More

    ಸಂಗೀತದಿಂದ ಮನಸ್ಸಿಗೆ ನೆಮ್ಮದಿ

    ಕಲಬುರಗಿ: ಬದುಕಲ್ಲಿ ಎಷ್ಟೇ ಜಂಜಾಟಗಳಿದ್ದರೂ ಸಂಗೀತ ಮನಸ್ಸಿಗೆ ನೆಮ್ಮದಿ ತಂದುಕೊಡುವ ಸಾಧನವಾಗಿದೆ. ಅಂಥ ಸಂಗೀತ ಕಲಾವಿದರ ಬದುಕು ಕರೊನಾದಿಂದ ಹೈರಾಣಾಗಿದೆ. ಬಡ ಕಲಾವಿದರಿಗೆ ಸರ್ಕಾರ ಪ್ರೋತ್ಸಾಹಧನ ನೀಡಬೇಕು ಎಂದು ಜಗದ್ಗುರು ಶ್ರೀ ಡಾ.ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ಸಲಹೆ ನೀಡಿದರು.
    ಸುಲಫಲ ಮಠದಲ್ಲಿ ಶನಿವಾರ ಆಯೋಜಿಸಿದ್ದ ಸಂಗೀತ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿದ್ದ ಅವರು, ಕರೊನಾದಂಥ ವಿಷಮ ಪರಿಸ್ಥಿತಿಯಲ್ಲಿ ಸರ್ಕಾರ ಇಂಥ ಬಡ ಸಂಗೀತ ಕಲಾವಿದರನ್ನು ಗುರುತಿಸಿ ಸಹಾಯಹಸ್ತ ಚಾಚಬೇಕಿದೆ. ಸುಲಫಲ ಮಠದಿಂದ ಧನಸಹಾಯ ಮತ್ತು ದಿನಸಿ ಕಿಟ್ ನೀಡುವ ಮೂಲಕ ಕಲಾವಿದರ ನೆರವಿಗೆ ಬರಲಾಗುವುದು ಎಂದರು.
    ಸೊನ್ನ ವಿರಕ್ತ ಮಠದ ಡಾ.ಶಿವಾನಂದ ಮಹಾಸ್ವಾಮೀಜಿ, ಚವದಾಪುರಿ ಹಿರೇಮಠದ ಶ್ರೀ ರಾಜಶೇಖರ ಶಿವಾಚಾರ್ಯ, ಚಿಂಚನಸೂರಿನ ಶ್ರೀ ಸಿದ್ಧಮಲ್ಲ ಶಿವಾಚಾರ್ಯ, ಹಾಗರಗುಂಡಗಿಯ ಶ್ರೀ ಶಿವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಡಾ.ಅರುಣಕುಮಾರ ಪಾಟೀಲ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಾಜು ಲೇಂಗಟಿ, ಚಿಂತಕ ವಿಜಯಕುಮಾರ ತೇಗಲತಿಪ್ಪಿ, ಸತೀಶ ಸಜ್ಜನಶೆಟ್ಟಿ, ಕಲ್ಯಾಣಕುಮಾರ ಶೀಲವಂತ ಉಪಸ್ಥಿತರಿದ್ದರು.
    ಸಂಗೀತ ಕಲಾವಿದರಾದ ಶಿವರುದ್ರಯ್ಯ ಸ್ವಾಮೀಜಿ ಗೌಡಗಾಂವ, ಅಣ್ಣಾರಾವ ಮತ್ತಿಮೂಡ, ಸಿದ್ದಣ್ಣ ದೇಸಾಯಿ ಕಲ್ಲೂರ, ಗುರುಲಿಂಗಯ್ಯ ಸ್ವಾಮಿ ಹಿತ್ತಲಶಿರೂರ, ಜಗದೀಶ ದೇಸಾಯಿ ಕಲ್ಲೂರ, ಸೂರ್ಯಕಾಂತ ಶಾಸ್ತ್ರಿ ಧೋತ್ತರಗಾಂವ, ವೀರುಪಾಕ್ಷಯ್ಯ ಗೌಡಗಾಂವ, ಗಂಗಾಧರ ಶಾಸ್ತ್ರಿ ಕೊಡೇಕಲ್ ಗಾನಸುಧೆ ಹರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts