾಯದ ಅಭಿವೃದ್ಧಿ ಹಾಗೂ ಮಹಿಳೆಯರ ಸ್ವಾಭಿಮಾನ ಹೆಚ್ಚಿಸಲು ಸದಾ ಶ್ರಮಿಸುತ್ತಿದ್ದೇನೆ ಎಂದು ಶಾಸಕಿ ಡಾ.ಅಂಜಲಿ ನಿಂಬಾಳ್ಕರ್ ಹೇಳಿದರು.

    ತಾಲೂಕಿನ ನಂದಗಡದಲ್ಲಿ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್ ನೇತೃತ್ವದಲ್ಲಿ ಗುರುವಾರ ಹಮ್ಮಿಕೊಂಡಿದ್ದ ನವದುರ್ಗ ಅರಿಶಿಣ ಕುಂಕುಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ತಾಯಿ ಮತ್ತು ಶಿಶು ಚಿಕಿತ್ಸಾ ಕೇಂದ್ರದಂತಹ ಮಹತ್ವಾಕಾಂಕ್ಷೆ ಯೋಜನೆ ಮಹಿಳೆಯರ ಸಂಕಷ್ಟ ನಿವಾರಿಸುವಲ್ಲಿ ಯಶಸ್ವಿಯಾಗಿದೆ. ನಂದಗಡ ಗ್ರಾಮವು ಧಾರ್ಮಿಕ, ಶೈಕ್ಷಣಿಕ ಹಾಗೂ ಪ್ರವಾಸೋದ್ಯಮ ದೃಷ್ಟಿಯಿಂದ ಪ್ರಮುಖವಾಗಿದೆ. ಇಲ್ಲಿನ ಬಸ್ ತಂಗುದಾಣ ಮತ್ತು ಶಾಲಾ ಕೊಠಡಿ ಪೂರ್ಣಗೊಂಡಿದ್ದು. ಇನ್ನುಳಿದ ಮೂಲ ಸೌಕರ್ಯಕ್ಕಾಗಿ ಸಾಕಷ್ಟು ಹಣ ಮಂಜೂರಾಗಿದೆ. ನಂದಗಡ-ಹಲಸಿ ಪ್ರಮುಖ ರಸ್ತೆ ಕಾಮಗಾರಿ ಕೈಗೊಂಡು ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲಾಗಿದೆ. ಮೂರು ಮಾಧ್ಯಮದ ಶಾಲೆಗಳಿಗೆ ಅಗತ್ಯ ತರಗತಿ ಕೊಠಡಿಗಳನ್ನು ಮಂಜೂರು ಮಾಡುವ ಮೂಲಕ ಶಿಕ್ಷಣಕ್ಕೆ ವಿಶೇಷ ಒತ್ತು ನೀಡಿಲಾಗುತ್ತಿದೆ. ಶೇ.50 ರಷ್ಟು ಮಹಿಳೆಯರು ಪುರುಷರೊಂದಿಗೆ ಕೆಲಸ ಮಾಡುವ ಮೂಲಕ ಕುಟುಂಬ ಮತ್ತು ದೇಶದ ಅಭಿವೃದ್ಧಿಯಲ್ಲಿ ಭಾಗಿಯಾಗಿದ್ದೇವೆ. ಮಹಿಳೆಯರು ಕೀಳರಿಮೆ ಬಿಟ್ಟು ಪ್ರಗತಿಯತ್ತ ಮಾತ್ರ ಗಮನ ಹರಿಸಬೇಕು ಎಂದರು.

    ಗ್ರಾಪಂ ಸದಸ್ಯರಾದ ವೈಷ್ಣವಿ ಪಾಟೀಲ, ಬಸವ್ವ ಹತ್ತರವಾಡ, ಸಂಗೀತಾ ಮಡ್ಡಿಮನಿ, ಸುಜಾತಾ ಹುಲಬತೆ, ಆಸಿಯಾ ಸೈಯದ್, ನಸೀಮಾ ಹೆರೇಕರ್, ನಿಕತ್‌ಪರವೀನ್ ತಹಸೀಲ್ದಾರ್, ದೀಪಾ ಪಾತರ್ಡೆ, ಗ್ರಾಪಂ ಮಾಜಿ ಸದಸ್ಯರಾದ ಮಹಾಂತೇಶ ರಾವುತ್, ತಮ್ಮಣ್ಣ ಕೋಲ್ಕಾರ, ಮಹಾಂತೇಶ ಕಲ್ಯಾಣಿ, ಬಾಬು ಹತ್ತರವಾಡ್, ರಾಜು ಕಬ್ಬೂರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts