More

    ಶಿರಹಟ್ಟಿ ತಾಲೂಕಿನ 664 ರೈತರಿಗೆ ತಾಡಪತ್ರಿ

    ಶಿರಹಟ್ಟಿ: ಕೃಷಿ ಇಲಾಖೆಯ ಕೃಷಿ ಸಂಸ್ಕರಣೆ ಯೋಜನೆಯಡಿ ರಿಯಾಯಿತಿ ದರದಲ್ಲಿ ನೀಡಲಾಗುವ ತಾಡಪತ್ರಿಗಳನ್ನು ಶಿರಹಟ್ಟಿ ರೈತ ಸಂಪರ್ಕ ಕೇಂದ್ರದಲ್ಲಿ ಬುಧವಾರ ಲಾಟರಿ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡಲಾಯಿತು.

    ಸಹಾಯಕ ಕೃಷಿ ನಿರ್ದೇಶಕ ಚಂದ್ರಶೇಖರ ನರಸಮ್ಮನವರ ಮಾತನಾಡಿ, ‘ತಾಡಪತ್ರಿ ಪಡೆಯಲು ತಾಲೂಕಿನ ರೈತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಶಿರಹಟ್ಟಿ ಪಪಂ ಹಾಗೂ ತಾಲೂಕಿನ 14 ಗ್ರಾಪಂ. ವ್ಯಾಪ್ತಿಯ ಹಳ್ಳಿಗಳ ಎಸ್​ಸಿ 201, ಎಸ್​ಟಿ 128, ಹಾಗೂ ಸಾಮಾನ್ಯ ವರ್ಗದ 598 ರೈತರು ಸೇರಿದಂತೆ ಒಟ್ಟು 927 ಅರ್ಜಿಗಳು ಸ್ವೀಕೃತವಾಗಿದ್ದವು. ಮೀಸಲಾತಿ ಅನುಸಾರ ಪಾರದರ್ಶಕವಾಗಿ ಲಾಟರಿ ಎತ್ತುವುದರ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ’ ಎಂದರು.

    ಆಯಾ ಗ್ರಾಪಂ.ವಾರು ಮೀಸಲಾತಿ ಅನ್ವಯ ಚೀಟಿ ಎತ್ತುವುದರೊಂದಿಗೆ ಎಸ್​ಸಿ 45, ಎಸ್​ಟಿ 21 ಹಾಗೂ ಸಾಮಾನ್ಯ ವರ್ಗದ 598 ಫಲಾನುಭವಿಗಳನ್ನು ಆಯ್ಕೆ ಮಾಡಲಾಯಿತು. ಕೃಷಿ ಅಧಿಕಾರಿ ಕುಸುಮಾ ಪಾಟೀಲ, ಸಹಾಯಕ ಕೃಷಿ ಅಧಿಕಾರಿ ಎ.ಸಿ. ಭಗವತಿ, ಸಿ.ಬಿ. ಬೇವೂರ, ಯಲ್ಲಪ್ಪ ಬಂಗಾರಿ ಇದ್ದರು. ಎಸ್​ಸಿ ಮೀಸಲಾತಿಯಲ್ಲಿ ಅರ್ಜಿ ಸಲ್ಲಿಸಿ ತಾಡಪತ್ರಿಯಿಂದ ವಂಚಿತರಾದ ಕೆಲವರು ಕೃಷಿ ಅಧಿಕಾರಿಯೊಂದಿಗೆ ವಾಗ್ವಾದ ನಡೆಸಿದರು. ಎಸ್​ಸಿ ಕೋಟಾದಲ್ಲಿ ತಾಡಪತ್ರಿ ಕೊಡದಿದ್ದರೆ ಸಾಮಾನ್ಯ ವರ್ಗದ ಕೋಟಾದಡಿ ವಿತರಿಸಿ ಎಂದು ಒತ್ತಾಯಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿ, ‘ಯಾವ ಕೆಟಗರಿಯಲ್ಲಿ ರೈತರು ಅರ್ಜಿ ಸಲ್ಲಿಸಿರುತ್ತಾರೋ ಅದೇ ಕೆಟಗರಿಯ ಪ್ರಕಾರ ಲಾಟರಿ ಎತ್ತಲಾಗುತ್ತದೆ’ ಎಸ್​ಸಿ, ಎಸ್​ಟಿ ಕೆಟಗರಿಯವನ್ನು ಸಾಮಾನ್ಯ ವರ್ಗಕ್ಕೆ ಪರಿಗಣಸಲಾಗುವುದಿಲ್ಲ. ಈ ಬಾರಿ ಸಾಮಾನ್ಯ ವರ್ಗಕ್ಕೆ ಹೆಚ್ಚು ತಾಡಪತ್ರಿಗಳು ಮೀಸಲಿದ್ದವು. ಹೀಗಾಗಿ ಅರ್ಜಿ ಸಲ್ಲಿಸಿದ ಎಲ್ಲರನ್ನೂ ಆಯ್ಕೆ ಮಾಡಲಾಗಿದೆ’ ಎಂದರು.

    ಚೀಟಿ ಎತ್ತಿ ತಾಡಪತ್ರಿ ವಿತರಣೆ

    ಲಕ್ಷ್ಮೇಶ್ವರ: ಕೃಷಿ ಸಂಸ್ಕರಣ ಯೋಜನೆಯಡಿ ರೈತರಿಗೆ ನೀಡಲಾಗುವ ತಾಡಪತ್ರಿಗೆ ಮಿತಿಗಿಂತ ಹೆಚ್ಚು ಅರ್ಜಿ ಬಂದಿದ್ದರಿಂದ ಗುರುವಾರ ರೈತ ಸಂಪರ್ಕ ಕೇಂದ್ರದಲ್ಲಿ ಚೀಟಿ ಎತ್ತುವ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ನಡೆಯಿತು.

    ಸಹಾಯಕ ಕೃಷಿ ನಿರ್ದೇಶಕ ಚಂದ್ರಶೇಖರ ನರಸಮ್ಮನವರ, ಮಾತನಾಡಿ, ಸರ್ಕಾರದಿಂದ ಕೃಷಿ ಇಲಾಖೆಗೆ ಬರುವ ನಿಯಮಿತ ತಾಡಪತ್ರಿಗಳನ್ನು ಎಲ್ಲ ರೈತರಿಗೂ ಸಹಾಯಧನದಡಿ ವಿತರಿಸಲು ಸಾಧ್ಯವಿಲ್ಲ. ಲಾಟರಿಯಲ್ಲಿ 47 ಎಸ್​ಸಿ ರೈತರು ಮತ್ತು 21 ಎಸ್​ಟಿ ರೈತರನ್ನು ಆಯ್ಕೆ ಮಾಡಲಾಗಿದ್ದು 198 ರೂ. ಸಹಾಯಧನ ದರದಲ್ಲಿ ತಾಡಪತ್ರಿ ವಿತರಿಸಲಾಗುವುದು. ಅಲ್ಲದೆ, ಸಾಮಾನ್ಯ ವರ್ಗಕ್ಕೆ 532 ಅರ್ಜಿ ಬಂದಿದ್ದು 930 ರೂ.ನಂತೆ ಎಲ್ಲರಿಗೂ ತಾಡಪತ್ರಿ ವಿತರಿಸಲಾಗುವುದು. ಅಲ್ಲದೆ, ಹಿಂಗಾರಿ ಹಂಗಾಮಿಗಾಗಿ ಕಡಲೆ, ಕುಸುಬಿ, ಜೋಳದ ಬೀಜಗಳು ದಾಸ್ತಾನಿದ್ದು, ರೈತರು ಸೂಕ್ತ ದಾಖಲೆ ಸಲ್ಲಿಸಿ ಸಹಾಯಧನದಡಿ ಬೀಜ ಖರೀದಿಸಬಹುದು ಎಂದರು.

    ಥಾವರೆಪ್ಪ ಲಮಾಣಿ, ಮನೋಹರ ಜಬಡಿ, ಗಂಗಪ್ಪ ಜಬಡಿ, ಬಸವರಾಜ ಹಂಜಿ, ರಾಮಪ್ಪ ಹನಮಂತಪ್ಪ ತಳವಾರ, ನಾಗಪ್ಪ ರ್ಬಾ, ಹೂಬಪ್ಪ ಲಮಾಣಿ, ರವಿ ಲಮಾಣಿ, ಫಕ್ಕಣ್ಣ ಬಳಿಗಾರ, ಕೃಷಿ ಅಧಿಕಾರಿಗಳಾದ ಎನ್.ಎಚ್. ಹಣಗಿ, ಪಿ.ಕೆ, ಹೊನ್ನಪ್ಪನವರ, ಅಮಿತ ಹಾಲೇವಾಡಿಮಠ, ಮಹೇಶ ನಂದೆಣ್ಣವರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts