More

    ಸಮಾಜಕ್ಕೆ ಶರಣರ ಕೊಡುಗೆ ಅಪಾರ

    ವಿಜಯಪುರ: ಕಾಯಕ, ದಾಸೋಹ ಮತ್ತು ಧಾರ್ಮಿಕ ತಳಹದಿಯ ಮೇಲೆ ಸಮ ಸಮಾಜ ನಿರ್ಮಾಣ ಮಾಡಲು ಶ್ರಮಿಸಿದ ಶರಣರ ಕೊಡುಗೆ ಅಪಾರ ಎಂದು ಅಪರ ಜಿಲ್ಲಾಧಿಕಾರಿ ಡಾ. ಔದ್ರಾಮ್ ಹೇಳಿದರು.

    ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿ.ಪಂ. ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾಯಕ ಶರಣರ ಜಯಂತಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಶರಣರು ತಮ್ಮ ಕಾಯಕಗಳಿಂದಲೇ ಸಮಾಜಕ್ಕೆ ಮಾದರಿಯಾಗಿ ನಿಂತವರು. ಅವರ ಆದರ್ಶಗಳನ್ನು ಇಂದಿನ ಯುವ ಸಮುದಾಯ ಅಳವಡಿಸಿಕೊಳ್ಳಬೇಕು. ಕಾಯಕದ ಮಹತ್ತವನ್ನು ಪ್ರತಿಯೊಬ್ಬರೂ ಅರಿಯಬೇಕು ಎಂದರು.

    ಉಪನ್ಯಾಸಕ ಲಾಯಪ್ಪ ಇಂಗಳೆ ಮಾತನಾಡಿ, ಕಾಯಕ ಶರಣರನ್ನು ಅಂದು ಪಂಚಕರ್ಮರು ಅಂತ ಕರೆಯಲಾಗುತ್ತಿತ್ತು. ಅವರು ಕಾಯಕ, ದಾಸೋಹ ಹಾಗೂ ವಚನಗಳಿಂದ ಸಮಾಜವನ್ನು ತಿದ್ದುವಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರಾಗಿದ್ದರು. ಮಾದಾರ ಚನ್ನಯ್ಯ, ಮಾದರ ದೂಳಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ ಹಾಗೂ ಉರಿಲಿಂಗ ಪೆದ್ದಿ ಅವರು ತಮ್ಮ ಕಾಯಕದಿಂದ ಗುರುತಿಸಿಕೊಂಡವರು. ಅವರು ಬರೆದ ವಚನಗಳಲ್ಲಿ ಸಮಾಜದ ತಾರತಮ್ಯ, ಮೂಢನಂಬಿಕೆಗಳ ವಿರುದ್ಧ ಧ್ವನಿಗೂಡಿಸಿದ್ದನ್ನು ನಾವು ಕಾಣಬಹುದಾಗಿ. ಕಾಯಕದ ಮೇಲೆ ಜಾತಿ ಮಾಡಬಾರದು, ಯಾವ ಕಾಯಕವೂ ದೊಡ್ಡದಲ್ಲ, ಮನಸ್ಸಿನಿಂದ ಮಾಡುವ ಯಾವ ಕಾಯಕವು ಸಣ್ಣದಲ್ಲ ಎಂದು ಸಾರಿದ ಮಹಾನುಭಾವರು ಈ ಕಾಯಕ ಶರಣರು ಎಂದು ತಿಳಿಸಿದರು.

    ಮಾದಾರ ಚನ್ನಯ್ಯ ಅವರು ಬಸವಣ್ಣನವರಿಗಿಂತ ಹಿರಿಯರಾಗಿದ್ದರು. ಮಾದರ ಧೂಳಯ್ಯ ಒಬ್ಬ ಪ್ರಖರ ವಚನಕಾರರಾಗಿದ್ದರು. ಇವರು ತಮ್ಮ ಜೀವನದಲ್ಲಿ ಒಟ್ಟು 300ಕ್ಕೂ ಹೆಚ್ಚು ವಚನಗಳನ್ನು ರಚಿಸಿದ್ದು ಕಾಯದೋಳ್ ದೂಳೇಶ್ವರ ಅವರ ಅಂಕಿತನಾಮವಾಗಿತ್ತು. ಅಭಿನವ ಮಲ್ಲಿಕಾರ್ಜುನ ಎನ್ನುವ ಅಂಕಿತನಾಮದಿಂದ ಗುರುತಿಸಿಕೊಂಡಿರುವ ಡೋಹರ ಕಕ್ಕಯ್ಯ ಅವರು ಬರೆದ ಒಟ್ಟು ವಚನಗಳಲ್ಲಿ ಸಿಕ್ಕಿದ್ದು ಮಾತ್ರ ಕೇವಲ ಆರು ವಚನಗಳು ಮಾತ್ರ. ಆದರೆ ಅವರ ಪಾಂಡಿತ್ಯ ಹೇಗಿತ್ತು ಎನ್ನಲು ಆ ಆರು ವಚನಗಳೆ ಸಾಕು, ಶುದ್ಧ ಕಾಯಕ ಮಾಡು ಅದರಲ್ಲೆ ದೇವರು ಅಡಗಿದ್ದಾನೆ ಎಂದು ಕಾಯಕದ ಮಹತ್ತ ಸಾರಿದ ಡೋಹರ ಕಕ್ಕಯ್ಯ ಮಹಾನ ಶರಣರಲ್ಲಿ ಒಬ್ಬರು ಎಂದು ಇಂಗಳೆ ತಿಳಿಸಿದರು.

    ಸಮಗಾರ ಹರಳಯ್ಯ ಹಾಗೂ ಉರಿಲಿಂಗ ಪೆದ್ದಿ ಇಬ್ಬರು ಮಹಾನ್ ವ್ಯಕ್ತಿಗಳಾಗಿ ಇಂದು ನಮ್ಮ ಮುಂದೆ ನಿಲ್ಲುತ್ತಾರೆ. ಸಮಗಾರ ಹರಳಯ್ಯ ಒಟ್ಟು 366 ವಚನಗಳನ್ನು ರಚಿಸಿದ್ದಾರೆ. ಉರಿಲಿಂಗ ಪೆದ್ದಿಯವರು ಹೊಟ್ಟೆ ಪಾಡಿಗೆ ಮೊದಲು ಕಳ್ಳತನವನ್ನು ಮಾಡುತ್ತಿದ್ದರು. ಆದರೆ ನಂತರದಲ್ಲಿ ಮಹಾನ್ ಉರಿಲಿಂಗ ದೇವರ ಐದನೇ ಶಿಷ್ಯರಾಗಿ ಅನೇಕ ವಚನಗಳನ್ನು ಬರೆದು ಸಮಾಜವನ್ನು ತಿದ್ದುವ ಕಾಯಕದಲ್ಲಿ ತೊಡಗಿಸಿಕೊಂಡರು. ತಮ್ಮ ಗುರುವಿನ ಹೆಸರನ್ನೇ ತಮ್ಮ ವಚನಗಳ ಅಂಕಿತನಾಮವನ್ನಾಗಿ ಬಳಸಿಕೊಂಡ ವಚನಕಾರರಲ್ಲಿ ಉರಿಲಿಂಗಪೆದ್ದಿ ಒಬ್ಬರೇ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts