More

  ಇಬ್ಬರು ಬೈಕ್ ಸವಾರರ ದುರ್ಮರಣ

  ಬೈಲಕುಪ್ಪೆ: ಗ್ರಾಮದ ಚೌಡಮ್ಮನ ದೇವಸ್ಥಾನ ಮುಖ್ಯರಸ್ತೆಯಲ್ಲಿ ಕಾಂಪೌಂಡ್‌ಗೆ ಡಿಕ್ಕಿ ಹೊಡೆದ ಬೈಕ್ ಸವಾರರಿಬ್ಬರು ಮಂಗಳವಾರ ಸಾವಿಗೀಡಾಗಿದ್ದಾರೆ.


  ಪಿರಿಯಾಪಟ್ಟಣ ತಾಲೂಕಿನ ಗುಡ್ಡೇನಹಳ್ಳಿ ಗ್ರಾಮದ ನಾರಾಯಣ ಅವರ ಪುತ್ರ ಬೈಕ್ ಸವಾರ ಪೃಥ್ವಿ (22), ಹಿಂಬದಿ ಸವಾರ ಲಕ್ಷ್ಮೀಪುರ ಗ್ರಾಮದ ರಾಜು ಅವರ ಮಗ ಅಶೋಕ (21) ಮೃತಪಟ್ಟವರು.


  ಬೈಕ್‌ನಲ್ಲಿ ಚೌಡಮ್ಮ ದೇವಸ್ಥಾನದ ಮುಖ್ಯರಸ್ತೆಯಿಂದ ಗೋಲ್ಡನ್ ಟೆಂಪಲ್ ಕಡೆಗೆ ಹೋಗುವಾಗ ರಸ್ತೆ ಪಕ್ಕದ ಕಾಂಪೌಂಡ್‌ಗೆ ಡಿಕ್ಕಿ ಹೊಡೆದ ರಭಸಕ್ಕೆ ಇಬ್ಬರು ಸವಾರರು ತೀವ್ರವಾಗಿ ಗಾಯಗೊಂಡಿದ್ದರು. ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ.


  ಕುಶಾಲನಗರ ಸಾರ್ವಜನಿಕ ಆಸ್ಪತ್ರೆ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ನೀಡಲಾಯಿತು. ಬೈಲಕುಪ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  See also  ಪರಿಶುದ್ಧ ಕಾಯಕದ ಹಣದಿಂದ ದಾಸೋಹ ನಡೆಸಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts