More

    ಶಾಲಾ ಅಭಿವೃದ್ಧಿಗೆ ಪಿಡಿಒಗಳ ಸಹಕಾರ ಅಗತ್ಯ

    ಚಿತ್ರದುರ್ಗ: ಸಮಾಜದಲ್ಲಿ ಒಳ್ಳೆಯ ನಾಗರಿಕರಾಗಿ ಉತ್ತಮ ಜೀವನ ನಡೆಸಲು ಶಿಕ್ಷಣ ದಾರಿ ದೀಪವಾಗಿದೆ ಎಂದು ಡಯಟ್ ಪ್ರಾಚಾರ್ಯ ಎಂ.ನಾಸಿರುದ್ದೀನ್ ಹೇಳಿದರು.
    ನಗರದ ಡಯಟ್‌ನಲ್ಲಿ ಸರ್ಕಾರಿ ಶಾಲೆಗಳ ಶೈಕ್ಷಣಿಕ ಅಭಿವೃದ್ಧಿಯಲ್ಲಿ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ ಪಾತ್ರ ಕುರಿತು ಜಿಲ್ಲೆಯ ಪಿಡಿಒ ಗಳಿಗೆ ಸೋಮವಾರ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು,ಪ್ರತಿ ಮಗುವಿಗೂ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಶಿಕ್ಷಕರು,ಪಾಲಕರು,ಅನುಷ್ಠಾನಾಧಿಕಾರಿಗಳು,ಪಿಡಿಒಗಳು ಮತ್ತು ಎಲ್ಲ ಶೈಕ್ಷಣಿಕ ಭಾಗೀದಾರರ ಪಾತ್ರ ಮುಖ್ಯವಾಗಿದೆ.
    ಶಿಕ್ಷಣದಿಂದ ಯಾವುದೇ ಮಗು ವಂಚಿತವಾಗಬಾರದು. ಗ್ರಾಪಂ ವ್ಯಾಪ್ತಿಯ ಎಲ್ಲ ಮಕ್ಕಳು ಶಿಕ್ಷಣ ಪಡೆಯಲು ಮತ್ತು ಎಲ್ಲ ಪ್ರಾಥ ಮಿಕ ಮತ್ತು ಪ್ರೌಢಶಾಲೆಗಳ ಅಭಿವೃದ್ಧಿಯಲ್ಲಿ ಪಿಡಿಒಗಳ ಸಹಕಾರ ಅಗತ್ಯವೆಂದರು.
    ನೋಡಲ್ ಅಧಿಕಾರಿ ಎನ್.ರಾಘವೇಂದ್ರ ಉಪನ್ಯಾಸ ನೀಡಿದರು. ಹಿರಿಯ ಉಪನ್ಯಾಸಕರಾದ ಎಸ್.ಸಿ.ಪ್ರಸಾದ್,ಎಸ್.ಜ್ಞಾನೇ ಶ್ವ ರ,ಎಸ್.ಆರ್.ಪೂರ್ಣಿಮಾ,ಉಪನ್ಯಾಸಕರಾದ ಎಸ್.ಬಸವರಾಜು,ಕೆ.ಜಿ.ಪ್ರಶಾಂತ್, ಶಿಕ್ಷಕ ಪ್ರಸನ್ನಕುಮಾರ್ ಮತ್ತಿತರ ಅಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts