More

    ಸಂವಾದ ಸಂಸ್ಕೃತಿ ಉಳಿಸುವ ಅಗತ್ಯವಿದೆ: ಬರಗೂರು

    ದಾವಣಗೆರೆ: ಅಪಾಯದಲ್ಲಿರುವ ಪ್ರಜಾಪ್ರಭುತ್ವ, ಸಂವಾದ ಸಂಸ್ಕೃತಿಯನ್ನು ರಕ್ಷಿಸುವ ಹೊಣೆ ರಾಜಕಾರಣಿ, ಸಾಹಿತಿಗಳು, ಚಳವಳಿಗಾರರು ಹಾಗೂ ಸಾಂಸ್ಕೃತಿಕ ಚಳವಳಿಗಳ ಮೇಲಿದೆ ಎಂದು ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ ಹೇಳಿದರು.

    ಬಂಡಾಯ ಸಾಹಿತ್ಯ ಸಂಘಟನೆ-ಕರ್ನಾಟಕ ವತಿಯಿಂದ ಇಲ್ಲಿನ ಕುವೆಂಪು ಕನ್ನಡ ಭವನದಲ್ಲಿ ಶನಿವಾರ ಆಯೋಜಿಸಿದ್ದ ರಾಜ್ಯ ಬಂಡಾಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
    ಇಂದು ದ್ವೇಷ ಭಾಷಣದ ಮೂಲಕ ಅದನ್ನು ಮುರಿದು ಹಾಕಲಾಗುತ್ತಿದೆ. ಇದನ್ನು ಧಿಕ್ಕರಿಸಬೇಕಿದೆ. ಎಲ್ಲ ಧರ್ಮಗಳ ಮೂಲಭೂತವಾದವನ್ನೂ ವಿರೋಧಿಸಬೇಕಿದೆ. ಪರಸ್ಪರ ಸಂವಾದ ಸಾಧ್ಯವಾಗುವಂಥ ಮಾನವೀಯ ಸಮಾಜ ಕಟ್ಟಬೇಕಿದೆ ಎಂದು ಆಶಿಸಿದರು.
    ಸಾಹಿತ್ಯ ಒಂದರಿಂದಲೇ ಸಮಾಜ ಬದಲಾಗದು. ಸಮೂಹ ಚಳವಳಿಗಳಿಗೆ ಪೂರಕ ಮನೋಭೂಮಿಕೆ ಒದಗಿಸುವುದೇ ಸಾಹಿತ್ಯ ಹಾಗೂ ಸಾಂಸ್ಕೃತಿಕ ಸಂಘಟನೆಗಳು. ಇದನ್ನು ಬಂಡಾಯ ಸಾಹಿತ್ಯ ಸಂಘಟನೆ ನಿರ್ವಹಿಸುತ್ತಿದೆ ಎಂದು ಸಮರ್ಥಿಸಿಕೊಂಡರು.
    ಕಾರ್ಯಕ್ರಮ ಉದ್ಘಾಟಿಸಿದ ಚಿಂತಕ ಜಿ. ರಾಮಕೃಷ್ಣ ಮಾತನಾಡಿ, ಹಸನಾದ ಜೀವನಕ್ಕಾಗಿ ಕಲೆ, ಸಾಹಿತ್ಯ ಬೇಕು. ಅದನ್ನು ಬಂಡಾಯ ಸಾಹಿತ್ಯ ಸಂಘಟನೆ ಆರಂಭದಿಂದಲೂ ನಿರ್ವಹಿಸುತ್ತಿದೆ. ದ್ವೇಷ ಬಿತ್ತುವ ಶಕ್ತಿಗಳು ಜಾಗೃತವಾಗಿರುವ ಈ ಹೊತ್ತಿನಲ್ಲಿ ಸಮಾನತೆ, ಸಹಿಷ್ಣುತೆ ಜತೆಗೆ ವಿನಯವಂತಿಕೆಯೂ ಬೇಕಾಗಿದೆ ಎಂದು ತಿಳಿಸಿದರು.
    ದಲಿತ ಮುಖಂಡ ಮಾವಳ್ಳಿ ಶಂಕರ್, ಚಿಂತಕ ಬಿ.ಎಂ. ಹನೀಫ್, ಸುಕನ್ಯಾ ಮಾರುತಿ, ಸಿ.ವಿ.ಪಾಟೀಲ್, ಎ.ಬಿ.ರಾಮಚಂದ್ರಪ್ಪ, ಬಿ.ಎನ್.ಮಲ್ಲೇಶ್, ಎಂ.ಟಿ.ಸುಭಾಶ್ಚಂದ್ರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts