More

    ಶಿವಶರಣರ ವೇಷದಲ್ಲಿ ಮಕ್ಕಳ ಕಲರವ

    ದಾವಣಗೆರೆ: ಅಲ್ಲಿ ಚಿಣ್ಣರದೇ ಕಲರವ. ಬಸವಣ್ಣ, ಅಕ್ಕಮಹಾದೇವಿ. ಅಲ್ಲಮಪ್ರಭು, ಸಿದ್ದರಾಮೇಶ್ವರ, ಚನ್ನಬಸವಣ್ಣ ಮೊದಲಾದ ಶಿವಶರಣರ ವೇಷಭೂಷಣದಲ್ಲಿ ಮಕ್ಕಳು ಕಂಗೊಳಿಸಿದರು.
    ದಾವಣಗೆರೆ ವಿರಕ್ತಮಠದಲ್ಲಿ ಶುಕ್ರವಾರ ಹಮ್ಮಿಕೊಂಡೊದ್ದ ಬಸವಾದಿ ಶರಣರ ವೇಷಭೂಷಣ ಸ್ಪರ್ಧೆಯ ಆಕರ್ಷಣೆ ಇದು.
    ಕೈಯಲ್ಲಿ ಇಷ್ಟಲಿಂಗ, ಕೊರಳಲ್ಲಿ ರುದ್ರಾಕ್ಷಿಮಾಲೆ. ತಲೆ‌ಮೇಲೆ ಕಿರೀಟ ಧರಿಸಿದ್ದ ಬಸವೇಶ್ವರರ ವೇಷಧಾರಿಗಳು ಗಮನ ಸೆಳೆದರು.50 ಕ್ಕೂ ಹೆಚ್ಚು ಮಕ್ಕಳು ಸ್ಪರ್ಧೆ ಯಲ್ಲಿ ಭಾಗವಹಿಸಿದ್ದರು.
    ಸ್ಪರ್ಧೆ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಿದ ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಮಾತನಾಡಿ, ಬಸವತತ್ವ ಆಚರಣೆಯಿಂದ ಜಗತ್ತಿನಲ್ಲಿ ಸುಖ, ಶಾಂತಿ ನೆಲೆಸುತ್ತದೆ. ಬಸವತತ್ವವು ಮಾನವೀಯತೆಯನ್ನು ಭೋದಿಸುತ್ತದೆ ಮಾನವೀಯತೆ ಇದ್ದಲ್ಲಿ ಶಾಂತಿ , ಪ್ರೇಮ , ಸಮಾನತೆಗಳು ನೆಲೆಸುತ್ತದೆ ಹಾಗಾಗಿ ಎಲ್ಲರೂ ಬಸವತತ್ವವನ್ನು ಪಾಲಿಸುವ ಪ್ರತಿಜ್ಞೆ ಮಾಡಬೇಕು ಆಗ ಮಾತ್ರ ಜಗತ್ತಿಗೆ ಶಾಂತಿ ನೆಲೆಸುತ್ತದೆ ಎಂದರು.
    ಡಾ.ಶಿಮುಶ ಕಾಲೇಜು ಪ್ರಾಂಶುಪಾಲ ರೋಷನ್ , ವಿರಕ್ತಮಠ ಸದಸ್ಯರಾದ ಹಾಸಬಾವಿ ಕರಿಬಸಪ್ಪ , ಲಂಬಿ ಮುರುಗೇಶಪ್ಪ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts