More

    ಶ್ರದ್ಧೆಯಿಂದ ನಿತ್ಯ ಅಧ್ಯಯನದಲ್ಲಿ ತೊಡಗಿ

    ಕುಲಗೋಡ: ವಿದ್ಯಾರ್ಥಿಗಳು ದೇಶದ ಸಂಪತ್ತು. ಶಿಸ್ತು&ಶ್ರದ್ಧೆಯಿಂದ ಅಧ್ಯಯನ ಮಾಡಿ ಯಶಸ್ಸು ಗಳಿಸಿ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್​ ಕುಮಾರ್​ ಸಿಂಗ್​ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

    ಸಮೀಪದ ಕೌಜಲಗಿ ಗ್ರಾಮದಲ್ಲಿ ಕರ್ನಾಟಕ ಪಬ್ಲಿಕ್​ ಶಾಲೆಯ ಕನ್ನಡ ಗಂಡು, ಹೆಣ್ಣು ಮಕ್ಕಳ, ಉರ್ದು ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳಿಗೆ ಶುಕ್ರವಾರ ಭೇಟಿ ನೀಡಿ ಮಾತನಾಡಿ, ವಿದ್ಯಾರ್ಥಿಗಳಿಗೆ ಕಠಿಣ ವೆನಿಸುವ ವಿಷಯಗಳ ಬಗ್ಗೆ ಹೆಚ್ಚಿನ ಆಸಕ್ತಿ ಮೂಡಿಸಿಕೊಳ್ಳಬೇಕು. ಗಣಿತ, ವಿಜ್ಞಾನ ವಿಷಯಗಳ ಕುರಿತು ವಿದ್ಯಾರ್ಥಿಗಳು ಹೆಚ್ಚಿನ ಅಧ್ಯಯನ ಮಾಡಬೇಕು. ವಿಷಯಗಳು ಕಠಿಣವೆನಿಸಿದಾಗ ಶಿಕ್ಷಕರ ಮಾರ್ಗದರ್ಶನ ಪಡೆಯಬೇಕು ಎಂದರು.

    ಕೌಜಲಗಿ ಭಾಗದ ಪರವಾಗಿ ಸ್ಥಳಿಯ ಕನ್ನಡ ಕೌಸ್ತುಭದ ಅಧ್ಯಕ್ಷ ಡಾ.ರಾಜು ಕಂಬಾರ ಅವರು, ಕೌಜಲಗಿ ಭಾಗದ ಸುಮಾರು 40 ಗ್ರಾಮಗಳಿಗೆ ಶೈಕ್ಷಣಿಕವಾಗಿ ಅನುಕೂಲವಾಗಲು ಹೋಬಳಿ ಕೇಂದ್ರವಾದ ಕೌಜಲಗಿ ಪಟ್ಟಣದಲ್ಲಿ ಹೊಸ ಬಿಇಒ ಕಚೇರಿ ಸ್ಥಾಪನೆ ಮಾಡಲು ಮನವಿ ಮಾಡಿಕೊಂಡರು.

    ಧಾರವಾಡ ಹೆಚ್ಚುವರಿ ಆಯುಕ್ತೆ ಜಯಶ್ರೀ ಸಿಂತ್ರೆ, ಮೂಡಲಗಿ ಬಿಇಒ ಅಜಿತ ಮನ್ನಿಕೇರಿ, ಗೋಕಾಕ ಬಿಇಒ ಜಿ.ಬಿ.ಬಳಗಾರ, ತಾಪಂ ಅಧಿಕಾರಿ ಮುರಳೀಧರ ದೇಶಪಾಂಡೆ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂದ ಅಧ್ಯಕ್ಷ ಸಿದ್ರಾಮ ಲೋಕನ್ನವರ, ಎ.ಬಿ.ಮಲಬನ್ನವರ, ಚಿಕ್ಕೋಡಿ ವಿಷಯ ಪರಿವೀಕ್ಷಕ ಅರಿಹಂತ ಬಿರಾದಾರ, ಬಿಂಗೇರಿ, ಸಿಆರ್​ಪಿ ವಿಠ್ಠಲ ಮಿಲ್ಲಾನಟ್ಟಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts