More

    ಶಾಸಕರು ಎಷ್ಟು ನೀರಿನ ಘಟಕ ತೆರೆದಿದ್ದಾರೆ?

    ಬೈಲಕುಪ್ಪೆ: ನಾನು ಶಾಸಕನಾಗಿದ್ದಾಗ ಈ ಗ್ರಾಮ ಪಂಚಾಯಿತಿ ವ್ಯಾಪ್ತಿ ಎಲ್ಲ ಹಳ್ಳಿಗಳಿಗೂ ರಸ್ತೆ, ಒಳಚರಂಡಿ, ಕುಡಿಯುವ ನೀರು ಸೇರಿದಂತೆ ಬೈಲಕುಪ್ಪೆ ಕೆ.ವೆಂಕಟೇಶ್ ಬಡಾವಣೆಗೆ ನಿವೇಶನ ಹಕ್ಕುಪತ್ರ ನೀಡಿ ಮನೆ ನಿರ್ಮಿಸಿದ್ದೆ ಎಂದು ಹೇಳಿ ತಾಲೂಕಿನಾದ್ಯಂತ 60ರಿಂದ 70 ಶುದ್ಧ ಕುಡಿಯುವ ನೀರಿನ ಘಟಕ ತೆರೆದಿದ್ದೆ. ಈಗಿನ ಶಾಸಕರು ಎಷ್ಟು ನೀರಿನ ಘಟಕ ತೆರೆದಿದ್ದಾರೆ ಎಂದು ಮಾಜಿ ಶಾಸಕ ಕೆ.ವೆಂಕಟೇಶ್ ಪ್ರಶ್ನಿಸಿದರು.


    ಪಿರಿಯಾಪಟ್ಟಣ ತಾಲೂಕಿನ ಬೈಲಕುಪ್ಪೆ ವೆಂಕಟೇಶ್ ಬಡಾವಣೆ ಮತ್ತು ಹಳೆಯೂರು ಗ್ರಾಮದ ಜನರಿಗೆ ಗ್ರಾಪಂ ಸದಸ್ಯರು ಸ್ವಂತ ಹಣದಲ್ಲಿ ಶುದ್ಧ ಕುಡಿಯುವ ನೀರಿನ ಶೇಖರಣೆ ಕ್ಯಾನ್ ಹಾಗೂ ಪಾತ್ರೆಗಳನ್ನು ಮಂಗಳವಾರ ವಿತರಿಸಿ ಮಾತನಾಡಿ, ನನ್ನ ಆಹ್ವಾನಿಸಿದ್ದ ಕಾಂಗ್ರೆಸ್ ಮುಖಂಡರಿಗೆ ನಾನು ಸರ್ಕಾರಿ ಕಾರ್ಯಕ್ರಮಕ್ಕೆ ಬರುವುದಿಲ್ಲ ಎಂದು ಹೇಳಿದ್ದೆ. ಇದು ನಮ್ಮ ಸ್ವಂತ ಹಣದಲ್ಲಿ ಶುದ್ಧ ಕುಡಿಯುವ ನೀರಿನ ಕ್ಯಾನ್ ವಿತರಣೆ ಕಾರ್ಯಕ್ರಮ ಆಯೋಜಿಸಿರುವುದಾಗಿ ಬೈಲಕುಪ್ಪೆ ಗ್ರಾಪಂ ಸದಸ್ಯರು ಆಹ್ವಾನಿಸಿದ್ದಕ್ಕೆ ಇಲ್ಲಿಗೆ ಬಂದಿದ್ದೇನೆ ಎಂದು ಮಾಜಿ ಶಾಸಕ ಕೆ.ವೆಂಕಟೇಶ್ ತಿಳಿಸಿದರು.


    ಕೇಂದ್ರದಲ್ಲಿ ಮನಮೋಹನ್ ಸಿಂಗ್ ಪ್ರಧಾನಿ ಆಗಿದ್ದಾಗಲೇ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆ ಜಾರಿಗೆ ತಂದರು. ಈ ಕಾಮಗಾರಿಗಳನ್ನು ಆಯಾ ಗ್ರಾಮ ಪಂಚಾಯಿತಿಯ ಆಡಳಿತ ಮಂಡಳಿ ಅಧ್ಯಕ್ಷರು ಭೂಮಿಪೂಜೆ ಮಾಡಬೇಕಾಗಿದ್ದನ್ನು ಈಗಿನ ಶಾಸಕರೇ ಉದ್ಘಾಟಿಸುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
    ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಬಡವರಿಗೆ ಅಕ್ಕಿ ವಿತರಣೆ, ಶಾಲಾ ಮಕ್ಕಳಿಗೆ ವಿವಿಧ ಯೋಜನೆ ಜಾರಿಗೆ ತಂದರು. ಈಗಿನ ಸರ್ಕಾರ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿಸಿ ಜನಸಾಮಾನ್ಯರನ್ನು ಸುಲಿಗೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.


    ಬೈಲಕುಪ್ಪೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಮಾ ಪ್ರಭಾಕರ, ಉಪಾಧ್ಯಕ್ಷೆ ಗೀತಾ ರಾಮು, ಕಾಂಗ್ರೆಸ್ ಮುಖಂಡ ಬಸವರಾಜ್, ಸದಸ್ಯರಾದ ರಘು, ನಿಸಾರ್ ಅಹಮದ್, ಸುರೇಶ್, ರಾಜು, ನವೀನ್. ಬಿ ಎನ್.ರಘು, ದಾವುದ್, ಗೀತಾ ಸುಬ್ರಹ್ಮಣ್ಯ, ಶಿವಮ್ಮ, ಭಾರತಿ ಪ್ರಕಾಶ್, ನಂಜುಂಡಸ್ವಾಮಿ, ಐಶಾ ಎಲಿಜಬತ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಂಜೇಶ್, ಗ್ರಾಮದ ಮುಖಂಡರಾದ ರಾಮೇಗೌಡ, ವರ್ಗೀಶ್, ವೀರಭದ್ರಯ್ಯ, ಶಿವಣ್ಣ ಸೇರಿದಂತೆ ಮತ್ತಿತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts