More

    ಶಿಕ್ಷಣದಿಂದ ಮಾತ್ರ ಬಡತನ ನಿಮೂಲನೆ

    ರಾಣೆಬೆನ್ನೂರ: ಶಾಲೆಗಳು ಅಭಿವೃದ್ಧಿಯಾದರೆ ಗ್ರಾಮಗಳು ಏಳಿಗೆಯಾಗುತ್ತವೆ. ಮಕ್ಕಳಿಗೆ ಉತ್ತಮ ಶಿಕ್ಷಣ, ಸಂಸ್ಕಾರ, ಗುರು ಹಿರಿಯರನ್ನು ಗೌರವಿಸುವ ಶಿಕ್ಷಣ ನೀಡಿ ಸಮಾಜದಲ್ಲಿ ಉತ್ತಮ ನಾಗರಿಕರನ್ನಾಗಿ ಮಾಡುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಶಾಸಕ ಅರುಣಕುಮಾರ ಪೂಜಾರ ಹೇಳಿದರು.

    ತಾಲೂಕಿನ ಚಿಕ್ಕಅರಳಿಹಳ್ಳಿ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ಸ್ಮಾರ್ಟ್ ಕ್ಲಾಸ್ ಉದ್ಘಾಟನೆ ಹಾಗೂ ಶಾಲೆ ಶತಮಾನೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

    ಶಿಕ್ಷಣದಿಂದ ಮಾತ್ರ ಬಡತನ ನಿಮೂಲನೆ ಸಾಧ್ಯ. ಜ್ಞಾನದ ಜ್ಯೋತಿಯನ್ನು ಮಕ್ಕಳಿಗೆ ಬಿತ್ತರಿಸಿದರೆ, ಅದೇ ಜ್ಯೋತಿ ಪ್ರಜ್ವಲಿಸಿ ಸಮಾಜಕ್ಕೆ ಬೆಳಕು ನೀಡಬಲ್ಲದು. ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಕೊಡಿಸುವುದರ ಜತೆಗೆ ಅವರ ಆಗು ಹೋಗುಗಳ ಬಗ್ಗೆ ಪಾಲಕರು ಗಮನ ಹರಿಸಬೇಕು ಎಂದರು.

    ಮಾಜಿ ಸಚಿವ ಆರ್. ಶಂಕರ್, ಡಿಡಿಪಿಐ ಅಂದಾನೆಪ್ಪ ವಡಗೇರ, ಬಿಇಒ ಎನ್. ಶ್ರೀಧರ, ಎಸ್​ಡಿಎಂಸಿ ಅಧ್ಯಕ್ಷ ಸುರೇಶ ಬೂದಗಟ್ಟಿ, ಜಿಪಂ ಸದಸ್ಯ ಏಕನಾಥ ಬಾನುವಳ್ಳಿ, ಮುಖ್ಯಶಿಕ್ಷಕ ಅರುಣಕುಮಾರ ಬಾಗಲವರ, ಪ್ರಮುಖರಾದ ವಿಶ್ವನಾಥ ಪಾಟೀಲ, ಚೋಳಪ್ಪ ಕಸವಾಳ, ದಿನೇಶ ಮರೋಳ, ನಾಗರಾಜ ಲಮಾಣಿ, ಬಸವರಾಜ ಕೇಲಗಾರ, ಮಾಲತೇಶ ಜಾಧವ, ರಾಜು ಅಡಿವೆಪ್ಪನವರ, ಮಂಜುನಾಥ ಓಲೇಕಾರ ಹಾಗೂ ಶಾಲಾ ಸಿಬ್ಬಂದಿ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts