More

    ಶಿವಮೊಗ್ಗದಲ್ಲಿ ರೌಡಿಶೀಟರ್ ಕಾಲಿಗೆ ಪೊಲೀಸರ ಗುಂಡೇಟು

    ಶಿವಮೊಗ್ಗ: ಕೊಲೆ ಯತ್ನಕ್ಕೆ ಸಂಬಂಧಿಸಿದಂತೆ ಕೇಸ್ ಹಿಂಪಡೆಯಲು ನಿರಾಕರಿಸಿದ್ದ ಮಹಿಳೆಗೆ ಬೆದರಿಕೆ ಹಾಕಿದ್ದಲ್ಲದೆ ಹೊಸಮನೆಯಲ್ಲಿ ನಿಲ್ಲಿಸಿದ್ದ ಆಕೆಯ ಕಾರಿಗೆ ಬೆಂಕಿ ಹಚ್ಚಿದ್ದ ಪ್ರಕರಣದಲ್ಲಿ ಪೊಲೀಸ್ ಕಾನ್‌ಸ್ಟೇಬಲ್ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದ ಪ್ರಮುಖ ಆರೋಪಿ ಕಾಲಿಗೆ ಸೋಮವಾರ ಬೆಳಗಿನಜಾವ ಪೊಲೀಸರು ಗುಂಡು ಹಾರಿಸಿದ್ದಾರೆ. ಬೆದರಿಕೆ, ಕಾರಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸರು ಒಟ್ಟಾರೆ ಐವರನ್ನು ಬಂಧಿಸಿದ್ದಾರೆ.
    ಆರೋಪಿ ಪ್ರವೀಣ್ ಅಲಿಯಾಸ್ ಮೋಟು ಕಾಲಿಗೆ ಗುಂಡೇಟು ಬಿದ್ದಿದ್ದು ಸಚಿನ್ ಸ್ಯಾಡೋ, ಚಿಕ್ಕಲ್ ಕಾರ್ತಿಕ್, ವಿಶಾಲ್ ಡಾಲು ಮತ್ತು ನಿತೇಶ್‌ನನ್ನು ಬಂಧಿತರು.
    ಸೋಮವಾರ ಬೆಳಗಿನ ಜಾವ ವೀರಣ್ಣನ ಬೆನವಳ್ಳಿ ಗ್ರಾಮದಲ್ಲಿ ಪೇದೆ ಶಿವರಾಜ್ ಮೇಲೆ ಹಲ್ಲೆಗೆ ಯತ್ನಿಸಿದ್ದು ಆತ್ಮರಕ್ಷಣೆಗಾಗಿ ಗ್ರಾಮಾಂತರ ಠಾಣೆ ಪಿಎಸ್‌ಐ ರಮೇಶ್ ಆರೋಪಿ ಪ್ರವೀಣ್ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಗಾಯಗೊಂಡ ಪೇದೆ ಶಿವರಾಜ್ ಮತ್ತು ಆರೋಪಿ ಪ್ರವೀಣ್‌ನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
    ಬೆದರಿಕೆ, ಕಾರಿಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಅವರು ಪ್ರವೀಣ್ ಬಂಧನಕ್ಕೆ ಎರಡು ತಂಡಗಳನ್ನು ರಚಿಸಿದ್ದರು. ಮೂವರನ್ನು ಬೆಂಗಳೂರಿನಲ್ಲಿ ಬಂಧಿಸಿರುವ ಪೊಲೀಸರು, ಒಬ್ಬನನ್ನು ಭದ್ರಾವತಿಯಲ್ಲಿ ಬಂಧಿಸಿದ್ದರು. ಬೆಳಗಿನ ಜಾವ ವೀರಣ್ಣಬೆನವಳ್ಳಿ ಬಳಿ ಪ್ರವೀಣ್ ಇರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ಬಂಧಿಸಲು ತೆರಳಿದ್ದಾಗ ಕಾನ್‌ಸ್ಟೇಬಲ್ ಶಿವರಾಜ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆಗೆ ಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಪಿಎಸ್‌ಐ ರಮೇಶ್ ಆತ್ಮರಕ್ಷಣೆಗಾಗಿ ಪ್ರವೀಣ್ ಕಾಲಿಗೆ ಗುಂಡು ಹೊಡೆದಿದ್ದು ಗಾಯಗೊಂಡ ಆತನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಿವರಾಜ್ ಅವರನ್ನು ಕೂಡ ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಿದ್ದು, ಅವರು ಕೂಡ ಅಪಾಯದಿಂದ ಪಾರಾಗಿದ್ದಾರೆ.
    ಏನಿದು ಪ್ರಕರಣ?:
    ವನಜಾಕ್ಷಮ್ಮ ಅವರು ಜೈಲು ರಸ್ತೆಯಲ್ಲಿ ಟೀ ಸ್ಟಾಲ್ ನಡೆಸುತ್ತಿದ್ದು ಮೂರೂವರೆ ತಿಂಗಳ ಹಿಂದೆ ವನಜಾಕ್ಷಮ್ಮ ಮತ್ತು ಪುತ್ರ ಸುಕೇತ್ ಆರೋಪಿಗಳು ಮೇಲೆ ಹಲ್ಲೆ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಯನಗರ ಪೊಲೀಸರು ಪ್ರವೀಣ್ ಸೇರಿದಂತೆ ಮೂವರನ್ನು ಬಂಧಿಸಿದ್ದರು. ಅದರಲ್ಲಿ ಇಬ್ಬರಿಗೆ ಜಾಮೀನು ದೊರೆತಿದ್ದು ಪ್ರವೀಣ್‌ಗೆ ಜಾಮೀನು ಸಿಗದೆ ಜೈಲು ಸೇರಿದ್ದ. ಹಾಗಾಗಿ ವನಜಾಕ್ಷಮ್ಮ ಮತ್ತು ಸುಕೇತ್‌ಗೆ ಕೇಸ್ ಹಿಂಪಡೆಯಲು ಬೆದರಿಕೆ ಹಾಕಿದ್ದ. ಇದನ್ನು ತಾಯಿ-ಮಗ ನಿರಾಕರಣೆ ಮಾಡಿದ್ದು ಜಾಮೀನಿನ ಮೇಲೆ ಹೊರಬಂದಿದ್ದ ಪ್ರವೀಣ್ ಸೇರಿದಂತೆ ಐವರು ಶನಿವಾರ(ಡಿ.17) ಬೆಳಗಿನ ಜಾವ ಹೊಸಮನೆ 5ನೇ ಕ್ರಾಸ್‌ನಲ್ಲಿ ನಿಲ್ಲಿಸಿದ್ದ ವನಜಾಕ್ಷಮ್ಮ ಅವರ ಕಾರಿಗೆ ಬೆಂಕಿ ಹಚ್ಚಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts