More

    ಶೂಟೌಟ್​ಗೆ ಭೂವಿವಾದ ಕಾರಣ?

    ಹುಬ್ಬಳ್ಳಿ: ಹಳೇ ಹುಬ್ಬಳ್ಳಿಯ ಅಲ್ ತಾಜ್ ಹೋಟೆಲ್ ಎದುರು ಗುರುವಾರ ಸಂಜೆ ಗುಂಡಿನ ದಾಳಿಗೆ ಈಡಾಗಿ ಆಸ್ಪತ್ರೆಗೆ ದಾಖಲಾಗಿದ್ದ ಧಾರವಾಡದ ರೌಡಿಶೀಟರ್ ಫ್ರೂಟ್ ಇರ್ಫಾನ್ ಮಧ್ಯರಾತ್ರಿ ಮೃತಪಟ್ಟಿದ್ದಾನೆ. ಆತನ ಹತ್ಯೆಗೆ ರಿಯಲ್ ಎಸ್ಟೇಟ್, ಬಡ್ಡಿ ವ್ಯವಹಾರವೇ ಕಾರಣ ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

    ಇರ್ಫಾನ್ ವಿರುದ್ಧ ಬಡ್ಡಿ ದಂಧೆ, ರಿಯಲ್ ಎಸ್ಟೇಟ್ ವ್ಯವಹಾರ, ಭೂ ಕಬಳಿಕೆ, ಸಾಕ್ಷಿದಾರರಿಗೆ ಬೆದರಿಕೆ ಸೇರಿ ಅನೇಕ ಆರೋಪಗಳಿದ್ದವು. ಆ ಹಿನ್ನೆಲೆಯಲ್ಲಿ 2020 ಅಕ್ಟೋಬರ್ 21ರವರೆಗೆ ಚಾಮರಾಜನಗರ ಜಿಲ್ಲೆಗೆ ಗಡಿಪಾರು ಮಾಡಲಾಗಿತ್ತು. ಹೈಕೋರ್ಟ್​ನಿಂದ ತಡೆಯಾಜ್ಞೆ ತಂದು ಜಿಲ್ಲೆಗೆ ವಾಪಸಾಗಿದ್ದ. ನಂತರವೂ ಆತ ರಿಯಲ್ ಎಸ್ಟೇಟ್, ಬಡ್ಡಿ ವ್ಯವಹಾರದಲ್ಲಿ ತೊಡಗಿದ್ದ. ಇದೇ ವಿಚಾರವಾಗಿ ಆಕ್ರೋಶಗೊಂಡಿದ್ದ ಯುವಕರ ಗುಂಪೊಂದು ಹೊಂಚು ಹಾಕಿ, ಮಗನ ಆರತಕ್ಷತೆ ದಿನವೇ ಇರ್ಫಾನ್ ಮೇಲೆ ಗುಂಡಿನ ಸುರಿಮಳೆಗೈದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ಶೂಟೌಟ್ ಪ್ರಕರಣ ಭೇದಿಸಲು ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಆರ್.ಬಿ. ಬಸರಗಿ ನೇತೃತ್ವದಲ್ಲಿ 6 ವಿಶೇಷ ತಂಡಗಳನ್ನು ರಚಿಸಲಾಗಿದೆ. ಹು-ಧಾ ಅವಳಿ ನಗರದ ಇನ್ಸ್​ಪೆಕ್ಟರ್​ಗಳು ತನಿಖಾ ತಂಡದಲ್ಲಿದ್ದಾರೆ. ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಆಯುಕ್ತ ಆರ್. ದಿಲೀಪ ‘ವಿಜಯವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಸುಳಿವು ಸಿಕ್ಕಿದ್ದು, ಪೊಲೀಸರು ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ಗೊತ್ತಾಗಿದೆ.

    ಕೋವಿಡ್ ನಿಯಮಾವಳಿ ಪ್ರಕಾರ ಅಂತ್ಯಕ್ರಿಯೆ: ತಲೆ ಹಾಗೂ ತೊಡೆ ಭಾಗಕ್ಕೆ ಗುಂಡು ತಗುಲಿದ್ದರಿಂದ ತೀವ್ರ ರಕ್ತಸ್ರವಾವವಾಗಿದ್ದ ಇರ್ಫಾನ್​ನನ್ನು ಸುಚಿರಾಯು ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ನಿಗಾ ಘಟಕದಲ್ಲಿ ಆತ ಮಧ್ಯರಾತ್ರಿ 12.30ಕ್ಕೆ ಮೃತಪಟ್ಟಿದ್ದಾನೆ. ಶುಕ್ರವಾರ ಬೆಳಗ್ಗೆ ಕಿಮ್್ಸ ಶವಾಗಾರಕ್ಕೆ ರವಾನಿಸಲಾಗಿತ್ತು. ಮರಣೋತ್ತರ ಪರೀಕ್ಷೆ ನಂತರ ಕರೊನಾ ಪರೀಕ್ಷೆಗೆ ಒಳಪಡಿಸಲಾಯಿತು. ಮಧ್ಯಾಹ್ನ ಕಮರಿಪೇಟ ಖಬರಸ್ತಾನದಲ್ಲಿ ಕೋವಿಡ್ ನಿಯಮಾವಳಿ ಪ್ರಕಾರ ಅಂತ್ಯಕ್ರಿಯೆ ನೆರವೇರಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ಪರಿಣತ ಶೂಟರ್​ಗಳಲ್ಲ
    ಇರ್ಫಾನ್​ಗೆ ಗುಂಡೇಟು ಹಾಕಿದವರು ಪರಿಣತ ಅಥವಾ ಶಾರ್ಪ್ ಶೂಟರ್​ಗಳಲ್ಲ. ಹಾಗಾಗಿ ಹೊರಗಿನವರಲ್ಲ; ಹುಬ್ಬಳ್ಳಿ-ಧಾರವಾಡದವರೇ ಎಂದು ಪೊಲೀಸರು ರ್ತಸಿರುವುದಾಗಿ ತಿಳಿದುಬಂದಿದೆ. ಸಿಸಿ ಟಿವಿ ಕ್ಯಾಮರಾ ದೃಶ್ಯ ಪರಿಶೀಲಿಸಿದಾಗ, ಆರೋಪಿಗಳು ಹೊಸ ಪಾತಕಿಗಳಂತೆ ಕಂಡುಬಂದಿದ್ದಾರೆ. ಸಾದಾ ಪಿಸ್ತೂಲ್​ಅನ್ನು ಎರಡೂ ಕೈಯಿಂದ ಹಿಡಿದು ಗುಂಡು ಹಾರಿಸಿರುವುದು, ಒಬ್ಬಾತ ತುಸು ಗೊಂದಲದಲ್ಲೇ ಎರಡು ಸಲ ಗುಂಡೇಟು ಹಾಕಿರುವುದು, ಮುಖ ಮುಚ್ಚಿಕೊಳ್ಳುವಂಥ ಪ್ರಯತ್ನ ನಡೆಸದೇ ಇರುವುದು, ಸಿಸಿ ಕ್ಯಾಮರಾ ಇರುವಲ್ಲೇ ಬಂದು ಕೃತ್ಯ ಎಸಗಿರುವುದು ಸೇರಿ ಕೆಲವು ಅಂಶಗಳನ್ನು ಪೊಲೀಸರು ಪರಿಶೀಲಿಸಿದಾಗ, ವೃತ್ತಿಪರ ಹಂತಕರಲ್ಲ ಎಂದು ಅಂದಾಜಿಸಿದ್ದಾರೆ. ಈ ಮಧ್ಯೆ ಧಾರವಾಡ ಭಾಗದ ರಾಜಕಾರಣಿಯೊಬ್ಬರ ದೂರದ ಸಂಬಂಧಿಯೂ ಕೃತ್ಯದಲ್ಲಿ ಭಾಗಿಯಾಗಿದ್ದಾನೆಯೆ? ಧಾರವಾಡ ಜೈಲ್​ನಲ್ಲಿ ಒಂದಿಷ್ಟು ಕಾಲ ಇದ್ದು ಬಂದಿರುವ ವ್ಯಕ್ತಿಯೊಬ್ಬ ಭೂ ವ್ಯವಹಾರದ ದ್ವೇಷದಿಂದ ಕೆಲ ಹುಡುಗರನ್ನು ತಯಾರು ಮಾಡಿ ಹತ್ಯೆಗೆ ಸುಪಾರಿ ನೀಡಿದ್ದನೇ ಎಂಬ ಪ್ರಶ್ನೆಗಳು ಉದ್ಭವಿಸಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts