More

    ಸತ್ಕಾರ್ಯಕ್ಕೆ ಪ್ರೇರಣೆ ಮಾಲಾಧಾರಣೆ

    ನಿಪ್ಪಾಣಿ, ಬೆಳಗಾವಿ: ಯುವಕರು ಸತ್ಕಾರ್ಯಗಳಲ್ಲಿ ತೊಡಗಿಕೊಳ್ಳಲು ಹನುಮಮಾಲಾ ಧಾರಣೆ ಉಪಯುಕ್ತವಾಗಿದ್ದು, ಇದರಿಂದ ಒಗ್ಗಟ್ಟು ಸಾಧ್ಯವಾಗಲಿದೆ ಎಂದು ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
    ನಗರದ ವಿರೂಪಾಕ್ಷಲಿಂಗ ಸಮಾಧಿ ಮಠದಲ್ಲಿ ವಿಶ್ವ ಹಿಂದು ಪರಿಷತ್ ಮತ್ತು ಬಜರಂಗದಳದಿಂದ ಶನಿವಾರ ಆಯೋಜಿಸಿದ್ದ ಹನುಮಮಾಲಾ ಧಾರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಯುವಕರು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಬೇಕೆನ್ನುವ ಸದುದ್ದೇಶ ಈ ಕಾರ್ಯಕ್ರಮಕ್ಕಿದೆ. ಇದರಿಂದ ಒಳ್ಳೆಯ ಸಂಸ್ಕಾರಗಳ ಪ್ರಭಾವ ಯುವಕರ ಮೇಲಾಗಲಿದೆ. ಜೊಲ್ಲೆ ಗ್ರೂಪ್‌ನ ಉಪಾಧ್ಯಕ್ಷ ಬಸವಪ್ರಸಾದ ಜೊಲ್ಲೆ ಕಾರ್ಯಕ್ರಮ ಹಮ್ಮಿಕೊಂಡಿರುವುದಕ್ಕೆ ತುಂಬ ಹೆಮ್ಮೆ ಇದೆ. ಕ್ಷೇತ್ರದಿಂದ ಅಂಜನಾದ್ರಿಗೆ ಪ್ರಯಾಣ ಬೆಳೆಸಲಿರುವ ಹನುಮಮಾಲಾಧಾರಿಗಳಿಗೆ ಶುಭ ಕೋರುವೆ ಎಂದರು.

    ವಿಶ್ವ ಹಿಂದು ಪರಿಷತ್ ಮುಂಬೈ ಪ್ರಾಂತ ಪ್ರಮುಖ ಶಂಕರ ಗಾಯಕರ ಮಾತನಾಡಿ, ಯಾವುದು ನಾಶವಾಗುವುದಿಲ್ಲವೋ ಅದುವೇ ಸನಾತನ. ಅದೇ ಹಿಂದುತ್ವ, ಹಿಂದುತ್ವವನ್ನು ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ. ವೀರ ಸಾವರ್ಕರರಂತಹ ರಾಷ್ಟ್ರ ಭಕ್ತರನ್ನು ಅವಮಾನಿಸುವ ಕೆಲಸ ಮಾಡಲಾಗುತ್ತಿದೆ. ಸ್ವಾತಂತ್ರ್ಯ ಚರಕದಿಂದ ಸಿಕ್ಕಿಲ್ಲ. ಮೊದಲ ಪ್ರಧಾನಿ ದೇಶ ಇಬ್ಭಾಗಗೊಳಿಸಿದ್ದಾರೆ. ಇದುವೇ ಆತಂಕವಾದಕ್ಕೆ ಕಾರಣವಾಗಿದೆ. ಆತಂಕವಾದ ಹತ್ತಿಕ್ಕಬೇಕಾಗಿದೆ. ಛತ್ರಪತಿ ಶಿವಾಜಿ, ಭಗತಸಿಂಗ್, ರಾಣಿ ಲಕ್ಷ್ಮೀಬಾಯಿ, ತಾತ್ಯಾ ಟೋಪಿ ಅವರಂತಹ ಮಹಾನ್ ವ್ಯಕ್ತಿಗಳು ಪ್ರತಿ ಮನೆಯಲ್ಲಿ ಹುಟ್ಟಬೇಕು ಎಂದರು.

    ಸಾನ್ನಿಧ್ಯ ವಹಿಸಿದ್ದ ಕನ್ಹೇರಿಯ ಸಿದ್ಧಗಿರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ವಿಶ್ವಹಿಂದು ಪರಿಷತ್ ಮತ್ತು ಬಜರಂಗದಳ ರಾಷ್ಟ್ರ ನಿರ್ಮಾಣ ಕಾರ್ಯ ಮಾಡುತ್ತಿವೆ. ನಮ್ಮ ಗುರುಕುಲದಲ್ಲಿ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಲಾಗುತ್ತದೆ. ಮೊಘಲರ ಕಾರಣದಿಂದಾಗಿ ಹಿಂದು ಮಹಿಳೆಯರು ತಲೆ ಮೇಲೆ ಸೆರಗು ಹಾಕಿಕೊಳ್ಳುವ ಪರಿಸ್ಥಿತಿ ಬಂದಿದೆ. ಹನುಮಮಾಲಾ ಧಾರಣೆಯಿಂದ ಯುವಕರ ಮನಸ್ಸು ಶುದ್ಧವಾಗಿ ಒಳ್ಳೆಯ ಕಾರ್ಯಗಳಲ್ಲಿ ತೊಡಗಿಕೊಳ್ಳುತ್ತಾರೆ ಎಂದರು.

    ಬೆಳಗ್ಗೆ 6 ಗಂಟೆಗೆ ಹನುಮಮಾಲಾ ಧಾರಣೆ ಹಾಗೂ ಪವಮಾನ ಯಜ್ಞ ಜರುಗಿತು. ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ, ಜೊಲ್ಲೆ ಗ್ರೂಪ್‌ನ ಉಪಾಧ್ಯಕ್ಷ ಬಸವಪ್ರಸಾದ ಜೊಲ್ಲೆ , ಶಿರೋಳದ ಶಂಕರಾರೂಢ ಸ್ವಾಮೀಜಿ, ವಿರೂಪಾಕ್ಷಲಿಂಗ ಸಮಾಧಿ ಮಠದ ಪ್ರಾಣಲಿಂಗ ಸ್ವಾಮೀಜಿ, ಸಂಸದ ಅಣ್ಣಾಸಾಹೇಬ ಜೊಲ್ಲೆ, ಶೈಲೇಂದ್ರ ಪಾರೀಖ, ಸಂಜಯ ಅಡಕೆ, ಸುಚಿತ್ರಾ ಕುಲಕರ್ಣಿ, ಜ್ಯೋತಿಪ್ರಸಾದ ಜೊಲ್ಲೆ, ರಾಜು ಬದರಗಡೆ, ಹಾಲಸಿದ್ಧ್ದನಾಥ ಕಾರ್ಖಾನೆ ಉಪಾಧ್ಯಕ್ಷ ಎಂ.ಪಿ. ಪಾಟೀಲ, ಸಂಚಾಲಕ ವಿಶ್ವನಾಥ ಕಮತೆ, ಅವಿನಾಶ ಪಾಟೀಲ, ರಾಮಗೊಂಡ ಪಾಟೀಲ, ವ್ಯವಸ್ಥಾಪಕ ನಿರ್ದೇಶಕ ಶಿವ ಕುಲಕರ್ಣಿ, ನಗರಸಭೆ ಅಧ್ಯಕ್ಷ ಜಯಂತ ಭಾಟಲೆ, ವಿಜಯ ರಾವುತ, ರಮೇಶ ಪಾಟೀಲ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts