More

    ಶುಶ್ರೂಷಕರು ಆರೋಗ್ಯವಂತ ಸಮಾಜದ ನಿರ್ಮಾತೃಗಳು

    ಕೆ.ಆರ್.ಪೇಟೆ: ಪ್ರತಿದಿನ ರೋಗಿಗಳ ಸೇವೆಯಲ್ಲಿ ಭಗವಂತನನ್ನು ಕಾಣುವ ಶುಶ್ರೂಷಕರು ಆರೋಗ್ಯವಂತ ಸಮಾಜದ ನಿರ್ಮಾತೃಗಳಾಗಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಶಶಿಧರ್ ತಿಳಿಸಿದರು.
    ಪಟ್ಟಣದ ದುಂಡಶೆಟ್ಟಿ ಲಕ್ಷ್ಮಮ್ಮ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಡಳಿತ ವೈದ್ಯಾಧಿಕಾರಿ ಡಾ.ಶಿವಕುಮಾರ್ ನೇತೃತ್ವದಲ್ಲಿ ವಿಶ್ವ ಶುಶ್ರೂಶಕರ ದಿನಾಚರಣೆ ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿದರು.
    ಸಮಾಜಕ್ಕೆ ನೀಡಿರುವ ಸೇವೆಗಳ ಗೌರವಾರ್ಥವಾಗಿ ಪ್ರತಿ ವರ್ಷ ಮೇ 12ರಂದು ವಿಶ್ವಾದ್ಯಂತ ’ಶುಶ್ರೂಷಕರ ದಿನ’ ಆಚರಿಸಲಾಗುತ್ತದೆ. ಈ ದಿನ ಖ್ಯಾತ ದಾದಿ ಫ್ಲಾರೆನ್ಸ್ ನೈಟಿಂಗೇಲ್ ಅವರು ಹುಟ್ಟಿದ ದಿನವೂ ಹೌದು. 1965ರಲ್ಲಿ ಈ ಆಚರಣೆಯನ್ನು ಜಾರಿಗೆ ತರಲಾಯಿತು. ಈಕೆ ತನ್ನ ಜೀವನವನ್ನು ಮನುಕುಲದ ಸೇವೆಗೆ ಮುಡಿಪಾಗಿಟ್ಟಿದ್ದಳು. ಇಂದಿಗೆ ಆಕೆ ಹುಟ್ಟಿ 200 ವರ್ಷಗಳು ಪೂರ್ತಿಯಾಗಿವೆ. ಆಕೆ ಮನುಕುಲಕ್ಕೆ ನೀಡಿದ ಅಮೋಘ ಸೇವೆಯನ್ನು ಸ್ಮರಿಸುವ ಸಲುವಾಗಿ ದಾದಿಯರ ದಿನ ನೆರವೇರಿಸಲಾಗುತ್ತದೆ ಎಂದರು.
    ಕರೊನಾ ವಿರುದ್ಧ ನರ್ಸ್‌ಗಳ ಹೋರಾಟ ಅಸಾಮಾನ್ಯ. ನಮ್ಮ ರಾಜ್ಯದಲ್ಲಿ ಸುಮಾರು 10 ಸಾವಿರಕ್ಕೂ ಅಧಿಕ ಸರ್ಕಾರಿ ಶುಶ್ರೂಷಕರಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿ ಇದರ ಹತ್ತು ಪಟ್ಟು ನರ್ಸ್‌ಗಳಿದ್ದಾರೆ. ಎಂತಹ ಕಠಿಣ ಪರಿಸ್ಥಿತಿಯಲ್ಲೂ ರೋಗಿಗಳ ಆರೈಕೆ ಮಾಡಬೇಕೆಂಬ ವೃತ್ತಿ ಪ್ರಜ್ಞೆಯುಳ್ಳ ದಾದಿಯರ ಸೇವೆ ಅನನ್ಯ ಎಂದರು.
    ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಎ.ರವಿ, ತಾಲೂಕು ಆರೋಗ್ಯಾಧಿಕಾರಿ ಡಾ.ಮಧುಸೂದನ್, ಡಾ.ಗಿರೀಶ್, ಡಾ.ಧನಂಜಯ, ಡಾ.ರಾಧಾ, ಶುಶ್ರೂಷಕಿಯರಾದ ಬೇಬಿ, ಶೋಭಾ, ಕಾವ್ಯಾ, ಲಕ್ಷ್ಮಿ, ಶುಶ್ರೂಶಕ ಕಿಶೋರ್, ರಾಜಶೇಖರ, ಜಯದೇವ್, ಫಾರ್ಮಸಿ ಅಧಿಕಾರಿ ಬಿ.ಎಸ್.ಸತೀಶ್ ಬಾಬು ಸೇರಿದಂತೆ ಹಲವರು ಹಾಜರಿದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts