More

    ಸಮಸ್ಯೆ ನಿವಾರಣೆಗೆ ನಗೆ ಅತ್ಯಗತ್ಯ

    ಹುಬ್ಬಳ್ಳಿ: ಚೇತನೋತ್ಸವ 2022ರ ಅಂಗವಾಗಿ ನಗರದ ಚೇತನ ವಾಣಿಜ್ಯ, ಬಿಸಿಎ, ಬಿಬಿಎ ಮತ್ತು ಎಂಬಿಎ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ‘ಚೇತನ ನಗೆ ಹಬ್ಬ’ ಸಂಭ್ರಮದ ತೆರೆಕಂಡಿತು.

    ಪಾಲಿಕೆ ಸದಸ್ಯ ರಾಜಣ್ಣ ಕೊರವಿ ಉದ್ಘಾಟಿಸಿ ಮಾತನಾಡಿ, ಜೀವನದ ಜಂಜಾಟದಲ್ಲಿ ನಗೆ ಅನ್ನುವುದು ಕಡಿಮೆ ಆಗುತ್ತಿದೆ. ಪ್ರತಿ ಸಮಸ್ಯೆ ನಿವಾರಣೆಗೂ ನಗೆ ಅಗತ್ಯ. ಎದುರಿಗಿದ್ದ ವ್ಯಕ್ತಿಯನ್ನು ಸೋಲಿಸಲು ಸಿಟ್ಟು ಬೇಕಾಗಿಲ್ಲ. ನಗೆ ಮಾತುಗಳೇ ಅವರನ್ನು ಸೋಲಿಸಿ ಬಿಡುತ್ತವೆ ಎಂದರು.

    ಗಂಗಾವತಿ ಪ್ರಾಣೇಶ, ನರಸಿಂಹ ಜೋಶಿ ಮತ್ತು ಬಸವರಾಜ ಮಹಾಮನಿ ಅವರು ಜನರನ್ನು ನಗೆಯಲ್ಲಿ ತೇಲಿಸಿದರು. ಸಂಸ್ಥೆಯ ಕಾರ್ಯಾಧ್ಯಕ್ಷ ಜಗದೀಶ ದ್ಯಾವಪ್ಪನವರ, ಪಾಚಾರ್ಯ ಡಾ. ಅಶೋಕ ವಡಕಣ್ಣವರ, ಡಾ. ರಮಾಕಾಂತ ಕುಲಕರ್ಣಿ, ಬಿಸಿಎ ವಿಭಾಗದ ಮುಖ್ಯಸ್ಥೆ ಪ್ರೊ. ಶಿಲ್ಪಾ ಕುಲಕರ್ಣಿ, ಬಿಕಾಂ ವಿಭಾಗದ ಮುಖ್ಯಸ್ಥ ಡಾ. ಪ್ರಶಾಂತ ಗಾಮಾನಗಟ್ಟಿ, ಪ್ರೊ. ಸುನೀತಾ ಹರಿವಂಶಿ, ಪ್ರೊ. ನಿಧಿ ದೇಶಪಾಂಡೆ, ಪ್ರೊ. ಭಾರತಿ ಬಡಿಗೇರ, ಪ್ರೊ. ಅಂಬಿಕಾ, ಪ್ರೊ. ಫಾತಿಮಾ, ಪ್ರೊ. ಶ್ವೇತಾ, ಡಾ. ಪವನ ಅಪರಂಜಿ, ಮಹೇಶ ಸಂಗಮ ಉಪಸ್ಥಿತರಿದ್ದರು. ಸಂಸ್ಥೆಯ ನಿರ್ದೇಶಕ ಡಾ. ವಿಶ್ವನಾಥ ಕೊರವಿ ಸ್ವಾಗತಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts