More

    ಸಂಘಟನೆ ಮೂಲಕ ಸಮಸ್ಯೆಗಳಿಗೆ ಪರಿಹಾರ



    ಅಧ್ಯಕ್ಷ ನಂದಕುಮಾರ್ ಅಭಿಪ್ರಾಯ > ಜಿಲ್ಲಾ ಕೃಷಿ ಪರಿಕರ ಮಾರಾಟಗಾರರ ಸಂಘ ಉದ್ಘಾಟನೆ


    ಕುಶಾಲನಗರ: ಸಂಘಟನೆ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ಕೊಡಗು ಜಿಲ್ಲಾ ಕೃಷಿ ಪರಿಕರ ಮಾರಾಟಗಾರರ ಸಂಘದ ಅಧ್ಯಕ್ಷ ನಂದಕುಮಾರ್ ಹೇಳಿದರು.

    ಕೊಡಗು ಜಿಲ್ಲಾ ಕೃಷಿ ಪರಿಕರ ಮಾರಾಟಗಾರರ ಸಂಘವನ್ನು ಪಟ್ಟಣದ ಟಾಪ್ ಇನ್ ಟೌನ್ ಹೋಟೆಲ್ ಸಭಾಂಗಣದಲ್ಲಿ ಶನಿವಾರ ಉದ್ಘಾಟಿಸಿ ಮಾತನಾಡಿದ ನಂದಕುಮಾರ್, ಸಂಘಟನೆಯಲ್ಲಿ ಒಮ್ಮತದ ನಿರ್ಧಾರಗಳಿಂದ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಅನುಕೂಲವಾಗಲಿದೆ ಎಂದರು.

    ಕೊಡಗು ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಕೃಷಿ ಪರಿಕರ ಮಾರಾಟಗಾರರ ಸಂಘ ಅಸ್ತಿತ್ವಕ್ಕೆ ಬಂದಿದೆ. ಅದರ ಮೂಲಕ ಮಾರಾಟಗಾರರ ಸಮಸ್ಯೆಗಳನ್ನು ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತದೆ ಎಂದು ತಿಳಿಸಿದರು.

    ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಜಂಟಿ ಕೃಷಿ ನಿರ್ದೇಶಕಿ ಶಬಾನಾ ಎಂ.ಶೇಖ್ ಮಾತನಾಡಿ, ರೈತರು ಕೃಷಿ ಪರಿಕರಗಳ ಮಾರಾಟಗಾರರ ಮೇಲೆ ಇಟ್ಟಿರುವ ನಂಬಿಕೆ ಕಳೆದುಕೊಳ್ಳದಂತೆ ವ್ಯವಹರಿಸುವುದು ಅಗತ್ಯ. ಕೃಷಿ ಅತ್ಯಂತ ಸೂಕ್ಷ್ಮ ಕ್ಷೇತ್ರವಾಗಿರುವ ಕಾರಣ ಮಾರಾಟಗಾರರು ಜಾಗರೂಕರಾಗಿ ವ್ಯವಹರಿಸುವುದು ಅಗತ್ಯವಿದೆ. ಹಿಂದಿನ ಕಾಲಘಟ್ಟಕ್ಕೂ ಪ್ರಸ್ತುತ ಕಾಲಘಟ್ಟಕ್ಕೂ ತುಂಬಾ ವ್ಯತ್ಯಾಸವಿದ್ದು, ತಾಂತ್ರಿಕತೆ ಸುಧಾರಿಸಿಕೊಂಡು ವ್ಯವಹಾರಿಕವಾಗಿ ಹೆಚ್ಚು ಪರಿಣಾಮಕಾರಿಯಾಗಲು ಸಂಘಟನೆ ಸಹಕಾರಿಯಾಗಲಿದೆ ಎಂದರು.

    ಸಂಘದ ಉಪಾಧ್ಯಕ್ಷ ಶ್ರೀನಿವಾಸ್, ಖಜಾಂಚಿ ವೆಂಕಟೇಶ್, ಕಾರ್ಯದರ್ಶಿ ರಾಮಕೃಷ್ಣ, ನಿರ್ದೇಶಕರಾದ ಅಯ್ಯಪ್ಪ, ಅರವಿಂದ್, ಕೆ.ಸಿ.ಕಾವೇರಪ್ಪ, ತಾಂತ್ರಿಕ ಅಧಿಕಾರಿ ಗಿರೀಶ್ ವೇದಿಕೆಯಲ್ಲಿದ್ದರು. ಕೊಡಗು ಜಿಲ್ಲೆಯಾದ್ಯಂತ ವಿವಿಧ ಭಾಗಗಳ ಮಾರಾಟಗಾರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts