More

    ಸಂಘಟಿತರಾಗಿ ಹಕ್ಕು ಪಡೆಯಲು ಮುಂದಾಗಿ


    ಯಾದಗಿರಿ: ಶತಮಾನದಿಂದಲೂ ಅಧಿಕ ಸಮಯ ತುಳಿತಕ್ಕೆ ಒಳಗಾದ ಕುರುಬ ಸಮುದಾಯಕ್ಕೆ ಸಮಾನವಾದ ನ್ಯಾಯ ಸಿಗುತ್ತಿಲ್ಲ ಎಂದು ಕಾಗಿನೆಲೆ ಕನಕ ಗುರುಪೀಠ, ತಿಂಥಣಿ ಬ್ರಿಡ್ಜ್ನ ಸಿದ್ಧರಮಾನಂದ ಪುರಿ ಸ್ವಾಮಿಗಳು ಬೇಸರ ವ್ಯಕ್ತಪಡಿಸಿದರು.

    ಭಾನುವಾರ ತಾಲೂಕಿನ ಸೈದಾಪುರ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಕನಕ ಮೂತರ್ಿ ಲೋಕಾರ್ಪಣೆ ಹಾಗೂ ಕುರುಬರ ಜಾಗೃತಿ ಸಮಾವೇಶದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ, ಕೇವಲ ಕುರಿ, ಹೊಲ ಮನೆ ಮಾತ್ರ ಕುರುಬರ ಆಸ್ತಿಯಲ್ಲ, ಬದಲಿಗೆ ರಾಷ್ಟ್ರ ಮತ್ತು ರಾಜ್ಯದಲ್ಲಿ ನಮಗೆ ಸೀಗಬೇಕಾದ ಪಾಲು ದಕ್ಕಿಸಿಕೊಳ್ಳಬೇಕಿದೆ. ಕುರುಬ ಸಮಾಜದವರನ್ನು ದೇಶದಲ್ಲಿ ನಾನಾ ಕಡೆಗಳಲ್ಲಿ ಕಾಟು ನಾಯಕನ್, ಕುರುಬನ್, ಕುರುಮನ್ಸ್ ಸೇರಿ ಮುಂತಾದ ಹೆಸರುಗಳಿಂದ ಕರೆಯಲಾಗುತ್ತದೆ ಎಂದರು.

    ಪ್ರದೇಶ ಕುರುಬರ ಸಂಘದ ಅಧ್ಯಕ್ಷ ಎಂ.ವೀರಣ್ಣ ಮಾತನಾಡಿ, ಸಮಾಜದ ಜನರು ಆಂತರಿಕ ಭಿನ್ನಾಭಿಪ್ರಾಯಗಳನ್ನು ಬದಿಗಿರಿಸಿ ಸಂಘಟಿತರಾಗಿ ಹಕ್ಕುಗಳಿಗಾಗಿ ಹೋರಾಟ ಮಾಡಬೇಕಿದೆ. ಸಮಾಜದ ಮಕ್ಕಳ ಶಿಕ್ಷಣಕ್ಕಾಗಿ ಬಾಲಕ ಬಾಲಕಿಯರಿಗೆ ಪ್ರತ್ಯೇಕ ವಸತಿ ನಿಲಯಗಳ ವ್ಯವಸ್ಥೆ ಇದೆ. ಸಾಮಾಜಿಕ ಉಪಯುಕ್ತ ಕಾರ್ಯಗಳನ್ನು ಮಾಡುವವರಿಗೆ ಸಚಿವ ಬೈರತಿ ಸುರೇಶ ಅವರು ಶೇ.25ರಷ್ಟು ಧನ ಸಹಾಯವನ್ನು ವೈಯಕ್ತಿಕವಾಗಿ ಮಾಡುವುದಾಗಿ ತಿಳಿಸಿದ್ದಾರೆ. ಈ ಎಲ್ಲ ಸೌಲಭ್ಯ ಬಳಸಿಕೊಂಡು ಸಮಾಜದ ಪ್ರಗತಿಗೆ ಮುನ್ನುಡಿ ಬರೆಯಬೇಕಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts