More

    ಶಿಡ್ಲಗುಂಡಿ ಸೇತುವೆಯ ಕಾಮಗಾರಿ ವಿಳಂಬ

    ಮುಂಡಗೋಡ: ಕಳೆದ ಆಗಸ್ಟ್ 8ರಂದು ಕೊಚ್ಚಿ ಹೋಗಿದ್ದ ಶಿಡ್ಲಗುಂಡಿ ಸೇತುವೆಯ ಸಂಪರ್ಕ ರಸ್ತೆಯನ್ನು ಪಿಡಬ್ಲ್ಯುಡಿ 1.72 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿದೆ.

    ಆದರೆ, ಕರೊನಾ ಲಾಕ್​ಡೌನ್ ಕಾರಣದಿಂದ ಕಾಮಗಾರಿ ವಿಳಂಳಬವಾಗಿದೆ. ಸದ್ಯ ತಾತ್ಕಾಲಿಕ ಸೇತುವೆ ಮೇಲೆ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ, ಹುಬ್ಬಳ್ಳಿ ಧಾರವಾಡ ಭಾಗದಲ್ಲಿ ಹೆಚ್ಚು ಮಳೆಯಾದ ತಕ್ಷಣ ಹಳ್ಳ ಉಕ್ಕಿ ಬಂದು ಸೇತುವೆ ಮುಚ್ಚಿ ಹೋಗುತ್ತದೆ. ಕಳೆದ ಸೋಮವಾರ ಸುರಿದ ಮಳೆಯಿಂದ 5 ತಾಸು ಮುಂಡಗೋಡ-ಯಲ್ಲಾಪುರ ನಡುವೆ ವಾಹನ ಸಂಚಾರ ಬಂದಾಗಿತ್ತು. ಪ್ರತಿ ದಿನ 300ಕ್ಕೂ ಅಧಿಕ ಜನ ಓಡಾಡುವ ಮಾರ್ಗವಾಗಿದ್ದು, ಈ ಮಳೆಗಾಲದಲ್ಲಿ ಇನ್ನೂ ಹಲವು ದಿನ ಇದೇ ಪರಿಸ್ಥಿತಿ ಉಂಟಾಗುವ ಆತಂಕವಿದೆ. ಬೇಗ ಸೇತುವೆ ಕಾಮಗಾರಿ ಮುಗಿಸಿಕೊಡಬೇಕು ಎಂದು ಗ್ರಾಮಸ್ಥರಾದ ಸಿ.ಕೆ. ಅಶೋಕ, ಸುಬ್ರಾಯ ಭಟ್ಟ, ಉದಯಕುಮಾರ ನಾಯ್ಕ ಪ್ರಕಾಶ ಮಹಾಲೆ, ಎಸ್.ವಿ. ಚಕ್ರಸಾಲಿ, ಪರಶುರಾಮ ಗೌಡಣ್ಣವರ ಮನವಿ ಮಾಡಿದ್ದಾರೆ.

    ಇಷ್ಟೊತ್ತಿಗಾಗಲೇ ಸೇತುವೆ ಕಾಮಗಾರಿ ಮುಗಿಯಬೇಕಿತ್ತು. ಕೋವಿಡ್-19 ಲಾಕ್​ಡೌನ್ ಕಾರಣದಿಂದ ಕಾಮಗಾರಿ ವಿಳಂಬವಾಯಿತು. ಜು. 15ರ ಒಳಗಾಗಿ ಸೇತುವೆ ಕಾಮಗಾರಿ ಪೂರ್ಣಗೊಳಿಸಲಾಗುವುದು.
    | ದಯಾನಂದ ಬಿ.ಆರ್. ಎಇಇ ಪಿಡಬ್ಲು್ಯಡಿ ಮುಂಡಗೋಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts