More

    ಶಿಕ್ಷಣ ಕ್ಷೇತ್ರಕ್ಕೆ ಮುನೇನಕೊಪ್ಪ ಆದ್ಯತೆ

    ಹುಬ್ಬಳ್ಳಿ: ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಸುಮಾರು 201 ಶಾಲಾ ಕೊಠಡಿ ಪುನರ್ ನಿರ್ವಣಕ್ಕೆ ಸಂಕಲ್ಪ ಮಾಡಿರುವ ಶಾಸಕ ಶಂಕರ ಪಾಟೀಲ ಮುನೇನಕೊಪ್ಪರ ಶೈಕ್ಷಣಿಕ ಸೇವೆ ಪ್ರಶಂಸನೀಯವಾಗಿದೆ ಎಂದು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಹೇಳಿದರು.

    ತಾಲೂಕಿನ ಬ್ಯಾಹಟ್ಟಿಯಲ್ಲಿ ರಸ್ತೆ ಕಾಮಗಾರಿಗೆ ಹಾಗೂ ಇಂಗಳಹಳ್ಳಿಯಲ್ಲಿ 10 ಶಾಲಾ ಕೊಠಡಿಗಳ ನಿರ್ವಣಕ್ಕೆ ಗುರುವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

    ಎರಡನೇ ಬಾರಿ ಶಾಸಕರಾಗಿ ಆಯ್ಕೆಯಾದ ಮುನೇನಕೊಪ್ಪ ಅವರು ನಿರಂತರ ಜನ ಸಂಪರ್ಕದಲ್ಲಿರುತ್ತಾರೆ. ಸಾರ್ವಜನಿಕರ ಬೇಕು ಬೇಡಿಕೆಗಳನ್ನು ಆಲಿಸುತ್ತಾರೆ. ಅದೇ ರೀತಿ ಶಿಕ್ಷಣದ ಉನ್ನತೀಕರಣಕ್ಕೆ ಪಣ ತೊಟ್ಟು ವಿವಿಧ ಅನುದಾನಗಳ ಅಡಿ ಕ್ಷೇತ್ರದ

    ಹಲವು ಶಾಲೆಗಳಿಗೆ ಕೊಠಡಿಗಳನ್ನು ನಿರ್ವಿುಸಿ ಕೊಡುತ್ತಿದ್ದಾರೆ. ಶೈಕ್ಷಣಿಕ ಕ್ಷೇತ್ರಕ್ಕೆ ಇದು ದೊಡ್ಡ ಕೊಡುಗೆಯಾಗಲಿದೆ ಎಂದು ಬಣ್ಣಿಸಿದರು.

    ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದಂದೇ ಈ ಕಾರ್ಯಕ್ರಮ ಆಯೋಜಿಸಿರುವುದು ಹೆಚ್ಚು ಮಹತ್ವ ಪಡೆದಿದೆ ಎಂದ ಶೆಟ್ಟರ್, ಧಾರವಾಡ ಜಿಲ್ಲೆಯ ಪ್ರತಿ ಗ್ರಾಮಕ್ಕೆ ಮಲಪ್ರಭಾ ಕುಡಿಯುವ ನೀರು ಪೂರೈಸುವ ಯೋಜನೆ ರೂಪಿಸಲಾಗಿದ್ದು, ಅತೀ ಶೀಘ್ರದಲ್ಲಿ ಡಿಪಿಆರ್ ಕೂಡ ಸಿದ್ಧಗೊಳ್ಳಲಿದೆ ಎಂದರು.

    ಈ ಹಿಂದೆ ಡಾ. ಪರಮಶಿವಯ್ಯ ಅವರಿಂದ ಅಧ್ಯಯನ ಮಾಡಿಸಿ ಬೆಣ್ಣಿ ಹಳ್ಳದ ನೀರು ಸದ್ಬಳಕೆಗೆ ಯೋಜನೆ ರೂಪಿಸಲಾಗಿದೆ. ಈ ಕಾರ್ಯದಲ್ಲಿ ಶಾಸಕ ಮುನೇನಕೊಪ್ಪರ ಶ್ರಮ ಬಹಳಷ್ಟಿದೆ ಎಂದರು. ಜಿಪಂ ಮಾಜಿ ಅಧ್ಯಕ್ಷೆ ಚೈತ್ರಾ ಶಿರೂರ, ಕ್ರೆಡಲ್ ಮಾಜಿ ಅಧ್ಯಕ್ಷ ಷಣ್ಮುಖ ಗುರಿಕಾರ, ಬಸವರಾಜ ಬೀರಣ್ಣವರ, ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರ ಎಸ್.ಬಿ. ಚೌಡಯ್ಯ ನವರ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಎಚ್.ಜಿ. ಗುಂಡೆಳ್ಳಿ, ಸೋಮಶೇಖರ ನೂಲ್ವಿ, ಸಿ.ವಿ. ಪಾಟೀಲ, ಇತರರು ಇದ್ದರು. ಬಿಇಒ ಅಶೋಕ ಸಿಂದಗಿ ಸ್ವಾಗತಿಸಿದರು. ಶರಣು ಪಟ್ಟೇದ ಕಾರ್ಯಕ್ರಮ ನಿರೂಪಿಸಿದರು.
    ಮೃತ್ಯುಂಜಯಪ್ಪಗಳ ಆಶೀರ್ವಾದ
    ಶಾಸಕ ಹಾಗೂ ಕೆಯುಐಡಿಎಫ್​ಸಿ ಅಧ್ಯಕ್ಷ ಶಂಕರ ಪಾಟೀಲ ಮುನೇನಕೊಪ್ಪ ಮಾತನಾಡಿ, ಇಂಗಳಹಳ್ಳಿಯಲ್ಲಿ ಹುಟ್ಟಿದ ಮೃತ್ಯುಂಜಯ ಅಪ್ಪಗಳು ಕಲಿತ ಶಾಲೆ ಕಟ್ಟಡ ಮಳೆಯಿಂದ ಹಾನಿಯಾಗಿತ್ತು. ಇದೀಗ ಶ್ರೀಗಳ ಆಶೀರ್ವಾದದಿಂದ ಇಂಗಳಹಳ್ಳಿಯೂ ಸೇರಿ ಕ್ಷೇತ್ರದ 201 ಶಾಲೆ ಕೊಠಡಿ ನಿರ್ವಣಕ್ಕೆ ಭೂಮಿಪೂಜೆ ಮಾಡಲಾಗಿದೆ. ರೈತರ ಮಕ್ಕಳು ಶಿಕ್ಷಣಕ್ಕಾಗಿ ಪರ ಊರಿಗೆ ಹೋಗುವಂತಾಗಬಾರದು. ಊರಲ್ಲೇ ಸುಸಜ್ಜಿತ ಶಾಲೆ ಇರಬೇಕು. ಉತ್ತಮ ಶಿಕ್ಷಣ ಸಿಗಬೇಕು ಎಂದು ಈ ಕಾರ್ಯ ಮಾಡಿದ್ದೇನೆ ಎಂದರು. ಜಿಲ್ಲೆಯ 388 ಹಳ್ಳಿಗಳಿಗೆ ಮಲಪ್ರಭಾ ನೀರು ತಲುಪಿಸುವ ಯೋಜನೆ ರೂಪಿಸಲಾಗಿದೆ. ಬೆಣ್ಣಿ ಹಳ್ಳದ ನೀರು ಸದ್ಬಳಕೆಗೆ ಕ್ರಮ ಕೈಗೊಳ್ಳಲಾಗುವದು. ಇಂಗಳಹಳ್ಳಿ- ಗದಗ ರಸ್ತೆ ಸಂಪರ್ಕ ಮಾರ್ಗ ದುರಸ್ತಿಗೆ ಹಣ ಒದಗಿಸಲಾಗಿದೆ ಎಂದು ಅವರು ಹೇಳಿದರು.

    ಬ್ಯಾಹಟ್ಟಿಯಲ್ಲಿ 4.5 ಕೋಟಿ ರೂಪಾಯಿ ರಸ್ತೆ ಕಾಮಗಾರಿ
    ಬ್ಯಾಹಟ್ಟಿ- ಕುಸುಗಲ್ಲವರೆಗಿನ ರಸ್ತೆ ಅಭಿವೃದ್ಧಿಯ 4.50 ಕೋಟಿ ರೂ. ವೆಚ್ಚದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಶಂಕರಪಾಟೀಲ ಮುನೇನಕೊಪ್ಪ, ಬ್ಯಾಹಟ್ಟಿ, ತಿರ್ಲಾಪುರ ಮೂಲಕ ನವಲಗುಂದ ಹೋಗುವ ರಸ್ತೆ ಅಭಿವೃದ್ಧಿಗೂ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

    ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಅವರ ಅಭಿವೃದ್ಧಿ ಪೂರಕ ಸಹಕಾರದಿಂದಾಗಿ ಈ ಎಲ್ಲ ಕೆಲಸ ಕಾರ್ಯಗಳು ಆಗುತ್ತಿವೆ ಎಂದರು. ಭೂಮಿಪೂಜೆ ನೆರವೇರಿಸಿದ ಸಚಿವ ಜಗದೀಶ ಶೆಟ್ಟರ್ ಮಾತನಾಡಿ, ಅತಿವೃಷ್ಟಿಯಿಂದಾಗಿ ಎಲ್ಲ ಕಡೆ ರಸ್ತೆಗಳು ಹಾಳಾಗಿವೆ. ಶಾಸಕ ಮುನೇನಕೊಪ್ಪ ಅವರು ತಮ್ಮ ಕ್ಷೇತ್ರದ ರಸ್ತೆ ಸುಧಾರಣೆಗೆ ಹೆಚ್ಚು ಶ್ರಮಿಸುತ್ತಿದ್ದಾರೆ. ಬ್ಯಾಹಟ್ಟಿ ಊರಲ್ಲಿ ಗಾಂಧಿ ವೃತ್ತ ಅಭಿವೃದ್ಧಿ ಹಾಗೂ ನಗರದ ಮಾದರಿಯಲ್ಲಿ ಎರಡೂ ಕಡೆ ಪೇವರ್ಸ್, ಫುಟ್​ಪಾತ್ ನಿರ್ವಿುಸಲಾಗುವುದು. ಊರಿನ ಆಚೆ ರಸ್ತೆ ಸುಧಾರಣೆ ಮಾಡಲಾಗುತ್ತದೆ ಎಂದರು. ನವಲಗುಂದ ವಿಧಾನಸಭಾ ಕ್ಷೇತ್ರವನ್ನು ಮಾದರಿಯಾಗಿಸಲು ಶಾಸಕರು ಅವಿರತ ದುಡಿಯುತ್ತಿದ್ದಾರೆ ಎಂದು ಶೆಟ್ಟರ್ ಮೆಚ್ಚುಗೆ ವ್ಯಕ್ತಪಡಿಸಿದರು. ತಾಪಂ ಸದಸ್ಯೆ ಸರೋಜಾ ಅಳಗವಾಡಿ, ಜಿಲ್ಲಾ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸಂತೋಷ ಜೀವನಗೌಡ್ರ, ಕಲ್ಲಪ್ಪ ಗಿಡ್ನವರ, ಪಮ್ಮು ಯಡ್ರಾವಿ, ಜಗದೀಶ ರೂಗಿ, ಮಲ್ಲಪ್ಪ ಕೋರಿ, ಮಹದೇವಪ್ಪ ಐಗರ, ಶಕುಂತಲಾ ಚರಂತಿಮಠ, ಗುರಪ್ಪ ಕಪಲಿ, ಜಿಪಂ ಮಾಜಿ ಸದಸ್ಯೆ ಮಾದೇವಿ ಗಿಡ್ನವರ, ರೋಹಿತ ಮತ್ತಿಹಳ್ಳಿ, ಕಲ್ಲಪ್ಪ ಬಿಕ್ಕನ್ನವರ, ಜೆ. ಬೈಲಮ್ಮನವರ ಇತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts