More

    ಸಂಘಟಿತರಾದರೆ ದುರುಪಯೋಗಕ್ಕೆ ಕಡಿವಾಣ

    ಚಿಂತಾಮಣಿ: ಪ್ರಮಾಣ ಪತ್ರ ದುರುಪಯೋಗವಾಗುವುದನ್ನು ತಡೆಯಲು ಅಂಗವಿಕಲರು ಸಂಘಟಿತರಾಗಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಕೆ.ಎಂ.ರಾಜೇಂದ್ರಕುಮಾರ್ ಹೇಳಿದರು.

    ತಾಪಂ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ತಾಪಂ, ನಗರಸಭೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಅಂಗವಿಕಲ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆ ಶನಿವಾರ ಹಮ್ಮಿಕೊಂಡಿದ್ದ ಅಂಗವಿಕಲರ ದಿನದಲ್ಲಿ ಮಾತನಾಡಿದರು.

    ಕೆಲವರು ಪ್ರಮಾಣಪತ್ರ ದುರುಪಯೋಗವಾಗುತ್ತದೆ ಎಂದು ಮೌಖಿಕವಾಗಿ ಹೇಳಿದ್ದರು, ಲಿಖಿತವಾಗಿ ದೂರು ನೀಡುವಂತೆ ತಿಳಿಸಿದರೆ, ನಾಪತ್ತೆಯಾದರು. ಅಂಗವಿಲಕರು ಸಂಘಟನೆ ಮಾಡಿಕೊಂಡರೆ ದುರುಪಯೋಗವನ್ನು ನೀವೇ ಪತ್ತೆ ಮಾಡಬಹುದು ಎಂದರು.

    ಪ್ರಮಾಣ ಪತ್ರ ಪಡೆಯಲು ಈಗ ಜಿಲ್ಲಾ ಕೇಂದ್ರಕ್ಕೆ ತೆರಳಬೇಕಿಲ್ಲ. ತಾಲೂಕು ಕೇಂದ್ರಕ್ಕೆ ವೈದ್ಯರ ತಂಡ ಭೇಟಿ ನೀಡಲಿದ್ದು, ಪರೀಕ್ಷೆ ನಡೆಸಲಿದೆ, ಪ್ರಮಾಣಪತ್ರ ಪಡೆಯದವರ ಪಟ್ಟಿ ನೀಡುವಂತೆ ತಿಳಿಸಿದ್ದೇನೆ ಎಂದು ತಾಪಂ ಜಿ.ಆರ್.ಮಂಜುನಾಥ್ ಹೇಳಿದರು.

    ಸೌಲಭ್ಯಗಳು ಸಿಗದಿದ್ದರೆ ನೇರವಾಗಿ ನನಗೆ ಮಾಹಿತಿ ನೀಡುವಂತೆ ತಹಸೀಲ್ದಾರ್ ಡಿ.ಹನುಮಂತರಾಯಪ್ಪ ತಿಳಿಸಿದರು. ಅಂಗವಿಕಲ ಹಾಗೂ ಹಿರಿಯ ನಾಗರೀಕ ಸಬಲೀಕರಣ ಇಲಾಖೆಯ ಮಂಜುನಾಥ್ ಸರ್ಕಾರದಿಂದ ಸಿಗುವ ಸೌಲಭ್ಯಗಳ ಮಾಹಿತಿ ನೀಡಿದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಹೇಂದ್ರ, ನಗರಸಭೆ ಪ್ರಭಾರಿ ಪೌರಾಯುಕ್ತ ಉಮಾಶಂಕರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts