More

    ಸಂಭ್ರಮದ ಅಮರೇಶ್ವರ ರಥೋತ್ಸವ

    ಔರಾದ್: ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀ ಉದ್ಭವಲಿಂಗ ಅಮರೇಶ್ವರ ಜಾತ್ರೋತ್ಸವ ನಿಮಿತ್ತ ಭಾನುವಾರ ನಸುಕಿನ ಜಾವ ಸಹಸ್ರಾರು ಭಕ್ತರ ಜೈಘೋಷಗಳ ಮಧ್ಯೆ ವೈಭವದಿಂದ ರಥೋತ್ಸವ ನೆರವೇರಿತು.

    ವಿವಿಧ ಪುಷ್ಪಗಳಿಂದ ಅಲಂಕೃತಗೊಂಡಿದ್ದ ತೇರಿಗೆ ಅಮರೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಮುಂದೆ ಸಾಗುತ್ತಿದ್ದಂತೆ ಶ್ರೀ ಅಮರೇಶ್ವರ ಮಹಾರಾಜ ಕೀ ಜೈ, ಓಂ ಬಲಾ ಶಂಕರ ಬಲಾ ಜೈಘೋಷಗಳು ಮೊಳಗಿದವು. ಡೊಳ್ಳುವಾದ್ಯ, ಭಜನೆ, ನಂದಿಕೋಲು, ಜಾನಪದ ಕಲಾ ತಂಡಗಳ ಪ್ರದರ್ಶನ ರಥೋತ್ಸವದ ಮೆರುಗು ಹೆಚ್ಚಿಸಿದವು. ಭಕ್ತರು ಉತ್ತತ್ತಿ, ಪೇಡಾ, ಬಾಳೆಹಣ್ಣು ರಥದ ಮೇಲೆ ಎಸೆದು ಭಕ್ತಿ ಸಮರ್ಪಿಸಿದರು.

    ಇದಕ್ಕೂ ಮುನ್ನ ಶನಿವಾರ ರಾತ್ರಿ ೯ಕ್ಕೆ ದೇವಸ್ಥಾನದಿಂದ ಪ್ರಮುಖ ಬೀದಿಗಳಲ್ಲಿ ದೇವರ ಪಲ್ಲಕ್ಕಿ ಮೆರವಣಿಗೆ ಸಾಗಿತು. ಭಾನುವಾರ ಬೆಳಗ್ಗಿನ ಜಾವ ದೇವಸ್ಥಾನ ಮೈದಾನಕ್ಕೆ ಆಗಮಿಸಿತು. ಲಕ್ಷಾಂತರ ಭಕ್ತರು ಸಾಲಿನಲ್ಲಿ ನಿಂತು ದೇವರಿಗೆ ಶಾಲು ಹೊದಿಸಿ ಭಕ್ತಿ ಸಮರ್ಪಿಸಿದರು. ದಾರಿಯುದ್ದಕ್ಕೂ ಪಟಾಕಿ ಸಿಡಿಸಿ ಸಂಭ್ರಮಿಸಿದರು.

    ವಾರದಿಂದ ನಡೆದ ಶ್ರೀ ಅಮರೇಶ್ವರ ಜಾತ್ರೆ ಭಾನುವಾರ ರಥೋತ್ಸವ ಮೂಲಕ ಸಂಪನ್ನಗೊಂಡಿತು. ರಾಜ್ಯ ಸೇರಿ ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶದ ಸಹಸ್ರಾರು ಭಕ್ತರು ಆಗಮಿಸಿ ಹರಕೆ ಸಲ್ಲಿಸಿ ದೇವರ ದರ್ಶನ ಪಡೆದರು. ಶಾಂತಿಯುತ ಜಾತ್ರೆಗೆ ತಾಲೂಕು ಆಡಳಿತ, ದೇವಸ್ಥಾನ ಸಮಿತಿ ಸದಸ್ಯರು, ಯುವಕರ ತಂಡದವರು ಸಾಥ್ ನೀಡಿದರು.

    ಪ್ರಮುಖರಾದ ಬಸವರಾಜ ದೇಶಮುಖ, ಕಲ್ಲಪ್ಪ ದೇಶಮುಖ, ಗೌರವ ದೇಶಮುಖ, ಸುನೀಲಕುಮಾರ ದೇಶಮುಖ, ಶಂಕರ ದೇಶಮುಖ, ಶರಣಪ್ಪ ಪಂಚಾಕ್ಷರಿ, ಶಿವರಾಜ ಅಲ್ಮಾಜೆ, ಶಿವಾನಂದ ಕನಕೆ, ರೇವಣಪ್ಪ ಜ್ಯಾಂತೆ, ಅಶೋಕ ಗಿರಣೆ , ಶರಣು ಪಾಟೀಲ್, ರವಿ ಬಂಬುಳಗೆ, ಶಂಕು ನಿಷ್ಪತೆ, ಅನೀಲ ಬೇಲೂರೆ, ಬಂಟಿ ದರ್ಬಾರೆ, ಕೇರಬಾ ಪವಾರ್, ದಯಾನಂದ ಘೂಳೆ, ಪಪ್ಪು ಜಾಂತೆ, ವೀರೇಶ ಅಲ್ಮಾಜೆ, ಅಮೀತ ಶಿವಪೂಜೆ, ಸಂಜುಕುಮಾರ ವಡೆಯರ್, ರಾಘವೇಂದ್ರ ಗೌಡ, ಲೋಕೇಶ ಭಾಲ್ಕೆ, ರತಿಕಾಂತ ಸ್ವಾಮಿ, ಮಲ್ಲಿಕಾರ್ಜುನ ಮೀಸೆ, ಅನೀಲ ಮೇತ್ರೆ, ಮಹೇಶ ಸೋರಳ್ಳಿ, ಡಾ.ಮಹೇಶ ಫುಲಾರಿ ಇತರರಿದ್ದರು.

    ಉತ್ಸವದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಬಂದೋಬಸ್ತ್ ಕಲ್ಪಿಸಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯನ್ನು ದೇವಸ್ಥಾನ ಕಮಿಟಿಯಿಂದ ಸನ್ಮಾನಿಸಲಾಯಿತು. ಸೋಮವಾರ ಎಪಿಎಂಸಿ ಸಭಾಂಗಣದಲ್ಲಿ ಬೆಳಗ್ಗೆ ಜಾನುವಾರು ಪ್ರದರ್ಶನ ಮತ್ತು ಬಹುಮಾನ ವಿತರಣೆ ಕಾರ್ಯಕ್ರಮ ಜರುಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts