More

    ಶ್ರೀ ಸಿದ್ಧಲಿಂಗ ಸ್ವಾಮೀಜಿ ಲಿಂಗೈಕ್ಯ

    ಶಹಾಬಾದ್: ರಾವೂರಿನ ಶ್ರೀ ಸಿದ್ಧಲಿಂಗೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ, ತ್ರಿವಿಧ ದಾಸೋಹಿ ಶ್ರೀ ಸಿದ್ಧಲಿಂಗ ಸ್ವಾಮಿಗಳು ಮಂಗಳವಾರ ರಾತ್ರಿ ಬೆಂಗಳೂರಿನಲ್ಲಿ ಲಿಂಗೈಕ್ಯರಾದರು. ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಬಳಲುತ್ತಿದ್ದ ಶ್ರೀಗಳಿಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.
    ರಾವೂರ ಗ್ರಾಮದಲ್ಲಿ 1957ರ ಜೂ.1ರಂದು ಸಿದ್ದಪ್ಪ, ಶಾಂತಮ್ಮ ಉದರದಲ್ಲಿ ಶ್ರೀ ಸಿದ್ಧಲಿಂಗ ಸ್ವಾಮಿಗಳು ಜನಿಸಿದರು. ಗ್ರಾಮದಲ್ಲಿ ಪ್ರಾಥಮಿಕ, ಚಿತ್ತಾಪುರದಲ್ಲಿ ಪ್ರೌಢ ಶಿಕ್ಷಣ ಮುಗಿಸಿದರು. ನಂತರ ಆಧ್ಯಾತ್ಮಿಕ ಅಧ್ಯಯನಕ್ಕಾಗಿ ಹಾನಗಲ್ಲ ಕುಮಾರ ಸ್ವಾಮಿಗಳು ಸ್ಥಾಪಿಸಿದ ಶಿವಯೋಗ ಮಂದಿರಕ್ಕೆ ತೆರಳಿದರು. ಹುಬ್ಬಳ್ಳಿಯ ಮೂರು ಸಾವಿರ ಮಠದಲ್ಲಿ ಬಿಎ ಸಂಸ್ಕೃತ ಪದವಿ ಪೂರ್ಣಗೊಳಿಸಿದರು. ಬನಾರಸ ವಿವಿಯಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದರು.
    1999ರ ಏ.10ರಂದು ನಾಗನೂರ ಮಠದ ಸಿದ್ದರಾಮ ಶಿವಯೋಗಿಗಳ ನೇತೃತ್ವದಲ್ಲಿ ಶ್ರೀ ಸಿದ್ಧಲಿಂಗ ಸ್ವಾಮಿಗಳ ಪಟ್ಟಾಧಿಕಾರ ಮಹೋತ್ಸವ ನಡೆಯಿತು. ಅಂದಿನ ಮುಖ್ಯಮಂತ್ರಿ ಜಿ.ಎಚ್. ಪಟೇಲ್ ಹಾಗೂ ಮುಖಂಡ ಬಾಬುರಾವ ಚಿಂಚನಸೂರ ಪಾಲ್ಗೊಂಡಿದ್ದರು. ಅಬ್ದುಲ್ ಅಜೀಜ್ ಸೇಠ್ ಅಧ್ಯಕ್ಷತೆ ವಹಿಸಿದ್ದರು. ಈ ಮೂಲಕ ಪಟ್ಟಾಧಿಕಾರ ಮಹೋತ್ಸವದಲ್ಲಿ ಸರ್ವಧರ್ಮ ಸಮಾನತೆ ಸಾರಲಾಯಿತು.
    ಕರ್ನ ಟಕದ ಯಾವುದೇ ಭಾಗದಲ್ಲಿ ಸಮ್ಮೇಳನ ನಡೆದರೆ ಭಾಗವಹಿಸಿ ತಮಗಿಷ್ಟವಾದ ಪುಸ್ತಕ ಖರೀದಿಸುತ್ತಿದ್ದರು. ನಂತರ ಎಲ್ಲ ಪುಸ್ತಕಗಳನ್ನು ಓದಿ ಮಕ್ಕಳಿಗೆ ಹೇಳುತ್ತಿದ್ದರು. ಶ್ರೀಗಳು ಸುಮಾರು 2000ಕ್ಕೂ ಹೆಚ್ಚು ಪುಸ್ತಕಗಳನ್ನು ತಮ್ಮ ಗ್ರಂಥಾಲಯದಲ್ಲಿ ಜೋಪಾನವಾಗಿ ಇರಿಸಿದ್ದಾರೆ.ತುಮಕೂರಿನ ಶಿವಕುಮಾರ ಸ್ವಾಮೀಜಿ, ಚಿತ್ರದುರ್ಗದ ಶ್ರೀ ಮುರುಘರಾಜೇಂದ್ರ ಸ್ವಾಮೀಜಿ, ಡಂಬಳದ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಬಿ.ಎಸ್. ಯಡಿಯೂರಪ್ಪ, ಗೋವಿಂದ ಕಾರಜೋಳ, ಕೆ.ಎಸ್. ಈಶ್ವರಪ್ಪ, ಡಾ. ಮಲ್ಲಿಕಾಜರ್ುನ ಖಗರ್ೆ, ಪ್ರತಾಪ ಸಿಂಹ, ರಾಜೀವ್ ದೀಕ್ಷಿತ್, ಹುಲಿಕಲ್ ನಟರಾಜ ಸೇರಿ ಅನೇಕ ಗಣ್ಯರು ಶ್ರೀಮಠಕ್ಕೆ ಭೇಟಿ ನೀಡಿ ಶ್ರೀಗಳೊಂದಿಗೆ ಸಮಾಲೋಚನೆ ನಡೆಸಿದ್ದರು.


    ಭೇದವಿಲ್ಲದೆ ಎಲ್ಲರಿಗೂ ಲಿಂಗ ದೀಕ್ಷೆರಾವೂರ, ಕಮರವಾಡಿ ಸೇರಿ ವಿವಿಧೆಡೆ ಸಂಚರಿಸಿ ಯಾವುದೇ ಭೇದ- ಭಾವವಿಲ್ಲದೆ ಎಲ್ಲರಿಗೂ ಲಿಂಗ ದೀಕ್ಷೆ ನೀಡಿದ್ದರು. ಸಮಾಜದ ಅನೇಕರಿಂದ ಟೀಕೆಗಳನ್ನು ಎದುರಿಸಿದರೂ ತಮ್ಮ ಪಟ್ಟು ಬಿಡದೆ ಕೆಲಸ ಮುಂದುವರಿಸಿದರು. ಮದ್ಯ, ಮಾಂಸ ತ್ಯಜಿಸಿ ಸಾತ್ವಿಕ ಆಹಾರ ಸೇವಿಸಿದರೆ ನಾನು ನಿಮ್ಮೊಂದಿಗೆ ಸಹ ಭೋಜನ ಮಾಡುವುದಾಗಿ ದಲಿತರಿಗೆ ಹೇಳಿದ್ದರು. ಅಲ್ಲದೆ ಮುಂದಿನ ದಿನಗಳಲ್ಲಿ ದಲಿತ ಕೇರಿಯ ಯಾವುದೇ ಕಾರ್ಯಕ್ರಮಕ್ಕೂ ತಪ್ಪದೆ ಭಾಗವಹಿಸುತ್ತಿದ್ದರು ಎಂದು ಹಲವರು ಸ್ಮರಿಸುತ್ತಾರೆ.


    ಸಾಮಾಜಿಕ, ಶೈಕ್ಷಣಿಕ ಸೇವೆಸಿದ್ಧಲಿಂಗೇಶ್ವರ ವಿದ್ಯಾಬಿವೃದ್ಧಿ ಸಂಸ್ಥೆಯಡಿ ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜುಗಳನ್ನು ಆರಂಭಿಸುವ ಮೂಲಕ ಗ್ರಾಮೀಣ ಭಾಗದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿದ್ದರು. ಅಲ್ಲದೆ ಕೆಎಎಸ್, ಐಎಎಸ್, ಐಪಿಎಸ್ ಸೇರಿ ಸ್ಪಧರ್ಾತ್ಮಕ ಪರೀಕ್ಷೆಗಳಿಗೆ ವಿದ್ಯಾಥರ್ಿಗಳಿಗೆ ಪ್ರೋತ್ಸಾಹ ನೀಡಿದ್ದರು. ಗುಂಡಣ್ಣ ಬಾಳಿ ನೇತೃತ್ವದಲ್ಲಿ ವಿವಿಧೆಡೆ ಶಾಲಾ, ಕಾಲೇಜು ಸ್ಥಾಪಿಸಿದರು. ಶಾಲಾ ಮಕ್ಕಳಿಗೆ ದೇಶಿ ಆಟವಾದ ಮಲ್ಲಗಂಬವನ್ನು ಪರಿಚಯಿಸಿದರು. ಜತೆಗೆ ವಿವಿಧ ಸಾಮಾಜಿಕ ಕಾರ್ಯಗಳಲ್ಲೂ ತಮ್ಮನ್ನು ತೊಡಗಿಸಿಕೊಂಡರು.

    ಶ್ರೀ ಸಿದ್ಧಲಿಂಗ ಸ್ವಾಮಿಗಳು ಜೀವನದುದ್ದಕ್ಕೂ ಸರಳ ಜೀವನ ನಡೆಸಿದವರಾಗಿದ್ದಾರೆ. ಭಕ್ತರನ್ನು ದುಶ್ಚಟದಿಂದ ದೂರ ಮಾಡುವುದಕ್ಕಾಗಿ ಹಗಲಿರುಳು ಶ್ರಮಿಸಿದ್ದಾರೆ. ಶ್ರೀಶೈಲಕ್ಕೆ ಪಾದಯಾತ್ರೆ ಮೂಲಕ ಸಾಗಿ, ಅಕ್ಕಮಹಾದೇವಿಯ ಐಕ್ಯ ಸ್ಥಳದಲ್ಲಿ ಲಿಂಗಪೂಜೆ ನೆರವೇರಿಸಿದರು. ದೀನ- ದಲಿತರ ಬದುಕಿಗೆ ಆಶಾಕಿರಣವಾಗಿದ್ದರು.
    | ಶ್ರೀ ಸಿದ್ಧಲಿಂಗ ಶಿವಾಚಾರ್ಯರು, ಮುಗುಳನಾಗಾಂವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts