More

    ಸಂವಿಧಾನ ನಮ್ಮ ಭರವಸೆಯ ದಾರಿದೀಪ

    ಯಾದಗಿರಿ: ಸರ್ವಧರ್ಮಗಳು, ಸಾವಿರಾರು ಜಾತಿ, ಜನಾಂಗಗಳು ಐಕ್ಯತೆಯಿಂದ ಬಾಳುತ್ತಿರುವ ಭಾರತ ದೇಶ ಜಗತ್ತಿಗೆ ಮಾದರಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಪುರ ಅಭಿಪ್ರಾಯಪಟ್ಟರು.

    ಶುಕ್ರವಾರ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಿದ್ದ 75ನೇ ಗಣರಾಜ್ಯೋತ್ಸವದ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಜನತೆಗೆ ಶುಭ ಸಂದೇಶದ ನೀಡಿದ ಅವರು, ನಮ್ಮ ಸಂವಿಧಾನ ಭರವಸೆಯ ದಾರಿದೀಪವಾಗಿದೆ. ಎಲ್ಲ ಪ್ರಜೆಗಳಿಗೂ ನ್ಯಾಯ, ಸ್ವಾತಂತ್ರೃ ಸಮಾನತೆ ಮತ್ತು ಭ್ರಾತೃತ್ವ ನಮ್ಮ ಬದ್ಧತೆಯ ಸಂಕೇತವಾಗಿದೆ ಎಂದರು.

    ಭಾರತ ಸಂವಿಧಾನ 1949ರ ನವೆಂಬರ್ 26 ರಂದು ಅಂಗೀಕಾರವಾಗಿ, 1950ರ ಜನೆವರಿ 26ರಂದು ಜಾರಿಗೆ ಬಂತು. ಈ ದಿನದ ಗೌರವಾರ್ಥವಾಗಿ ಪ್ರತಿ ವರ್ಷವು ಗಣರಾಜ್ಯೋತ್ಸವ ದಿನವಾಗಿ ಆಚರಿಸುತ್ತಿದ್ದೇವೆ. ಭಾರತದಲ್ಲಿ ಸಂವಿಧಾನ ಜಾರಿಗೆ ಬಂದ ಕಾರಣ ದೇಶದ ಪ್ರತಿಯೊಬ್ಬ ಪ್ರಜೆಗೂ ಸಹ ಸಮಾನ ಶಿಕ್ಷಣ, ಪ್ರತಿಯೊಬ್ಬರಿಗೂ ಬೇಕಾದ ಮೂಲಭೂತ ಹಕ್ಕುಗಳು, ಧಾಮರ್ಿಕ ಹಕ್ಕುಗಳು ಇವೆಲ್ಲವೂ ಸಹ ದೊರಕಿದ್ದು, ಈ ದಿನಕ್ಕೆ ಇನ್ನಷ್ಟು ಮೆರಗು ನೀಡುತ್ತವೆ ಎಂದು ಹೇಳಿದರು.

    ಸಂವಿಧಾನ ಕರಡು ಸಮಿತಿಯ ನೇತೃತ್ವ ವಹಿಸಿದ್ದ ಡಾ.ಬಿಆರ್ ಅಂಬೇಡ್ಕರ್ಗೆ ದೇಶ ಯಾವಾಗಲು ಕೃತಜ್ಞರಾಗಿರಬೇಕು. ಸಂವಿಧಾನಕ್ಕೆ ಅಂತಿಮ ರೂಪವನ್ನು ನೀಡುವಲ್ಲಿ ನಿಣರ್ಾಯಕ ಪಾತ್ರವನ್ನು ವಹಿಸಿದ್ದರು. ರಚನಾ ಸಮಿತಿಯ ಎಲ್ಲ ಸದಸ್ಯರ ಪಾತ್ರ ಮತ್ತು ಕೊಡುಗೆ ಸಹ ಅಪಾರವಾಗಿದೆ. ಈ ಸದಸ್ಯರಲ್ಲಿ 15 ಜನ ಮಹಿಳಾ ಸದಸ್ಯರು ಸಹ ಇದ್ದದ್ದು, ಹೆಮ್ಮೆಯ ಸಂಕೇತ. ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಮತ್ತು ಇತರರು ನಮಗೆ ನಕ್ಷೆ ಮತ್ತು ನೈತಿಕ ಚೌಕಟ್ಟನ್ನು ನೀಡಿದರೆ, ಆ ಮಾರ್ಗದಲ್ಲಿ ನಡೆಯುವ ಕಾರ್ಯವು ನಮ್ಮ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts