More

    ಸಂಸ್ಕೃತಿ ಉಳಿಸಿ-ಬೆಳೆಸುವ ಕೆಲಸವಾಗಲಿ

    ಗಜೇಂದ್ರಗಡ: ಭಾರತೀಯ ಮಹಿಳೆಗೆ ವಿಶ್ವದಲ್ಲಿಯೇ ಅತ್ಯಂತ ಗೌರವಯುತ ಸ್ಥಾನವಿದ್ದು, ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗದೆ ದೇಶೀಯ ಸಂಸ್ಕೃತಿ ಉಳಿಸಿ-ಬೆಳೆಸುವ ಹೊಣೆಗಾರಿಕೆ ಮಹಿಳೆಯರ ಮೇಲಿದೆ ಎಂದು ಅಕ್ಕನ ಬಳಗದ ಅಧ್ಯಕ್ಷೆ ಸಂಯುಕ್ತಾ ಬಂಡಿ ಹೇಳಿದರು.

    ಪಟ್ಟಣದ ಮೈಸೂರು ಮಠದಲ್ಲಿ ಅಕ್ಕನ ಬಳಗದಿಂದ ಭಾನುವಾರ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ನಗೆ ಹಬ್ಬ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 12ನೇ ಶತಮಾನದಲ್ಲಿ ಸ್ತ್ರೀ ಸ್ವಾತಂತ್ರ್ಯ್ಕಾಗಿ ಶಿವಶರಣೆಯರ ಕೊಡುಗೆ ಅಪಾರ. ಧೀರ ಮಹಿಳೆಯರಾದ ಕಿತ್ತೂರು ರಾಣಿ ಚನ್ನಮ್ಮ, ಝಾನ್ಸಿರಾಣಿ ಲಕ್ಷ್ಮೀಬಾಯಿ, ಒನಕೆ ಓಬವ್ವ, ಇಂದಿರಾಗಾಂಧಿ, ಕಲ್ಪನಾ ಚಾವ್ಲಾ, ಮದರ್ ಥೆರೇಸಾ ಮುಂತಾದ ಮಹಾನ್ ನಾಯಕಿಯರ ಜೀವನಾದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.

    ಕಸಾಪ ಜಿಲ್ಲಾ ಮಹಿಳಾ ಘಟಕದ ಪ್ರತಿನಿಧಿ ಮಂಜುಳಾ ರೇವಡಿ ಮಾತನಾಡಿ, ಮನೆಯಲ್ಲಿ ಸೊಸೆ ಹಾಗೂ ಮಗಳು ಹಚ್ಚುವ ದೀಪ ಮನೆ ಬೆಳಗುತ್ತದೆ. ಆದರೆ, ಸೊಸೆ ಬೇರೆ, ಮಗಳು ಬೇರೆ ಎನ್ನುವ ಅಸಹಕಾರ ಕಲ್ಪನೆಯಿಂದ ನಾವೆಲ್ಲರೂ ಹೊರಬಂದು ಇಂದಿನ ಯುವ ಪೀಳಿಗೆ ತಾಯಿಗೆ ನೀಡುವ ಗೌರವವನ್ನು ಅತ್ತೆಗೆ ನೀಡಿದಾಗ ಬಹುತೇಕ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂದರು.

    ತಾಪಂ ಉಪಾಧ್ಯಕ್ಷೆ ಇಂದಿರಾ ತೇಲಿ ಮಾತನಾಡಿದರು. ಇದೇ ವೇಳೆ ಸುವರ್ಣಾ ನಂದಿಹಾಳ, ಅನಸೂಯಾ ವಾಲಿ, ಗೀತಾ ಕಂಬಳ್ಯಾಳ, ಕವಿತಾ ಹಿರೇಮನಿ, ಗೀತಾ ಸಜ್ಜನರ, ಗಿರಿಜಾ ಬಳಗೇರ, ಪುಷ್ಪಾ ಭಾಂಡಗೆ, ಅನಿತಾ ದಾಶ್ಯಾಳ, ಲೀಲಾವತಿ ಸವಣೂರ, ದೀಪಾ ಗೌಡರ, ಲಕ್ಷ್ಮೀ ಮುಧೋಳ, ವಿಜಯಾ ಮಳಗಿ, ಲೀಲಾವತಿ ವನ್ನಾಲ, ಉಮಾ ಮ್ಯಾಕಲ್, ಸುಜಾತಾಬಾಯಿ ಶಿಂಗ್ರಿ, ದಾಕ್ಷಾಯಿಣಿ ಚೋಳಿನ, ಕೌಸರಬಾನು ಹುನಗುಂದ, ವಿಜಯಲಕ್ಷ್ಮಿ ಚಟ್ಟೇರ, ಬಿ.ಟಿ. ಹೊಸಮನಿ, ಶರಣಮ್ಮ ಅಂಗಡಿ, ಸಂಗೀತಾ ಗಾಣಗೇರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts