More

    ಶುಲ್ಕ ವಿವರ ಫಲಕ ಅಳವಡಿಸಿ

    ಅಂಕೋಲಾ: ಪುರಸಭೆಯವರು ನಿಗದಿಪಡಿಸಿರುವ ಶುಲ್ಕದ ವಿವರಗಳಿರುವ ಸೂಚನಾ ಫಲಕವನ್ನು ಪಟ್ಟಣದ ಮೀನು ಮಾರುಕಟ್ಟೆಯ ಎದುರು ಅಳವಡಿಸಬೇಕು ಎಂದು ಕೆಎಫ್​ಡಿಸಿ ಮಾಜಿ ಅಧ್ಯಕ್ಷ ರಾಜೇಂದ್ರ ವಿ. ನಾಯ್ಕ ನೇತೃತ್ವದಲ್ಲಿ ಮೀನುಗಾರ ಮುಖಂಡರು ಸೋಮವಾರ ಪುರಸಭೆ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದರು.

    ರಾಜೇಂದ್ರ ನಾಯ್ಕ ಮಾತನಾಡಿ, ಮೀನುಗಾರರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಮೀನು ಸಿಗದ ಪರಿಸ್ಥಿತಿ ನಿರ್ವಣಗೊಂಡಿದೆ. ಅಂಥದರಲ್ಲಿ ಅಲ್ಪಸ್ವಲ್ಪ ಸಿಕ್ಕ ಮೀನುಗಳನ್ನು ಮಾರುಕಟ್ಟೆಗೆ ತಂದು ಮಾರಾಟ ಮಾಡಿದರೆ ದುಪ್ಪಟ್ಟು ಶುಲ್ಕ ವಸೂಲಿ ಮಾಡುತ್ತಿದ್ದಾರೆ. ಈ ಹಿಂದೆ ಮೀನು ಮಾರುಕಟ್ಟೆ ಟೆಂಡರ್ 11 ಲಕ್ಷವಿದ್ದರೆ ಈಗ 21 ಲಕ್ಷಕ್ಕೆ ಏರಿಸಲಾಗಿದೆ. ಇದರಿಂದ ಮೀನು ಮಾರಾಟಗಾರರಿಗೆ ಸಮಸ್ಯೆ ಉಂಟಾಗಿದೆ. ಹೀಗಾಗಿ ಕೂಡಲೆ ನಾಮಫಲಕ ಅಳವಡಿಸಬೇಕು ಎಂದರು.

    ಮನವಿ ಸ್ವೀಕರಿಸಿದ ಪುರಸಭೆಯ ಮುಖ್ಯಾಧಿಕಾರಿ ಬಿ.ಪ್ರಹ್ಲಾದ ಮಾತನಾಡಿ, ಮುಂದಿನ ತಿಂಗಳು ಮೊದಲ ವಾರದಲ್ಲಿ ಪುರಸಭೆ ನಿಗದಿಪಡಿಸಿದ ದರದ ಪಟ್ಟಿಯನ್ನು ಮೀನು ಮಾರುಕಟ್ಟೆ ಎದುರು ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

    ಅಂಗಡಿ ಪರಿಕರಗಳ ತೆರವು ಕಾರ್ಯಾಚರಣೆ: ಅಂಕೋಲಾ: ಪಟ್ಟಣದ ವಿವಿಧ ಅಂಗಡಿಕಾರರು ತಮ್ಮ ಪರಿಕರಗಳನ್ನು ರಸ್ತೆಯವರೆಗೂ ಇಡುವುದರಿಂದ ವಾಹನ ಸವಾರರಿಗೆ ತೊಂದರೆ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ಬಿ. ಪ್ರಹ್ಲಾದ ಸೋಮವಾರ ತೆರವು ಕಾರ್ಯಾಚರಣೆ ನಡೆಸಿದರು. ಬಳಿಕ ಮಾತನಾಡಿ, ಕಾನೂನು ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳುತ್ತಲೇ ಬಂದಿದ್ದೇವೆ. ಕೆಲವರಿಗೆ ದಂಡ ಹಾಕಿದರೂ ಮತ್ತೆ ಹಳೆಯ ಚಾಳಿಯನ್ನು ಮುಂದುವರಿಸುತ್ತಿದ್ದಾರೆ. ಇನ್ನು ಮುಂದೆ ಇಂಥ ತಪ್ಪುಗಳು ಕಂಡು ಬಂದಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದರು. ಪುರಸಭೆ ಆರೋಗ್ಯಾಧಿಕಾರಿ ಪ್ರವೀಣ ನಾಯಕ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts