More

    ಶಾಸಕರ ತೆಪ್ಪ ಸವಾರಿಗೆ ಜನರ ಟೀಕೆ

    ಯಳಂದೂರು: ಕೊಳ್ಳೇಗಾಲ ಮೀಸಲು ವಿಧಾನಸಭಾ ಕ್ಷೇತ್ರದ ಶಾಸಕ ಎನ್. ಮಹೇಶ್ ಪ್ರವಾಹದ ಹಿನ್ನೆಲೆಯಲ್ಲಿ ತಾಲೂಕಿನ ಮಾಂಬಳ್ಳಿ ಗ್ರಾಮದಲ್ಲಿ ನಡೆದುಕೊಂಡು ಹೋಗಬಹುದಾದ ನೀರಿನಲ್ಲಿ ತೆಪ್ಪ ಬಳಸಿ ಹೋಗಿರುವ ಘಟನೆ ಬಗ್ಗೆ ಸಾರ್ವಜನಿಕರಿಂದ ಟೀಕೆ ವ್ಯಕ್ತವಾಗಿದೆ.


    ಶಾಸಕರು ಕೇವಲ ಪ್ರಚಾರಕ್ಕೆ ಬೇಕಾದ ಎಲ್ಲ ರೀತಿಯ ಗಿಮಿಕ್‌ಗಳನ್ನು ಬಳಸುತ್ತಿದ್ದಾರೆ. ನೆರೆ ವೀಕ್ಷಣೆಗೆ ತೆರಳಿ ಮಾಂಬಳ್ಳಿ ಗ್ರಾಮದಲ್ಲಿ ಸುವರ್ಣಾವತಿ ನದಿಯಲ್ಲಿನ ಪ್ರವಾಹದ ವೀಕ್ಷಣೆಗೆ ತೆರಳಿದ್ದಾರೆ. ಈ ಸಂದರ್ಭದಲ್ಲಿ ಇವರು ತೆಪ್ಪದ ಮೇಲೆರಿದ್ದಾರೆ. ಆದರೆ, ಇದಕ್ಕೆ ಹುಟ್ಟು ಹಾಕುವ ಬದಲು ಇವರ ಬೆಂಬಲಿಗರು ಹಾಗೂ ಇದನ್ನು ತಳ್ಳುತ್ತಾ ಸಾಗುತ್ತಿದ್ದಾರೆ. ಆದರೆ, ಇಲ್ಲಿ ಎರಡು, ಮೂರು ಅಡಿಗಳಷ್ಟು ನೀರು ಮಾತ್ರ ಇದೆ. ತೆಪ್ಪದಲ್ಲಿ ಸಾಗುವ ಶಾಸಕರು ನಂತರ ಇಳಿದು ನೀರಿನಲ್ಲಿ ನಡೆದುಕೊಂಡು ಹೋಗುತ್ತಾರೆ. ಜತೆಗೆ ಈ ನೀರಿನಲ್ಲಿ ಕೈತೊಳೆದುಕೊಳ್ಳುತ್ತಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.


    ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಇದಕ್ಕೆ ಸ್ಪಷ್ಟನೆ ನೀಡಿರುವ ಶಾಸಕರು, ನನಗೆ ಆ ದಿನ ಜ್ವರ ಇತ್ತು, ನೀರಿನಲ್ಲಿ ಇಳಿದರೆ ಇದು ಮತ್ತಷ್ಟು ಉಲ್ಬಣಗೊಳ್ಳುವ ಸಾಧ್ಯತೆ ಇತ್ತು. ಹಾಗಾಗಿ ನಾನು ನೀರಿನಲ್ಲಿ ಇಳಿಯಲಿಲ್ಲ ಎಂದಿದ್ದಾರೆ. ಇದಕ್ಕೂ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದು ನಂತರ ಇವರು ನೀರಿನಲ್ಲಿ ನಡೆದುಕೊಂಡು ಸಾಗಿದ್ದು ಏಕೆ? ನೀರಿನಲ್ಲಿ ಕೈ ತೊಳೆದಿದ್ದು ಏಕೆ? ಎಂದು ಶಾಸಕರ ಕಾಲೆಳೆದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts