More

    ಶೋಚನೀಯ ಸ್ಥಿತಿಯಲ್ಲಿ ಅಸಹಾಯಕ ಕುಟುಂಬ!

    ಅಂಕೋಲಾ: ತಾಲೂಕಿನ ಹಿಲ್ಲೂರು ಗ್ರಾಮದಲ್ಲಿ ಕುಟುಂಬವೊಂದು ಶೋಚನೀಯ ಸ್ಥಿತಿಯಲ್ಲಿದ್ದು, ಅಹಾಯಕ್ಕೆ ಅಂಗಲಾಚುತ್ತಿರುವುದು ಹೃದಯ ಕಲುಕುವಂತಿದೆ.

    ತಾಲೂಕು ಕೇಂದ್ರದಿಂದ 30 ಕಿ.ಮೀ. ದೂರದಲ್ಲಿರುವ ತಾರಾ ಯಶ್ವಂತ ಹುಲಸ್ವಾರ ಅವರ ಕುಟುಂಬವೇ ದಯನೀಯ ಸ್ಥಿತಿಯಲ್ಲಿ ಜೀವನ ನಡೆಸುತ್ತಿದೆ. ತಾರಾ ಹುಲಸ್ವಾರ, ಯಶ್ವಂತ ಹುಲಸ್ವಾರ ದಂಪತಿಗೆ ಮಕ್ಕಳಿಲ್ಲದಿದ್ದರೂ ಅನ್ಯೋನ್ಯವಾಗಿ ಜೀವನ ನಡೆಸುತ್ತಿದ್ದರು. ಹೊನ್ನಾವರದಲ್ಲಿರುವ ತಾರಾ ಅವರ ತಾಯಿ ಮತ್ತು ಬುದ್ಧಿಮಾಂದ್ಯ ಸಹೋದರಿಯನ್ನು ಮನೆಗೆ ಕರೆದುಕೊಂಡು ಬಂದು ತಾವೇ ದುಡಿದ ಕೂಲಿಯಲ್ಲಿ ಜೋಪಾನ ಮಾಡಿಕೊಂಡು ಬಂದಿದ್ದರು. ದುಸ್ವಪ್ನ ಎಂಬಂತೆ ಒಂದೂವರೆ ವರ್ಷಗಳ ಹಿಂದೆ ತಾರಾ ಹುಲಸ್ವಾರ ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ಜೀವನ್ಮರಣ ಸ್ಥಿತಿಯಲ್ಲಿದ್ದಾರೆ. ಇನ್ನು ಈ ಕುಟುಂಬಕ್ಕೆಲ್ಲ ಆಕೆಯ ಪತಿಯೇ ಆಧಾರ ಸ್ತಂಭವಾಗಿದ್ದರು. ಆದರೆ, ಮನೆಯ ಪರಿಸ್ಥಿತಿ ಬಗ್ಗೆ ಬೇಸತ್ತ ಯಶ್ವಂತ ಹುಲಸ್ವಾರ ಮದ್ಯ ವ್ಯಸನಿಯಾದರು. ಹೀಗಾಗಿ ಅವರ ಕುಟುಂಬ ನಿರ್ವಹಣೆಗೆ ಆಧಾರವೇ ಇಲ್ಲವಾಗಿದೆ.

    ಬೆಳಕಿಲ್ಲದ ಮನೆ: ಇವರ ಮನೆಗೆ ವಿದ್ಯುತ್ ವ್ಯವಸ್ಥೆ ಕೂಡ ಇಲ್ಲ. ಕತ್ತಲಲ್ಲೇ ಜೀವನ ಸಾಗಿಸುವಂತಾಗಿದೆ. ಇನ್ನು ಜೀವನಕ್ಕೆ ಆಸರೆಯಾಗಿದ್ದ ಪಡಿತರ ಕೂಡ ನಿಂತಿದೆ. ತಂಬ್ ಸ್ಕ್ಯಾನ್ ಪದ್ಧತಿ ಬಂದಾಗಿನಿಂದ ಇವರ ಪಡಿತರ ಪೂರೈಕೆ ಬಂದ್ ಆಗಿದೆ. ಕೇಂದ್ರಕ್ಕೆ ತೆರಳಿ ಸಮಸ್ಯೆ ಸರಿಪಡಿಸಿಕೊಳ್ಳಲು ಕುಟುಂಬಸ್ಥರಲ್ಲಿ ಅಷ್ಟೊಂದು ಜ್ಞಾನವಿಲ್ಲ. ಮನೆಯೊಡೆಯ ಮಾನಸಿಕವಾಗಿ ಕುಂದಿದ್ದು, ಮನೆ ಹಿಡಿದು ಕೂತಿದ್ದಾನೆ. ಹೀಗಾಗಿ ಈ ಕುಟುಂಬ ಕಣ್ಣೀರಲ್ಲಿ ಕೈತೊಳೆಯುತ್ತಿದೆ ಎನ್ನುತ್ತಾರೆ ಸ್ಥಳೀಯರು. ಸಂಬಂಧಿಸಿದ ಅಧಿಕಾರಿಗಳು ಈ ನೊಂದ ಕುಟುಂಬದ ಸಮಸ್ಯೆಗೆ ಪರಿಹಾರ ಒದಗಿಸಲು ಮುಂದಾಗಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.

    ಸಹಾಯಕ್ಕೆ ಸಂರ್ಪಸಿ: ಸಹಾಯ ಮಾಡಲಿಚ್ಛಿಸುವವರು ತಾರಾ ಯಶ್ವಂತ ಹುಲಸ್ವಾರ, ಕೆ.ವಿ.ಜಿ. ಬ್ಯಾಂಕ್, ಶಾಖೆ ಹಿಲ್ಲೂರು, ಖಾತೆ ಸಂಖ್ಯೆ: 17092016134, ಐ.ಎಫ್.ಎಸ್. ಸಿ. ಕೋಡ್: ಓಎಆ0009003 ಖಾತೆಗೆ ಹಣ ಸಂದಾಯ ಮಾಡಬಹುದು. ಮಾಹಿತಿಗಾಗಿ ನೊಂದ ಕುಟುಂಬದ ಪಕ್ಕದ ಮನೆಯವರನ್ನು ಮೊ.ಸಂಖ್ಯೆ. 9449368893 ಸಂರ್ಪಸಬಹುದು.

    ಧಗ್ರಾ ಯೋಜನೆ ಆಸರೆ
    ಅಕ್ಕ-ಪಕ್ಕದವರು ಸಾಧ್ಯವಾದಷ್ಟು ನೆರವು ನೀಡುತ್ತಿದ್ದರು. ಆದರೆ, ಜೀವನ ನಿರ್ವಹಣೆ ಕಷ್ಟವಾಗಿತ್ತು. ಇದನ್ನು ಗಮನಿಸಿದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಒಕ್ಕೂಟದ ಪದಾಧಿಕಾರಿ ದೇವಾಂಗಿನಿ ನಾಯಕ ಅವರು ಸ್ಥಳೀಯ ಗ್ರಾ.ಪಂ., ಊರಿನ ಕೆಲ ಗಣ್ಯರಿಗೆ ಈ ವಿಷಯ ತಿಳಿಸಿದ್ದರಿಂದಾಗಿ ಗ್ರಾ.ಪಂ.ನವರು ತಾರಾ ಹುಲಸ್ವಾರ ಅವರ ಚಿಕಿತ್ಸೆಗೆ 4,999 ರೂ. ನೀಡಿದ್ದರು. ಈಗ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ತುರ್ತಾಗಿ 10 ಸಾವಿರ ರೂ. ಚೆಕ್ ನೀಡಿ ಕುಟುಂಬಕ್ಕೆ ಆಸರೆಯಾಗಿದ್ದಾರೆ. ಪಿ.ಡಿ.ಒ. ಮಂಜುನಾಥ ಟಿ.ಸಿ., ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ನಾಗರಾಜ ನಾಯ್ಕ, ಗ್ರಾ.ಪಂ. ಸದಸ್ಯ ಜಗದೀಶ ನಾಯಕ, ಸ್ಥಳೀಯರಾದ ಮಾರುತಿ ನಾಯ್ಕ, ಶಾಂತಾ ನಾಯ್ಕ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

    ತಾರಾ ಗಾಂವಕರ ಅವರಿಗೆ ಕ್ಯಾನ್ಸರ್ ಇರುವುದರಿಂದ ಅವರ ಖರ್ಚಿಗಾಗಿ ಮಾಸಿಕ 1000 ರೂ. ಬರುವಂತೆ ಪ್ರಯತ್ನಿಸಲಾಗುವುದು. ಹಾಗೆ ನಮ್ಮಿಂದಾದ ನೆರವು ನೀಡಲಾಗುವುದು.
    | ಕೃಷ್ಣಮೂರ್ತಿ ನಾಯ್ಕ ಕಾರ್ಯಕರ್ತ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts