More

    ಸಂತರ ಆಧ್ಯಾತ್ಮಿಕ ನುಡಿ ಪಾಲಿಸಲು ಮುಂದಾಗಿ

    ಅಥಣಿ ಗ್ರಾಮೀಣ, ಬೆಳಗಾವಿ: ಕಾಯಕ ಮಾಡುವುದರಿಂದ ಪ್ರತಿಯೊಬ್ಬ ವ್ಯಕ್ತಿ ಆರ್ಥಿಕ, ಮಾನಸಿಕ ಹಾಗೂ ಶಾರೀರಿಕವಾಗಿ ಸಬಲರಾಗುತ್ತಾರೆ ಎಂದು ಝುಂಜರವಾಡದ ಬಸವರಾಜೇಂದ್ರ ಶರಣರು ಹೇಳಿದರು.

    ಅಥಣಿ ತಾಲೂಕಿನ ಸುಟ್ಟಟ್ಟಿ ಗ್ರಾಮದಲ್ಲಿ ದಸರಾ ಉತ್ಸವ ಅಂಗವಾಗಿ ಬುಧವಾರ ಜರುಗಿದ ಮುತ್ತೈದೆಯರಿಗೆ ಉಡಿ ತುಂಬುವುದು ಹಾಗೂ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.

    ಬದುಕಿನಲ್ಲಿ ಅನ್ಯರಿಗೆ ಕೆಡಕು ಬಯಸದೆ ಸಂತ, ಶರಣರ ಮತ್ತು ಆಧ್ಯಾತ್ಮಿಕ ನುಡಿಗಳನ್ನು ಪಾಲಿಸಬೇಕು. ಲಿಂಗ-ಜಂಗಮ ಮುಂದಿದ್ದಾಗ ಹಂಗು ಹರಿಯಬೇಕು ಎಂಬ ಬಸವಾದಿ ಶರಣರ ಮಾತುಗಳು ಪ್ರತಿಯೊಬ್ಬರಿಗೂ ದಾರಿದೀಪವಾಗಿವೆ ಎಂದರು.

    ಉದ್ಯಮಿ ಸದಾಶಿವ ಬುಟಾಳಿ ಮಾತನಾಡಿ, ಮನುಷ್ಯರಾದವರು ಒಳಿತು, ಕೆಡಕುಗಳ ಕುರಿತು ಸದಾಕಾಲ ಜಾಗೃತರಾಗಿರಬೇಕು. ಇಂದಿನ ಯುವ ಪೀಳಿಗೆ ಕೆಟ್ಟದಕ್ಕೆ ಹೆಚ್ಚು ಒತ್ತು ನೀಡುತ್ತಿದ್ದು, ಅದರಿಂದ ಹೊರಬರಬೇಕಿದೆ ಎಂದರು. ಮಹಾಲಕ್ಷ್ಮೀ ದೇವಿಗೆ ವಿಭಿನ್ನ ಅಲಂಕಾರ ಪೂಜೆ, ಧಾರ್ಮಿಕ ಕಾರ್ಯಕ್ರಮ ಜರುಗಿದವು. ಮುತ್ತೈದೆಯರಿಗೆ ಉಡಿ ತುಂಬಲಾಯಿತು. ಹೊನವಾಡದ ಬಾಬುರಾವ ಮಹಾರಾಜರು ಪ್ರವಚನ ನೀಡಿದರು. ಜಿಪಂ ಮಾಜಿ ಸದಸ್ಯ ಸಿದ್ದಪ್ಪ ಮುದಕಣ್ಣವರ ಮಾತನಾಡಿದರು. ಸಾಗರ ಪವಾರ, ಪ್ರವೀಣ ಪಾಟಣಕರ, ಮುತ್ತಪ್ಪ ಸವದಿ, ಪಾಂಡು ನಾಯಿಕ, ಸತ್ಯಪ್ಪ ಸವದಿ, ಪರಶುರಾಮ ಚಮಕೇರಿ, ಶಿಮಲಾ ಬುಟಾಳಿ, ಜಿಪಂ ಮಾಜಿ ಸದಸ್ಯೆ ಡಾ. ಸವಿತಾ ಪೂಜಾರಿ, ಅರುಣಾ ಮುದಕಣ್ಣವರ, ಪ್ರಭಾವತಿ ಪೂಜಾರಿ, ಸುನಂದಾ ಅವತಾಡೆ, ಸುರೇಖಾ ಚಿಪ್ಪಾಡಿ, ಮೀನಾಕ್ಷಿ ಪೂಜಾರಿ, ವೆಂಕಟೇಶ ಮಾನೋಜಿ, ರತನ ಅಂಬಾಜಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts