More

    ಸಂಘ, ಸಂಸ್ಥೆಗಳು ಸಮಾಜಮುಖಿಯಾಗಿರಲಿ

    ಹನಗೋಡು: ಸಂಘ, ಸಂಸ್ಥೆಗಳು ರಾಜಕೀಯ ಹೊರತಾಗಿ ಸೇವಾ ಮನೋಭಾವದಿಂದ ಸಮಾಜಮುಖಿ ಕೆಲಸ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಗ್ರಾಮ ಹಾಗೂ ಸಂಘದ ಅಭಿವೃದ್ಧಿಗೆ ಶ್ರಮಿಸುವಂತೆ ಶಾಸಕ ಎಚ್.ಪಿ. ಮಂಜುನಾಥ್ ತಿಳಿಸಿದರು.


    ಹನಗೋಡು ಹೋಬಳಿಯ ಯಮಗುಂಬ ಗ್ರಾಮದಲ್ಲಿ ಸೋಮವಾರ ಶ್ರೀ ಓಂಕಾರ ಬಸವ ಯುವಕ ಸಂಘವನ್ನು ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಸಂಘಗಳು ಉತ್ತಮ ಧ್ಯೇಯೋದ್ದೇಶಗಳನ್ನು ಇಟ್ಟುಕೊಂಡು ಸ್ಥಾಪನೆ ಮಾಡಿರುತ್ತಾರೆ. ನಂತರದಲ್ಲಿ ಸಂಘಟನೆಯ ಉದ್ದೇಶಗಳನ್ನೇ ಮರೆತು ದುರುಪಯೋಗಪಡಿಸಿಕೊಳ್ಳುವವರೇ ಹೆಚ್ಚಾಗಿದ್ದು, ಸಂಘಟನೆಯವರು ಸಮಾಜದಲ್ಲಿ ಅನ್ಯಾಯ ಕಂಡಾಗ, ಬಡವರಿಗೆ ನ್ಯಾಯ ಸಿಗದಿದ್ದಲ್ಲಿ ಪ್ರತಿಭಟಿಸುವ ಮೂಲಕ ಸರ್ಕಾರದ ಸೌಲಭ್ಯಗಳನ್ನು ದೊರಕಿಸಿಕೊಡಬೇಕು. ಆ ಮೂಲಕ ಬಡವರ ಸೇವೆಗೆ ಸಂಘ, ಸಂಸ್ಥೆಗಳು ನಿಲ್ಲಬೇಕು ಎಂದು ತಿಳಿಸಿದರು.


    ಗಾವಡಗೆರೆ ಗುರುಲಿಂಗ ಜಂಗಮದೇವ ಮಠದ ಶ್ರೀ ನಟರಾಜ ಸ್ವಾಮೀಜಿ ಮಾತನಾಡಿ, ಯುವ ಸಮುದಾಯವು ಗ್ರಾಮದ ಅಭಿವೃದ್ಧಿ ಹಾಗೂ ಸಣ್ಣಪುಟ್ಟ ಸಮಾಜಗಳ ಏಳಿಗೆ, ನಿರ್ಗತಿಕರು ಹಾಗೂ ಬಡಮಕ್ಕಳ ಆರ್ಥಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದರೊಂದಿಗೆ ಸರಕಾರದ ವಿವಿಧ ಯೋಜನೆಗಳನ್ನು ನಿರ್ಗತಿಕರಿಗೆ ತಲುಪಿಸುವ ಕಾರ್ಯಗಳಲ್ಲಿ ಮುಂದಾಗಬೇಕು ಎಂದರು.


    ಸಭೆಯಲ್ಲಿ ಮಾದಳ್ಳಿ ಮಠದ ಸಾಂಬಸದಾಶಿವ ಸ್ವಾಮೀಜಿ ಆಶೀರ್ವಚನ ನೀಡಿದರು. ಬಸವರಾಜಪ್ಪ, ಎಸ್.ಎಲ್.ಮಹದೇವಪ್ಪ, ರಾಜಣ್ಣ, ಸಿದ್ದಪ್ಪ, ನಿಂಗಪ್ಪ, ಶಂಭಪ್ಪ, ಚಂದ್ರಪ್ಪ, ಬೋರಪ್ಪ, ಜಲೇಂದ್ರ, ವೈ.ಸಿ. ಸೋಮಣ್ಣ ಸೇರಿದಂತೆ ಸಂಘದ ಪದಾಧಿಕಾರಿಗಳು ಗ್ರಾಮಸ್ಥರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts