More

    ಸಂಗೀತ ಮಹಾವಿದ್ಯಾಲಯದಲ್ಲಿ ಮತದಾನ ಜಾಗೃತಿ ಜಾತಾ

    ಗದಗ: ಪ್ರಜಾಪ್ರಭುತ್ವದಲ್ಲಿ ಮತದಾನಕ್ಕೆ ಮಹತ್ವ ಸ್ಥಾನ ನೀಡಲಾಗಿದ್ದು  ಎಲ್ಲಾ ದಾನಕ್ಕಿಂತ ಶ್ರೇಷ್ಠವಾದ ದಾನ ಮತದಾನವಾಗಿದೆ ನಮ್ಮ ಮತ ದೇಶಕ್ಕೆ ಹಿತ ಪ್ರತಿಯೊಬ್ಬರು ಕಡ್ಡಾಯವಾಗಿ ತಪ್ಪದೇ ಮತದಾನ ಮಾಡಿ  ಎಂದು ಪ್ರಾಚಾರ್ಯ ಶ್ರೀಮತಿ ಡಾ. ಸುಮಿತ್ರ ಹಿರೇಮಠ ಅವರು  ಹೇಳಿದರು.
    ಡಾ ಪಿ ಜಿ ಎ ಸಮಿತಿಯ ಪಂಡಿತ್ ಪಂಚಾಕ್ಷರಿ ಗವಾಯಿಗಳವರ ಸಂಗೀತ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ  ಮತದಾನ ಜಾಗೃತಿ ಜಾತಾ ಕಾರ್ಯಕ್ರಮವನ್ನು ಉದ್ದೇಶಿಸಿ  ಅವರು ಮಾತನಾಡುತ್ತಾ ಯುವಕರು ವಿದ್ಯಾರ್ಥಿಗಳು ಪ್ರತಿಯೊಬ್ಬರು ಮತದಾನದ ಬಗ್ಗೆ ಜಾಗೃತರಾಗಬೇಕು ಮತದಾನದಿಂದ ಯಾರು ವಂಚಿತರಾಗದೆ  ಮತದಾನ ಮಾಡಿ ರಾಷ್ಟ್ರದ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಜಾತಿ ಮತ ಭಾಷೆ ಅಂತಸ್ತಿಗೆ ಒಳಗಾಗದೆ ಎಲ್ಲರೂ ಶಾಂತಿಯುತವಾಗಿ ಈ ಒಂದು ಪವಿತ್ರವಾದ ಕಾರ್ಯವನ್ನು ಮಾಡಬೇಕೆಂದು ಅವರು ಹೇಳಿದರು. ಮತದಾನ ಜಾಗೃತಿ ಜಾತಾ ಕಾರ್ಯಕ್ರಮವನ್ನು ಪರಮಪೂಜ್ಯ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿಗಳಾದ ಶ್ರೀ ಕಲ್ಲಯ್ಯ ಅಜ್ಜನವರು ಚಾಲನೆ ನೀಡಿದರು.
    ಡಾ. ನಾರಾಯಣ ಹಿರೇಕೊಳಚಿ, ಡಾ.  ಲತಾ ವೃತ್ತಿ ಕೊಪ್ಪ, ಡಾ, ಕೊಡಗಾನೂರ ಹನುಮಂತ್, ಪ್ರೊ ವಿ .ಎಂ. ಗುರುಮಠ, ಉಪನ್ಯಾಸಕ ಎನ್ ಎಂ ಶೇಕ್, ಶ್ರೀಮತಿ ಮಹಾಲಕ್ಷ್ಮಿ ಹೆಗಡೆ, ಮೃತ್ಯುಂಜಯ ಮಠದ, ಶರಣಪ್ಪ ಕಲ್ಬುರ್ಗಿ, ವಾ ಯರ್ ಮೂಲಿಮನಿ, ವಿ ಎಂ ಪಟ್ಟದಕಲ್, ವಿದ್ಯಾರ್ಥಿ ವಿದ್ಯಾರ್ಥಿನಿಯರಾದ ಕುಮಾರಿ ಶ್ರುತಿ ಪವನ್, ವಿಜಯಲಕ್ಷ್ಮಿ ಹಿರೇಮಠ , ರಂಜಿತಾ ಬಡಿಗೇರ್, ಕೃತಿ ಸುಲಾಕೆ, ಸಂಗೀತ ಡಿ ಎಂ, ಸುಮತಿ ಮುರುಗೋಡ್, ರಾಹುಲ್ ರಾಠೋಡ್, ಅನಗ ಕುಲಕರ್ಣಿ, ಯಶೋಧ ಮಾದರ್, ಸಂಜೆ ಅಕ್ಕಸಾಲಿ, ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts