More

    ಸಂತರ ಸ್ಮರಣೆ ಶ್ರೇಷ್ಠ ಕಾರ್ಯ

    ದೇವರಹಿಪ್ಪರಗಿ: ಸಿದ್ಧೇಶ್ವರ ಶ್ರೀಗಳ ಶ್ರೇಷ್ಠ ಚಿಂತನೆಗಳು ಸಮಾಜಕ್ಕೆ ದಾರಿದೀಪವಾಗಿವೆ. ಆಧ್ಯಾತ್ಮಿಕ ದೀಪದೊಂದಿಗೆ ಜ್ಞಾನದ ಬೆಳಕು ಬೀರುತ್ತ ಉತ್ಕೃಷ್ಟ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದಾರೆ. ಇಂಥ ಸಂತ ಮಹಾತ್ಮರನ್ನು ಸ್ಮರಿಸುವುದೇ ಶ್ರೇಷ್ಠ ಕಾಯಕವಾಗಿದೆ ಎಂದು ಬಾಲಗಾಂವ ಗುರುದೇವಾಶ್ರಮದ ಸದ್ಗುರು ಅಮೃತಾನಂದ ಸ್ವಾಮಿಗಳು ಹೇಳಿದರು.

    ಸಮೀಪದ ಚಿಕ್ಕರೂಗಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಆಧ್ಯಾತ್ಮಿಕ ಪ್ರವಚನದಲ್ಲಿ ಅವರು ಆಶೀರ್ವಚನ ನೀಡಿದರು.

    ತಮ್ಮ ಜ್ಞಾನಾಮೃತದ ಮೂಲಕ ಇಡೀ ನಾಡಿಗೆ ಚಿರಪರಿಚಿತರಾದ ಸಿದ್ಧೇಶ್ವರ ಶ್ರೀಗಳ ಜೀವನ ಶೈಲಿ ಮಾದರಿಯಾಗಿದೆ. ಯಾವುದೇ ಆಸೆಗಳಿಗೆ ಬಲಿಯಾಗದೆ ಅತ್ಯಂತ ಸರಳ ಜೀವನಕ್ಕೆ ಮಾರು ಹೋಗಿ ಲೌಕಿಕ ಲಾಲಸೆ ಬಿಡಬೇಕು ಎಂಬ ತತ್ವ ತಿಳಿಸಿದವರಾಗಿದ್ದರು. ಶ್ರೀಗಳ ವಾಣಿ ಮನಕುಲಕ್ಕೆ ಶಾಂತಿ ಸೌಹಾರ್ದೆತೆ ಸಂದೇಶ ಸಾರುವ ಖಣಿಯಾಗಿದೆ. ಅವರ ಪ್ರತಿಯೊಂದು ವಿಚಾರಧಾರೆ ಇಂದಿನ ಜನಸಾಮಾನ್ಯರಿಗೆ ಮಾರ್ಗದರ್ಶಕವಾಗಿದೆ. ಅವರ ಉದಾತ್ತ ಚಿಂತನೆಗಳು ಬೆಳಕಾಗಿವೆ. ಇಂತಹ ಶ್ರೇಷ್ಠ ಸಂತರ ಜೀವನಾದರ್ಶ ನಮಗೆಲ್ಲ ಆದರ್ಶಪ್ರಾಯವಾಗಿದೆ ಎಂದರು.

    ಸಿದ್ಧೇಶ್ವರ ಸ್ವಾಮೀಜಿಗಳ ಸ್ಮರಣೆಗಾಗಿ ಜ.10 ರಿಂದ ಆರಂಭವಾದ ಆಧ್ಯಾತ್ಮಿಕ ಪ್ರವಚನ ಜ.25 ವರೆಗೆ ಬೆಳಗ್ಗೆ 6.30 ರಿಂದ 7.30 ರವರೆಗೆ ನಡೆಯಲಿದೆ ಎಂದರು.

    ಗ್ರಾಮದ ಹಿರಿಯರಾದ ಸಿದ್ದನಗೌಡ ಬಿರಾದಾರ, ಅಡಿವೆಪ್ಪ ಕೊಂಡಗೂಳಿ, ಸಿದ್ದಗೊಂಡಪ್ಪಗೌಡ ಪಾಟೀಲ, ಸಿದಣ್ಣ ಸಾಹುಕಾರ ಚಂಡಕಿ, ಸತೀಶ ಬಾಗಲಕೋಟ, ನಾಗಣ್ಣ ಮುಳಜಿ, ಬಸವರಾಜ ಕುಂಬಾರ, ಜವಾರ ದೇಶಪಾಂಡೆ, ಹುಸೇನಸಾಬ ಕೆಂಗನಾಳ, ಬೈರಪ್ಪ ಬೈರವಾಡಗಿ, ಗೋಲ್ಲಾಳ ಹಡಪದ, ಅಣ್ಣಪ್ಪ ಪೂಜಾರಿ, ಚನ್ನಪ್ಪ ಬನಸೋಡೆ, ಭೀಮರಾಯ ಪಾಸೋಡಿ, ದೇವಾನಂದ ಹೂಗಾರ, ವಿಠ್ಠಲ ನಾಟೀಕಾರ, ದೇವಾನಂದ ಬಾಗಲಕೋಟ, ಶಿವಶರಣರ ಹಡಪದ, ರಾವುತ ಏಳಕೋಟಿ, ಮೈಬು ಇನ್ಮಾದಾರ, ಸೋಮಣ್ಣ ಬಾಗಲಕೋಟ, ಅಕ್ಷಯಕುಮಾರ ಸಿಂದಗಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts