More

    ಶೇ.60ಕ್ಕಿಳಿದ ಚೇತರಿಕೆ ಪ್ರಮಾಣ

    ಕಲಬುರಗಿ: ಜಿಲ್ಲೆಯಲ್ಲಿ ದಿನೇದಿನೆ ಕರೊನಾರ್ಭಟ ಜೋರಾಗಿದ್ದು, ನಿತ್ಯವೂ ಶತಕದ ಗಡಿ ಸಮೀಪ ಪಾಸಿಟಿವ್ ಕೇಸ್ಗಳು ದಾಖಲಾಗುತ್ತಿವೆ. ಎರಡು ವಾರದ ಹಿಂದೆ ಶೇ.70ರ ಗಡಿಯಲ್ಲಿದ್ದ ಸೋಂಕಿತರ ಚೇತರಿಕೆ ಪ್ರಮಾಣ ಇದೀಗ ಶೇ.60ಕ್ಕೆ ಇಳಿದಿರುವುದು ಸಹಜವೇ ಜನರಲ್ಲಿ ಇನ್ನಷ್ಟು ಆತಂಕ ಮೂಡಿಸಿದೆ.
    ಮಹಾಮಾರಿಗೆ ದೇಶದಲ್ಲೇ ಮೊದಲು ಬಲಿಯಾದ ಬಳಿಕ ಜಿಲ್ಲಾಡಳಿತ ಸೋಂಕು ಹರಡುವಿಕೆ ತಡೆಗಟ್ಟಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ. ಆದರೆ ವೈರಸ್ ಮಾತ್ರ ತನ್ನ ರಣಕೇಕೆ ನಿಲ್ಲಿಸುವ ಲಕ್ಷಣ ಕಾಣುತ್ತಿಲ್ಲ. ಇತ್ತೀಚಿನ ದಿನಗಳ ಹೆಲ್ತ್ ಬುಲೆಟಿನ್ ಗಮನಿಸಿದರೆ ಚೇತರಿಕೆ ಪ್ರಮಾಣದಲ್ಲಿ ಇಳಿಕೆಯಾಗುತ್ತಿದ್ದರೆ, ಸಾವಿನ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿದೆ.
    ಮಾಚರ್್ ಆರಂಭದಲ್ಲಿ ಶೇ.25 ಇದ್ದ ರಿಕವರಿ ರೇಟಿಂಗ್ ನಂತರದ ದಿನಗಳಲ್ಲಿ ನಿರಂತರ ಏರಿಕೆ ಕಂಡು ಮೇ 11ರಂದು ಶೇ.68.49ಕ್ಕೆ ತಲುಪಿದ್ದು ದಾಖಲೆಯಾಗಿತ್ತು. ಅಲ್ಲಿಂದ ಕೇಸ್ಗಳ ಸಂಖ್ಯೆ ಹೆಚ್ಚುತ್ತಲೇ ಸಾಗಿದ್ದು, ಡಿಸ್ಚಾರ್ಜ್​ ಆಗುವವರ ಸಂಖ್ಯೆಯೂ ಇಳಿಮುಖವಾಯಿತು. ಜೂ.5ರಂದು ಶೇ.23.19ಕ್ಕೆ ತಲುಪಿ ದಾಖಲೆಯ ಇಳಿಕೆ ಕಂಡಿತು.
    ಎರಡು ವಾರದ ಹಿಂದೆ ಅಂದರೆ ಜುಲೈ 6ರಂದು ಶೇ.77.1ಕ್ಕೆ ರಿಕವರಿ ಪ್ರಮಾಣ ಏರಿಕೆಯಾಗುವ ಮೂಲಕ ದಾಖಲೆ ಎನಿಸಿತು. ಆದರೆ ಇತ್ತೀಚಿನ ದಿನಗಳಲ್ಲಿ ಮತ್ತೆ ಚೀನಿ ವೈರಸ್ ಆರ್ಭಟ ಜೋರಾಗಿದ್ದರಿಂದ ಕೋವಿಡ್ ಆಸ್ಪತ್ರೆಯಿಂದ ಗುಣ ಹೊಂದಿ ಡಿಸ್ಚಾರ್ಜ ಆಗುವವರ ಸಂಖ್ಯೆಯಲ್ಲಿ ಗಣನೀಯ ಕಮ್ಮಿಯಾಗುತ್ತ ನಡೆದಿದೆ. ಜು.17ರ ವರದಿ ಪ್ರಕಾರ ರಿಕವರಿ ರೇಟಿಂಗ್ ಶೇ.60.46ಕ್ಕೆ ತಲುಪಿದೆ. ಕೇವಲ 11 ದಿನಗಳಲ್ಲಿ ಚೇತರಿಸಿಕೊಳ್ಳುತ್ತಿರುವವರ ರೇಟಿಂಗ್ನಲ್ಲಿ ಬರೋಬ್ಬರಿ ಶೇ.17 ಇಳಿಕೆಯಾಗಿರುವುದು ಗಾಬರಿ ಹುಟ್ಟಿಸುತ್ತಿದೆ.
    ಒಟ್ಟಾರೆ, ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಮಹಾಮಾರಿಯನ್ನು ಕಟ್ಟಿಹಾಕಲು ಇನ್ನಿಲ್ಲದ ಕಸರತ್ತು ನಡೆಸಿವೆ. ಆದರೆ ಜನರಿಂದ ಸಮರ್ಪಕ ಸಹಕಾರ ಸಿಗದಿರುವುದರಿಂದ ಮತ್ತು ಒಂದಿಷ್ಟು ಅಧಿಕಾರಿಗಳ ನಿರ್ಲಕ್ಷೃದಿಂದ ಪಾಸಿಟಿವ್ ಪ್ರಕರಣಗಳು ಏರುತ್ತಲೇ ಸಾಗಿರುವುದು ಆತಂಕಕಾರಿ ಎನಿಸಿದೆ.

    ಸಿಟಿಯಲ್ಲಿ ಸಹಸ್ರದತ್ತ ಕರೊನಾ
    ಕಲಬುರಗಿ ಮಹಾನಗರದಲ್ಲಿ ಮೊದಲಿನಿಂದಲೂ ಹೆಚ್ಚಾಗಿ ಹರಡುತ್ತಿದೆ. ಕಳೆದೊಂದು ವಾರದಲ್ಲಿ ನಗರದ ಬಹುತೇಕ ಬಡಾವಣೆಗಳಿಗೆ ಸೋಂಕು ಹಬ್ಬಿದೆ. ಇಲ್ಲಿವರೆಗೂ 2674 ಕೇಸ್ಗಳು ಜಿಲ್ಲೆಯಲ್ಲಿ ದಾಖಲಾದರೆ, ಅದರಲ್ಲಿ 956 ಸಿಟಿಯಲ್ಲಿ ಪತ್ತೆಯಾಗಿವೆ. ಇನ್ನು ಎರಡ್ಮೂರು ದಿನಗಳಲ್ಲಿ ಸಾವಿರದ ಗಡಿ ದಾಟುವುದರಲ್ಲಿ ಸಂಶಯವೇ ಇಲ್ಲ.

    ಜಿಲ್ಲಾಡಳಿತಕ್ಕೆ ಸಂಪರ್ಕ ಪತ್ತೆ ಸವಾಲು
    ದಿನೇದಿನೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದು ಒಂದೆಡೆಯಾದರೆ, ವೈರಸ್ ಹೇಗೆ ಅಂಟಿಕೊಂಡಿತು ಎಂಬುದನ್ನು ಪತ್ತೆ ಹಚ್ಚುವುದು ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ. ಇಲ್ಲಿವರೆಗೂ 270 (ಶೇ.10.43) ಸೋಂಕಿತರ ಸಂಪರ್ಕ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಇದು ಸೋಂಕು ಸಮುದಾಯಕ್ಕೆ ವ್ಯಾಪಿಸುತ್ತಿದೆಯೇ ಎಂಬ ಅನುಮಾನಗಳಿಗೆ ಪುಷ್ಟಿ ನೀಡುವಂತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts