More

    ಶಿಕ್ಷಣದಿಂದ ಸರ್ವಸಿದ್ಧಿ

    ಮೋರಟಗಿ: ಶಿಕ್ಷಣ ಎನ್ನುವುದು ಹುಲಿಯ ಹಾಲಿದ್ದಂತೆ ಅದನ್ನು ಸೇವಿಸಿದ ವಿದ್ಯಾರ್ಥಿಗಳು ಘರ್ಜಿಸಲೇಬೇಕು. ಶಿಕ್ಷಣವೇ ಶಕ್ತಿ ಶಿಕ್ಷಣದಿಂದ ಸರ್ವ ಸಿದ್ದಿ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಡಾ. ಚಂದ್ರಶೇಖರ ಹೊಸಮನಿ ಹೇಳಿದರು.

    ಗ್ರಾಮದ ಕಲ್ಪವೃಕ್ಷ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರಥಮ ಪಿಯು ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ 2023-24ನೇ ಸಾಲಿನ ಪಠ್ಯಪೂರಕ ಚಟುವಟಿಕೆ ಉದ್ಘಾಟನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

    ಸದ್ಯದ ಪರಿಸ್ಥಿತಿಯಲ್ಲಿ ಶಿಕ್ಷಣದ ಬೇರುಗಳು ಕಹಿ ಅನಿಸಬಹುದು. ಮುಂದೆ ಅದರ ಫಲ ಬಹಳಷ್ಟು ಸಿಹಿ ಆಗಿರುತ್ತದೆ. ಇದನ್ನು ಅರಿತು ವಿದ್ಯಾರ್ಥಿಗಳು ಗುರಿಯಿಟ್ಟುಕೊಂಡು ಗುರುಗಳ ಮಾರ್ಗದರ್ಶನದಲ್ಲಿ ನಡೆಯಬೇಕು ಎಂದರು.

    ಜಿಪಂ ಮಾಜಿ ಸದಸ್ಯ ಎನ್.ಆರ್. ತಿವಾರಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಹುಟ್ಟಿರುವ ಕಲ್ಪವೃಕ್ಷ ವಿದ್ಯಾಸಂಸ್ಥೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದರಿಂದ ಬಡತನ ರೇಖೆಗಿಂತ ಕೆಳಗಿರುವ ಬಡ ವಿದ್ಯಾರ್ಥಿಗಳು ಇಂದು ಜಿಲ್ಲೆಯಷ್ಟೇ ಅಲ್ಲ ರಾಜ್ಯದಲ್ಲಿ ಮೋರಟಗಿ ಗ್ರಾಮದ ಹೆಸರು ಮುಗಿಲೆತ್ತರಕ್ಕೆ ಬೆಳೆಸಿದ್ದಾರೆ. ಉತ್ತಮ ಬೋಧನೆ ನೀಡುತ್ತಿರುವ ಗುರುವೃಂದಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

    ವಿದ್ಯಾರ್ಥಿ ಗುರುರಾಜ ಗೌನಳ್ಳಿ ಗೆ ಸನ್ಮಾನ: ಸಮೀಪದ ಕುಳೇಕುಮಟಗಿ ಗ್ರಾಮದ ಗುರುರಾಜ ಗೌನಳ್ಳಿ ಕಳೆದ 2023ನೇ ಸಾಲಿನ ಪಿಯುಸಿ ಪರೀಕ್ಷೆ ವಿಜ್ಞಾನ ವಿಭಾಗದಲ್ಲಿ 600ಕ್ಕೆ 591ಅಂಕಗಳನ್ನು ಪಡೆದು ರಾಜ್ಯಕ್ಕೆ 6ನೇ ಸ್ಥಾನ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದು ಸಂಸ್ಥೆಯ ವತಿಯಿಂದ ಸನ್ಮಾನಿಸಿದರು.

    ಸಂಸ್ಥೆಯ ಅಧ್ಯಕ್ಷ ಶಿವಶರಣಗೌಡ ಬಿರಾದಾರ, ಅಂಜುಮನ್ ಸಮಿತಿ ಕಾರ್ಯದರ್ಶಿ ಎಂ.ಕೆ. ಕಣ್ಣಿ, ಎಸ್.ಎಚ್. ದುಳಬಾ, ಎ.ಬಿ. ಸಿಂದಗಿ, ಎಸ್.ವಿ. ಬಿರಾದಾರ, ಎಸ್.ಬಿ. ಬಿರಾದಾರ, ಎಸ್.ಎಸ್. ಮಲ್ಲೇದ, ಎಲ್.ಎ. ಸುಲ್ತಾನಪುರ, ಪ್ರಕಾಶ ನೆಲ್ಲಗಿ, ಜಿಲಾನಿ ನಾಗಾವಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts