More

    ಸಂಪೂರ್ಣ ಹಾಳಾಗಿವೆ ಹಳ್ಳಿ ರಸ್ತೆ

    ವಿಜಯವಾಣಿ ವಿಶೇಷ ಚಿಂಚೋಳಿ
    ಕ್ಷೇತ್ರದಲ್ಲಿನ ಗ್ರಾಮೀಣ ಭಾಗದ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ಜನರು ಜೀವ ಕೈಯಲ್ಲಿ ಹಿಡಿದು ತಿರುಗಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಜನಪ್ರತಿನಿಧಿಗಳು ಮಾತ್ರ ತಮಗೇನು ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಿದ್ದಾರೆ.
    ಗ್ರಾಮೀಣ ಪ್ರದೇಶದ ಬಹುತೇಕ ರಸ್ತೆಗಳು ಹದಗೆಟ್ಟಿದ್ದು, ವಾಹನ ಸವಾರರು ರಸ್ತೆಗಳಲ್ಲಿ ಸಂಚರಿಸಬೇಕಾದರೆ ಜೀವ ಕೈಯಲ್ಲಿ ಹಿಡಿದು ಓಡಾಡುವ ಪರಸ್ಥಿತಿಯಿದೆ. ಕೆಲ ರಸ್ತೆಗಳು ಮಳೆಗೆ ಹಾಳಾಗಿದ್ದರೆ, ಇನ್ನೂಳಿದ ಬಹುತೇಕ ರಸ್ತೆಗಳು ಇಲಾಖೆ ಅಧಿಕಾರಿಗಳ ನಿರ್ವಹಣೆ ಕೊರತೆಯಿಂದ ಹದಗೆಟ್ಟಿವೆ.
    ಹಳ್ಳಿಗಳಿಂದ ನಗರಗಳಿಗೆ ಸಂಪರ್ಕ ಕಲ್ಪಿಸುವ ದೇಗಲಮಡಿ ಕ್ರಾಸ್- ದೇಗಲಮಡಿ, ತುಮಕುಂಟಾ- ಹಸರಗುಂಡಗಿ, ಬೊಮ್ಮನಳ್ಳಿ- ಅಣವಾರ, ಮಿರಿಯಾಣ- ಕೃಷ್ಣಾಪುರ್, ಭೈರಂಪಳ್ಳಿ- ಭೈರಂಪಳ್ಳಿ ತಾಂಡಾ, ಕುಸರಂಪಳ್ಳಿಯಿಂದ ತಾಲೂಕಿನ ಗಡಿ, ರೋಡ್ ಕಲ್ಲೂರ್- ಸೋಮಲಿಂಗದಳ್ಳಿ, ಚತ್ರಸಾಲ- ನಿಡಗುಂದಾ, ಐನೋಳ್ಳಿ- ಚಂದ್ರಂಪಳ್ಳಿ ರಸ್ತೆಗಳು ಬಹುತೇಕ ಹಾಳಾಗಿವೆ. ಈ ಗ್ರಾಮಗಳ ಜನತೆ ತಾಲೂಕು ಕೇಂದ್ರಕ್ಕೆ ಬಂದು ಹೋಗುವುದಕ್ಕಾಗಿ ಆಯಾಸ ಪಡುವಂತಾಗಿದೆ.
    ಚಿಂಚೋಳಿ ಶಾಸಕ ಡಾ. ಅವಿನಾಶ ಜಾಧವ್ ಹಾಗೂ ಸೇಡಂ ಕ್ಷೇತ್ರದ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ ಅವರು ಅಭಿವೃದ್ಧಿ ಬಗ್ಗೆ ಕಳಕಳಿ ಹೊಂದಿದವರಾಗಿದ್ದಾರೆ. ಇತೀಚೆಗೆ ಸುರಿದ ಮಳೆಯಿಂದಾಗಿ ರಸ್ತೆಗಳು ಇನ್ನಷ್ಟು ಹಾಳಾಗಿವೆ. ಆದರೆ ಇಲಾಖೆ ಅಧಿಕಾರಿಗಳು ಮಾತ್ರ ಇಲ್ಲಿವರೆಗೂ ದುರಸ್ತಿ ಕಾರ್ಯಕ್ಕೆ ಮುಂದಾಗದಿರುವುದು ಜನರಲ್ಲಿ ಬೇಸರ ತರಿಸಿದರು. ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತು ಕ್ಷೇತ್ರದಲ್ಲಿ ಉತ್ತಮ ರಸ್ತೆಗಳ ನಿಮರ್ಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಒಕ್ಕೊರಲಿನ ಒತ್ತಾಯವಾಗಿದೆ.

    ಗ್ರಾಮೀಣ ರಸ್ತೆಗಳ ಸುಧಾರಣೆಗೆ ಆ್ಯಕ್ಷನ್ ಪ್ಲಾನ್ ಸಿದ್ಧವಾಗಿದ್ದು, ಮಳೆ ಬಿಡುವು ನೀಡಿದ ನಂತರ ತ್ವರಿತವಾಗಿ ರಸ್ತೆಗಳ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಲಾಗುವುದು. ದೇಗಲ್ಮಡಿ ರಸ್ತೆ ನವೀಕರಣಕ್ಕೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಶೀಘ್ರದಲ್ಲಿ ಕಾಮಗಾರಿ ಪ್ರಾರಂಭ ಆಗಲಿದೆ.

    ಮಹ್ಮದ್ ಅಹ್ಮದ್ ಹುಸೇನ್, ಜಿಲ್ಲಾ ಪಂಚಾಯಿತಿ ಉಪ ವಿಭಾಗ ಅಭಿಯಂತರ, ಚಿಂಚೋಳಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts