More

    ಶಿರಗುಪ್ಪಿಗೆ ಅಭಿವೃದ್ಧಿ ಭಾಗ್ಯ

    ನಿಪ್ಪಾಣಿ: ಹಲವು ದಶಕಗಳಿಂದ ಅಭಿವದ್ಧಿ ಕಾಣದ ಶಿರಗುಪ್ಪಿ ಗ್ರಾಮದಲ್ಲೀಗ ಸರಣಿ ಕಾಮಗಾರಿಗಳ ಮೂಲಕ ಸರ್ವಾಂಗೀಣ ಅಭಿವದ್ಧಿ ಮಾಡಲಾಗುತ್ತಿದೆ ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
    ತಾಲೂಕಿನ ಶಿರಗುಪ್ಪಿ ಗ್ರಾಮದಲ್ಲಿ 1.91 ಕೋಟಿ ರೂ.ವೆಚ್ಚದ ಜಲಜೀವನ ಮಿಷನ್ ಕಾಮಗಾರಿ ಹಾಗೂ ಲೋಕೋಪಯೋಗಿ ಇಲಾಖೆ ಯಿಂದ ಮಂಜೂರಾದ 2 ಕೋಟಿ ರೂ. ಅನುದಾನದಲ್ಲಿ ನಿಪ್ಪಾಣಿ-ಶಿರಗುಪ್ಪಿ-ಶೇಂಡೂರ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

    1.50 ಲಕ್ಷ ಲೀಟರ್ ಕ್ಷಮತೆಯ ಎರಡು ಪ್ರತ್ಯೇಕ ಓವರ್‌ಹೆಡ್ ಟ್ಯಾಂಕ್‌ಗಳನ್ನು ನಿರ್ಮಿಸಲಾಗುವುದು. ಹರ ಘರ್ ಗಂಗಾ ಯೋಜನೆ ಮೂಲಕ ಗ್ರಾಮದವರಿಗೆ ಶುದ್ಧ ಕುಡಿಯುವ ನೀರು ಒದಗಿಸಲಾಗುವುದು. ಜಲಜೀವನ ಮಿಷನ್ ಮೂಲಕ ನೀರು ನೀಡುವುದು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕನಸಿನ ಯೋಜನೆಯಾಗಿದೆ ಎಂದರು.

    ಪ್ರಸಕ್ತ ಅಧಿಕಾರವಧಿಯಲ್ಲಿ 22 ಕೋಟಿ ರೂ. ಕಾಮಗಾರಿ ಮಾಡಲಾಗಿದೆ. ನಿಪ್ಪಾಣಿ-ಶೆಂಡೂರ ಪ್ರಮುಖ ರಸ್ತೆಯ ಅಗಲವನ್ನು 12ರಿಂದ 18 ಅಡಿಗಳವರೆಗೆ ಹೆಚ್ಚಿಸಲಾಗಿದೆ. ಇದರಿಂದ ದಿನನಿತ್ಯ ಶಾಲೆಗೆ ತೆರಳುವ ವಿದ್ಯಾರ್ಥಿಗಳಿಗೆ ಮತ್ತು ವಾಹನ ಸವಾರರಿಗೆ ಅನುಕೂಲವಾಗಲಿದೆ. 10 ವರ್ಷಗಳ ಅಧಿಕಾರಾವಧಿಯಲ್ಲಿ ಹಗಲಿರುಳು ಶ್ರಮಿಸಿ, ಲಾನುಭವಿಗಳ ಮನೆಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳನ್ನು ತಲುಪಿಸಲಾಗುತ್ತಿದೆ ಎಂದರು. ಹಿರಿಯ ನಾಗರಿಕ ಲಾನುಭವಿಗಳಿಗೆ ವದ್ಧಾಪ್ಯ ವೇತನದ ಆದೇಶ ಪ್ರತಿ ವಿತರಿಸಿದರು. ಸ್ಥಳೀಯ ನಗರಸಭೆ ಅಧ್ಯಕ್ಷ ಜಯವಂತ ಭಾಟಲೆ, ಸ್ಥಾಯಿ ಸಮಿತಿ ಚೇರ್ಮನ್ ರಾಜು ಗುಂದೇಶಾ, ಗುತ್ತಿಗೆದಾರ ಅನಿಲ ಬೆನ್ನಳ್ಳಿ, ರಾಜು ಕುಂಬಾರ, ಮಲ್ಲಪ್ಪ ನಾಯಿಕ, ಪಂಕಜ ದೇಸಾಯಿ, ರಮೇಶ ಚವಾಣ, ಗೀತಾ ಚವಾಣ, ಮಾಧುರಿ ಬುವಾ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts