More

    ಸಮಗ್ರ ಕೃಷಿಯಿಂದ ಆರ್ಥಿಕ ಸ್ಥಿತಿ ಸದೃಢ

    ರಟ್ಟಿಹಳ್ಳಿ: ರೈತರು ಸಮಗ್ರ ಕೃಷಿಯತ್ತ ಗಮನಹರಿಸಬೇಕು. ಮಿಶ್ರ ಬೇಸಾಯ, ಜಮೀನುಗಳಲ್ಲಿ ಇತರೆ ಉಪಕಸುಬುಗಳನ್ನು ಅಳವಡಿಸಿಕೊಂಡಾಗ ಮಾತ್ರ ರೈತರ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗಲು ಸಾಧ್ಯ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದರು.

    ತಾಲೂಕಿನ ಮಾಸೂರು ಗ್ರಾಮದ ಬ್ಯಾರೇಜ್ ಕಂ ಬ್ರಿಡ್ಜ್ ನಿರ್ವಣ, ಗಲಗಿನಕಟ್ಟೆ ಮತ್ತು ಹಿರೇಕಬ್ಬಾರ ಕೆರೆಗಳಿಗೆ ನೀರು ತುಂಬಿಸುವ ಯೋಜನೆ, ಕಡೂರ ಗ್ರಾಮದ ಬಸ್ ತಂಗುದಾಣ, ಉಗ್ರಾಣ ಉದ್ಘಾಟನೆ ಸೇರಿದಂತೆ ವಿವಿಧೆಡೆ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

    ರೈತರು ತಮ್ಮ ಜಮೀನುಗಳಲ್ಲಿ ತರಕಾರಿ, ತೋಟಗಾರಿಕೆ ಬೆಳೆಗಳು, ವಿವಿಧ ನಮೂನೆಯ ಹಣ್ಣುಗಳು ಸೇರಿದಂತೆ ಮಿಶ್ರ ಬೇಸಾಯದ ಮೊರೆ ಹೋಗಬೇಕು. ತಮ್ಮ ಜಮೀನುಗಳಲ್ಲಿ ಜೇನು, ಕುರಿ, ಹೈನುಗಾರಿಕೆ, ಕೋಳಿ ಸಾಕಾಣಿಕೆಯಂತಹ ಇತರೆ ಉಪಕಸುಬುಗಳನ್ನು ಮಾಡಬೇಕು. ರೈತರೇ ಮಾರುಕಟ್ಟೆಗೆ ನೇರವಾಗಿ ಹೋಗಬೇಕು. ಹೀಗೆ ಮಾಡುವುದರಿಂದ ರೈತರ ಆರ್ಥಿಕ ಸ್ಥಿತಿ ಸುಧಾರಣೆಯಾಗುತ್ತದೆ ಎಂದರು.

    ಈ ಬಾರಿ ರಾಜ್ಯದಲ್ಲಿ ಉತ್ತಮ ಮಳೆಯಾಗಿದೆ. ಮುಂದಿನ ದಿನಮಾನಗಳಲ್ಲಿ ಪ್ರತಿ ಜಿಲ್ಲೆಗಳಿಗೆ ಭೇಟಿ ನೀಡಿ ರೈತರ ಸಂಪೂರ್ಣ ಸಮಸ್ಯೆಗಳ ಮಾಹಿತಿ ಪಡೆದು ಮುಖ್ಯಮಂತ್ರಿಗಳಿಗೆ ವರದಿ ಸಲ್ಲಿಸುತ್ತೇನೆ. ಕೇಂದ್ರ ಸರ್ಕಾರದಿಂದ ನರೇಗಾ ಯೋಜನೆಗೆ ಹೆಚ್ಚಿನ ಅನುದಾನ ನೀಡುತ್ತಿದ್ದು, ನಿರುದ್ಯೋಗಿಗಳು ಸರ್ಕಾರದ ನಿರ್ದೇಶನದಂತೆ ಕೆಲಸ ಕಾರ್ಯಗಳಲ್ಲಿ ತೊಡಗಬೇಕು ಎಂದರು.

    ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ. ಬಣಕಾರ ಮಾತನಾಡಿ, ನರೇಗಾ ಗ್ರಾಮೀಣ ಭಾಗದ ಕಾಮಧೇನು ಇದ್ದಂತೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗ್ರಾಮೀಣ ಭಾಗಗಳ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. ಪ್ರತಿ ಗ್ರಾಮ ಪಂಚಾಯಿತಿಗೆ ಉಗ್ರಾಣದ ಕಟ್ಟಡ ವ್ಯವಸ್ಥೆಗೆ ತಾಪಂ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ತಾಲೂಕಿನ ಜನತೆಯ ವಿಶ್ವಾಸ ಪ್ರೀತಿಗೆ ತಕ್ಕಂತೆ ಕೃಷಿ ಸಚಿವರೊಂದಿಗೆ ಇನ್ನು ಹೆಚ್ಚಿನ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.

    ಹಾವೇರಿ ಜಿಪಂ ಅಧ್ಯಕ್ಷ ಏಕನಾಥ ಬಾನುವಳ್ಳಿ, ಜಿಪಂ ಸದಸ್ಯ ಪ್ರಕಾಶ ಬನ್ನಿಕೋಡ, ತಾಪಂ ಅಧ್ಯಕ್ಷ ದಿಳ್ಳೆಪ್ಪ ಹಳ್ಳಳ್ಳಿ, ತಾಪಂ ಉಪಾಧ್ಯಕ್ಷ ಭರಮಪ್ಪ ಯಲೇದಹಳ್ಳಿ, ತಾಪಂ ಸದಸ್ಯ ರೇವಣೆಪ್ಪ ಯರಳ್ಳಿ, ತಹಸೀಲ್ದಾರ್ ಕೆ. ಗುರುಬಸವರಾಜ, ತಾಪಂ ಇಒ ಅಧಿಕಾರಿ ಮೋಹನಕುಮಾರ, ರಾಜು ಬಣಕಾರ, ದೇವರಾಜ ನಾಗಣ್ಣನವರ, ಸೃಷ್ಟಿ ಪಾಟೀಲ, ಚಂದ್ರಶೇಖರ ತುಮ್ಮಿನಕಟ್ಟಿ, ಜಗದೀಶಗೌಡ ಲಕ್ಕನಗೌಡ್ರ, ಕೆ.ವಿ. ವರಹದ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ವಿವಿಧ ಗ್ರಾಮಗಳ ಗ್ರಾಮಸ್ಥರು ಇದ್ದರು.

    ವಿವಿಧ ಕಾಮಗಾರಿಗಳಿಗೆ ಪೂಜೆ: ಚಿಕ್ಕಕಬ್ಬಾರ ಗ್ರಾಮದಲ್ಲಿ ಶಾಸಕರ 10 ಲಕ್ಷ ರೂ. ಅನುದಾನದಲ್ಲಿ ದುರ್ಗಾದೇವಿ ಭವನ ನಿರ್ವಣಕ್ಕೆ ಭೂಮಿ ಪೂಜೆ, ಕಡೂರ ಗ್ರಾಮದಲ್ಲಿ ನರೇಗಾ ಯೋಜನೆಯಡಿ ನಿರ್ವಿುಸಿದ ಉಗ್ರಾಣ ಉದ್ಘಾಟನೆ ಮತ್ತು ಶಾಸಕರ ಅನುದಾನದಲ್ಲಿ ಬಸ್ ತಂಗುದಾಣ ಉದ್ಘಾಟನೆ, 25 ಲಕ್ಷ ರೂ. ವೆಚ್ಚದಲ್ಲಿ ಓವರ್​ಹೆಡ್ ಟ್ಯಾಂಕ್ ನಿರ್ವಣ, ಹಿರೇಮಾದಾಪುರ ಗ್ರಾಮದಲ್ಲಿ ಬ್ಯಾರೇಜ್ ನಿರ್ವಣ, ರಟ್ಟಿಹಳ್ಳಿ-ತೋಟಗಂಟಿ ಮತ್ತು ಹಿರೇಮೊರಬ-ಚಿಕ್ಕಮೊರಬ ಗ್ರಾಮಗಳ ನಡುವೆ ಬ್ಯಾರೇಜ್ ಕಂ ಬ್ರಿಡ್ಜ್ ನಿರ್ವಣದ ಕಾಮಗಾರಿಗೆ ಕೃಷಿ ಸಚಿವ ಬಿ.ಸಿ. ಪಾಟೀಲ ಹಾಗೂ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ. ಬಣಕಾರ ಭೂಮಿ ಪೂಜೆ ನೆರವೇರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts