More

    ಸಮಾಜದ ಉನ್ನತಿಗೆ ಪ್ರಯತ್ನಿಸಿ

    ಬಸವಕಲ್ಯಾಣ: ಬಸವ ತತ್ವ ಪ್ರಚಾರದ ಜತೆಗೆ ಸರ್ವ ಸಮಾನತೆಯ ಸಮಾಜ ನಿಮರ್ಾಣ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಪೂಜ್ಯ ಡಾ.ಗಂಗಾಂಬಿಕಾ ಅಕ್ಕ ಸಲಹೆ ನೀಡಿದರು.

    ನಗರದ ವಿಠೋಬಾ ಗಲ್ಲಿ ಸಮೀಪದ ದುಗರ್ೆ ಕಾಂಪ್ಲೆಕ್ಸ್ನಲ್ಲಿ ಭಾನುವಾರ ಆಯೋಜಿಸಿದ್ದ ಅಖಿಲ ಭಾರತೀಯ ಲಿಂಗಾಯತ ಮಹಾ ಒಕ್ಕೂಟ ಉದ್ಘಾಟನೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ಒಗ್ಗಟ್ಟಿನಿಂದ ರಚನಾತ್ಮಕ ಕಾರ್ಯ ಚಟುವಟಿಕೆ ನಡೆಸುವ ಮೂಲಕ ಸಮಾಜದ ಉನ್ನತಿಗೆ ಪ್ರಯತ್ನಿಸಬೇಕು ಎಂದರು.

    ವಿಶ್ವಕ್ಕೆ ಅಮೂಲ್ಯವಾದ ವಚನ ಸಾಹಿತ್ಯ ನೀಡಿದ ನೆಲ ಕಲ್ಯಾಣ. ಇಲ್ಲಿ ನೂತನ ಸಂಘಟನೆ ಉದ್ಘಾಟಿಸಿರುವುದು ಸಂತಸ ತಂದಿದೆ. ಎಲ್ಲರೂ ಕಾಯಕ-ದಾಸೋಹ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇಷ್ಟಲಿಂಗ ಪೂಜೆ ಮಾಡುವುದನ್ನು ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.

    ಅಧ್ಯಕ್ಷತೆ ವಹಿಸಿದ್ದ ಒಕ್ಕೂಟದ ಅಧ್ಯಕ್ಷ ಮಲ್ಲಿಕಾಜರ್ುನ ಅಗ್ರೆ, ಬಿಡಿಪಿಸಿ ಅಧ್ಯಕ್ಷ ಅನೀಲಕುಮಾರ ರಗಟೆ, ಸಾಹಿತಿ ರೇವಣಪ್ಪ ವಾಂಜರಖೇಡೆ ಮಾತನಾಡಿದರು. ಮಲ್ಲಿಕಾಜರ್ುನ ವಾಂಜರಖೇಡೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು.

    ಉಪಾಧ್ಯಕ್ಷ ಸಂಜುಕುಮಾದ ದೇಗಲೂರೆ, ಕಾರ್ಯದಶರ್ಿ ಶ್ರೀಶೈಲ ವಾತಡೆ, ಸಹ ಕಾರ್ಯದಶರ್ಿ ಸಿದ್ರಾಮ ಶೇರಿಕಾರ, ಕೋಶಾಧ್ಯಕ್ಷ ಬಾಬುರಾವ ಚಪಾತೆ, ನಿದರ್ೇಶಕರಾದ ಉಮೇಶ ಪಾಟೀಲ್, ಶಿವಪುತ್ರ ದುಗರ್ೆ, ಶಿವರಾಜ ಬದರ್ಾಪುರೆ, ಸೂರ್ಯಕಾಂತ ನಾಸೆ, ಭೀಮಾಶಂಕರ ಬಿಜಾಪುರೆ, ವಿಜಯಕುಮಾರ ಕಿರಣಗೆ, ಸಂಜುಕುಮಾರ ಪಾಟೀಲ್, ಶಿವಶಂಕರ ಮಂಠಾಳೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts