More

    ಶಿಕ್ಷಕರ ಪರ ಸೇವೆ ಮಾಡಲು ಸ್ಪರ್ಧೆ

    ಚಿತ್ರದುರ್ಗ: ಶಿಕ್ಷಕರ ಪರ ಸೇವೆ ಮಾಡುವ ಉದ್ದೇಶದಿಂದಾಗಿಯೇ ಈ ಬಾರಿಯ ವಿಧಾನಪರಿಷತ್ ಚುನಾವಣೆ ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ಸ್ಪರ್ಧಿಸುತ್ತಿದ್ದೇನೆ ಎಂದು ಪಕ್ಷೇತರ ಅಭ್ಯರ್ಥಿ ಲೋಕೇಶ್ ತಾಳಿಕಟ್ಟೆ ತಿಳಿಸಿದರು.

    ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಿಕ್ಷಕರಿಗೆ ಒಪಿಎಸ್ ಕೊಡಿಸುವ, ಬಡ್ತಿ ಪಡೆದವರಿಗೆ ಟೈಮ್ ಬಾಂಡ್ ಮತ್ತು ಇನ್ಕ್ರಿಮೆಂಟ್, ವೇತನ ತಾರತಮ್ಯ ಸರಿಪಡಿಸುವ, ಅನುದಾನ ರಹಿತ ಶಾಲಾ-ಕಾಲೇಜುಗಳ ಶಿಕ್ಷಕರ-ಉಪನ್ಯಾಸಕರ ಸೇವಾ ಭದ್ರತೆಯೇ ನನ್ನ ಪ್ರಮುಖ ಆದ್ಯತೆ ಎಂದರು.

    ಸಮಾನ ವೇತನ ಜಾರಿಗೆ ಪ್ರಯತ್ನ, 1995ರ ನಂತರದ ಕನ್ನಡ ಮತ್ತು ಇತರೆ ಭಾಷೆಗಳ ಎಲ್ಲ ಶಾಲೆಗಳನ್ನು ಅನುದಾನ ವ್ಯಾಪ್ತಿಗೆ ಒಳಪಡಿಸುವುದು ಸೇರಿ ಇತರೆ ಬೇಡಿಕೆ ಈಡೇರಿಸುವುದಕ್ಕಾಗಿ ಹೋರಾಡಲು ಸ್ಪರ್ಧಿಸುತ್ತಿದ್ದೇನೆ ಎಂದರು.

    ಎಂಎಲ್ಸಿ ವೈ.ಎ.ನಾರಾಯಣಸ್ವಾಮಿ ಅವರು ಬೇಡಿಕೆ ಈಡೇರಿಸುವಲ್ಲಿ ವಿಫಲರಾಗಿದ್ದಾರೆ. ಸಮಸ್ಯೆಗಳಿಗೆ ಸ್ಪಂದಿಸಿ, ಧ್ವನಿ ಎತ್ತುವ ಕೆಲಸ ಮಾಡಿಲ್ಲ. ಹೀಗಾಗಿ ಅನುದಾನಿತ ಶಾಲೆಗಳಲ್ಲಿನ ಖಾಲಿ ಇರುವ ಎಲ್ಲ ಹುದ್ದೆಗಳ ಭರ್ತಿಗೂ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ಒಮ್ಮೆ ಅವಕಾಶ ಮಾಡಿಕೊಡಿ ಎಂದು ಕೋರಿದರು.

    ರುಪ್ಸಾ ಸಂಘಟನೆ ಉಪಾಧ್ಯಕ್ಷ ವೆಂಕಟೇಶ್, ಯಾದಲಗಟ್ಟ ಜಗನ್ನಾಥ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts