More

    ಶೀಘ್ರ ಎಲೆಚುಕ್ಕೆ ರೋಗ ಅಧ್ಯಯನ; ತಜ್ಞ ವಿಜ್ಞಾನಿಗಳ ತಂಡ ರಚನೆ: ಶಾಸಕ ಹರತಾಳು ಹಾಲಪ್ಪ

    ಬ್ಯಾಕೋಡು: ಲಭ್ಯ ಇರುವ ಔಷಧ ಸಿಂಪಡಣೆ ಮಾಡುವ ಮೂಲಕ ತೀವ್ರವಾಗಿರುವ ಎಲೆಚುಕ್ಕೆ ರೋಗ ನಿಯಂತ್ರಣಕ್ಕೆ ರೈತರು ಮುಂದಾಗಬೇಕು ಎಂದು ಶಾಸಕ ಹರತಾಳು ಹಾಲಪ್ಪ ಹೇಳಿದರು.
    ಶುಕ್ರವಾರ ಇಲ್ಲಿನ ಕರೂರು ಹೋಬಳಿಯ ತುಮರಿ ಎಪಿಎಂಸಿ ಯಾರ್ಡ್‌ನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅಡಕೆ ಎಲೆಚುಕ್ಕೆ ರೋಗಕ್ಕೆ ಔಷಧ ವಿತರಣೆ ಮಾಡಿ ಮಾತನಾಡಿ, ಕರೂರು, ಭಾರಂಗಿ ಹೋಬಳಿಯಲ್ಲಿ ಈಗಾಗಲೇ ಅಡಕೆ ಕೊಳೆ ರೋಗದಂತೆ ಎಲೆಚುಕ್ಕೆ ರೋಗ ಸಹ ತೀವ್ರವಾಗಿ ಹರಡಿದ್ದು ಈ ಬಗ್ಗೆ ಕೇಂದ್ರ ಸರ್ಕಾರದ ಗಮನಕ್ಕೆ ತರಲಾಗಿದೆ. ಕೃಷಿ ಸಚಿವರನ್ನು ಈಗಾಗಲೇ ಭೇಟಿ ಮಾಡಿ ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡಲಾಗಿದ್ದು ರೈತರೊಂದಿಗೆ ಸರ್ಕಾರ ಜತೆಗೆ ಇರಲಿದ್ದು, ರೈತರು ಭಯ ಪಡುವ ಅಗತ್ಯವಿಲ್ಲ ಎಂದರು.
    ಈಗಾಗಲೇ ತಜ್ಞ ವಿಜ್ಞಾನಿಗಳ ತಂಡದ ಸಮಿತಿ ರಚನೆ ಮಾಡಿದ್ದು, ಶೀಘ್ರವೇ ರೋಗದ ಬಗ್ಗೆ ವಿಸ್ತೃತವಾಗಿ ಅಧ್ಯಯನ ನಡೆಸಲಿದೆ. ಅಡಕೆ ಎಲೆ ಚುಕ್ಕೆ ರೋಗದ ಪರಿಹಾರ ಹಾಗೂ ನಿಯಂತ್ರಣಕ್ಕೆ ಈಗಾಗಲೇ 8 ಕೋಟಿ ರೂ. ಸರ್ಕಾರ ಮೀಸಲಿಡಲಾಗಿದ್ದು ಇದರಲ್ಲಿ 4 ಕೋಟಿ ರೂ. ಈಗಾಗಲೇ ಬಿಡುಗಡೆಯಾಗಿದೆ. ಜಿಲ್ಲೆಯ ಹಲವು ಭಾಗಗಳಲ್ಲಿ ರೈತರ ತೋಟಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುತ್ತಿದ್ದು ರೈತರಿಗೆ ಫೈಬರ್ ದೋಟಿ ನೀಡುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts