More

    ಶ್ರೀ ಭಗೀರಥ ರಥಯಾತ್ರೆ ಮೆರವಣಿಗೆ ಅದ್ದೂರಿ

    ಚಿತ್ರದುರ್ಗ: ಶ್ರೀ ಭಗೀರಥ ಭಾರತ ಜನಕಲ್ಯಾಣ ರಥಯಾತ್ರೆ ಭಾನುವಾರ ಕೋಟೆನಗರಿ ಪ್ರವೇಶಿಸಿತು. ದಾವಣಗೆರೆ ರಸ್ತೆ ಮಾರ್ಗವಾಗಿ ಯೂನಿಯನ್ ಪಾರ್ಕ್ ಬಳಿ ಆಗಮಿಸಿದ ವೇಳೆ ಉಪ್ಪಾರ ಸಮಾಜದಿಂದ ಅದ್ದೂರಿಯಾಗಿ ಸ್ವಾಗತಿಸಲಾಯಿತು.

    ಅಲಂಕೃತ ಸಾರೋಟಿನೊಳಗೆ ಶ್ರೀ ಭಗೀರಥ ಮಹರ್ಷಿ ವಿಗ್ರಹ, ಜೊತೆಗೆ ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ ಆಸೀನರಾಗಿದ್ದರು. ಕುಂಭ ಹೊತ್ತು ಮೆರವಣಿಗೆಯಲ್ಲಿ ಸಾಗಿದ ನೂರಾರು ಮಹಿಳೆಯರು ಗಮನಸೆಳೆದರು. ವಿವಿಧ ಜನಪದ ಕಲಾತಂಡಗಳು ಮೆರುಗು ನೀಡಿದವು.

    ಸಮಾಜದ ಯುವಕರು, ಮುಖಂಡರು ದಾರಿಯುದ್ದಕ್ಕೂ ಜೈ ಉಪ್ಪಾರ, ಜೈ ಜೈ ಉಪ್ಪಾರ ಎಂದು ಜಯಘೋಷ ಮೊಳಗಿಸಿ ಸಂಭ್ರಮಿಸಿದರು. ಅದೇ ಹೆಸರಿನ ಶಾಲು ಹಾಕಿಕೊಂಡಿದ್ದರು.

    ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗದಿಂದ ಆರಂಭವಾದ ರಥಯಾತ್ರೆ ಸಂತೇಪೇಟೆ, ಬಿ.ಡಿ.ರಸ್ತೆ, ಕಿತ್ತೂರು ರಾಣಿ ಚನ್ನಮ್ಮ, ಮಹಾವೀರ, ವಾಸವಿ, ಗಾಯತ್ರಿ ವೃತ್ತದ ಮಾರ್ಗವಾಗಿ ಸಂಚರಿಸಿದ ನಂತರ ಉಮಾಪತಿ ಕಲ್ಯಾಣ ಮಂಟಪ ತಲುಪಿತು.

    ಉಪ್ಪಾರ ಸಮಾಜದ ಜನಜಾಗೃತಿಗಾಗಿ ಹರೀಶ್ ಮೆಹತೊ ಚೌಹಾಣ್ ಮತ್ತು ತಂಡದ ನೇತೃತ್ವದಲ್ಲಿ ಯಾತ್ರೆ ಆರಂಭವಾಗಿದ್ದು, ಆಂಧ್ರ ಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಗುಜರಾತ್ ಸೇರಿ ವಿವಿಧ ರಾಜ್ಯಗಳಲ್ಲಿ ಸಂಚರಿಸಿ, ಈಚೆಗೆ ಕರ್ನಾಟಕ ಪ್ರವೇಶಿಸಿತ್ತು. 2024ರ ಫೆಬ್ರವರಿ ತಿಂಗಳಲ್ಲಿ ನವದೆಹಲಿಯ ರಾಮಲೀಲಾ ಮೈದಾನ ತಲುಪಲಿದೆ.

    ಶ್ರೀ ಭಗೀರಥ ಜಿಲ್ಲಾ ಉಪ್ಪಾರ ಸಮಾಜದ ಅಧ್ಯಕ್ಷ ಎನ್.ವೀರೇಶ್, ಗೌರವಾಧ್ಯಕ್ಷ ಎಸ್.ನಾಗರಾಜ್, ಪದಾಧಿಕಾರಿಗಳಾದ ಎಲ್.ಮಹೇಶ್, ಆರ್.ಮೂರ್ತಿ, ಎಚ್.ಅಂಜಪ್ಪ, ಸಿದ್ದಪ್ಪ, ತಿಪ್ಪೇಸ್ವಾಮಿ, ಬಾಯ್ಲರ್ ರವಿ, ಬಸವರಾಜು, ವೆಂಕಟೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts