More

    ಶ್ರೀ ಪ್ರಸನ್ನಾಂದಪುರಿ ಶ್ರೀಗಳ ಹೋರಾಟದಿಂದ ಮೀಸಲಾತಿ ಹೆಚ್ಚಳ


    ಶಾಸಕ ಅನಿಲ್ ಚಿಕ್ಕಮಾದು ಶ್ಲಾಘನೆ

    ಚ್.ಡಿ.ಕೋಟೆ: ಶ್ರೀ ಪ್ರಸನ್ನಾಂದಪುರಿ ಸ್ವಾಮೀಜಿ ಅವರ 242 ದಿನಗಳ ಸುದೀರ್ಘ ಹೋರಾಟದಿಂದ ಎಸ್ಸಿ, ಎಸ್ಟಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಳವಾಗಲು ಕಾರಣವಾಯಿತು ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.


    ಪಟ್ಟಣದ ತಾಲೂಕು ಆಡಳಿತ ಸೌಧದ ಆವರಣದಲ್ಲಿ ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.


    ಪ್ರಸನ್ನಾಂದಪುರಿ ಸ್ವಾಮೀಜಿ ಅವರ ಹೋರಾಟಕ್ಕೆ ಮಣಿದ ಸರ್ಕಾರ ಮೀಸಲಾತಿ ಹೆಚ್ಚಳ ಮಾಡಿದೆ. ಡಾ.ಅಂಬೇಡ್ಕರ್ ಸಂವಿಧಾನ ಬರೆಯದಿದ್ದರೆ ನಮಗೆ ಮೀಸಲಾತಿ ಸಿಗುತ್ತಿರಲಿಲ್ಲ. ಮೀಸಲಾತಿ ಹೆಚ್ಚಳದಿಂದ ನಮಗೆ ಮತ್ತು ನಮ್ಮ ಮಕ್ಕಳಿಗೆ ಸರ್ಕಾರಿ ನೌಕರಿ ಸಿಗಲು ಬಹಳ ಅನುಕೂಲವಾಗಲಿದೆ. ತಾಲೂಕಿನ ಅಭಿವೃದ್ಧಿಯ ಜತೆಗೆ ಸಮಾಜದ ಅಭಿವೃದ್ಧಿಗೂ ಸಹ ನನ್ನ ಮನಸ್ಸು ಸದಾ ಹಾತೋರಿಯುತ್ತದೆ. ನನ್ನ ತಂದೆಯವರು ಶಾಸಕರಾಗಿದ್ದಾಗ ತಾಲೂಕಿನ ಅಭಿವೃದ್ಧಿ ಬಗ್ಗೆ ಕಾಳಜಿ ಇಟ್ಟುಕೊಂಡು ಕೆಲಸ ಮಾಡಿದರು. ಅವರ ಮಾರ್ಗದಲ್ಲಿ ನಾನು ನಡೆಯುತ್ತೇನೆ ಎಂದರು.


    ಸರ್ಕಾರ ವತಿಯಿಂದ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಸರಳವಾಗಿ ಆಚರಣೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಅದ್ದೂರಿಯಾಗಿ ಜಯಂತಿ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಮಾಡಬೇಕೋ ಅಥವಾ ತಾಲೂಕಿನಲ್ಲಿ ಮಾಡಬೇಕು ಎಂದು ಸಮಾಜದ ಮುಖಂಡರ ಜತೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.


    ತಹಸೀಲ್ದಾರ್ ರತ್ನಾಂಬಿಕಾ, ಗ್ರೇಡ್ 2 ತಹಸೀಲ್ದಾರ್ ಸಣ್ಣರಾಮಪ್ಪ, ಇಒ ರಾಜೇಶ್ ಜೆರಾಲ್ಡ್, ನಾಯಕ ಸಮಾಜದ ತಾಲೂಕು ಅಧ್ಯಕ್ಷ ಎಂ.ಸಿ.ದೊಡ್ಡನಾಯಕ, ಮುಖಂಡರಾದ ಜಯಪ್ರಕಾಶ್, ಕೆ.ಚಿಕ್ಕವೀರ ನಾಯಕ, ಶಂಭುಲಿಂಗನಾಯಕ, ಎಚ್.ಸಿ.ಮಂಜುನಾಥ್, ಮಹಾದೇವ ನಾಯಕ, ರಾಜನಾಯಕ, ನಾಗರಾಜು, ಜವರನಾಯಕ, ಪುಟ್ಟ ಬಸವ ನಾಯಕ, ಚಾಕಹಳ್ಳಿ ಕೃಷ್ಣ, ಪುರದಕಟ್ಟೆ ಬಸವರಾಜು, ಚಂದ್ರಿಕಾ ದೊರೆಸ್ವಾಮಿ, ಪರಶಿವಮೂರ್ತಿ, ನಾಗನಾಯಕ, ಅಧಿಕಾರಿಗಳಾದ ಉದಯಕುಮಾರ್, ರಂಗಸ್ವಾಮಿ, ಆಶಾ, ಸುರೇಶ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts