More

    ಶಾರದಾ ಸೊಸೈಟಿಯಲ್ಲಿ ಕಾಫಿ ಖರೀದಿ

    ಶೃಂಗೇರಿ: ರೈತರಿಗೆ ಹೆಚ್ಚಿನ ಧಾರಣೆ ನೀಡುವ ಭರವಸೆಯೊಂದಿಗೆ ಅಡಕೆ ವ್ಯಾಪಾರದೊಂದಿಗೆ ಕಾಫಿ ಖರೀದಿ ಆರಂಭಿಸಲಾಗಿದೆ ಎಂದು ಶಾರದಾ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಎಚ್.ಎಸ್.ಶಿವಶಂಕರ್ ಹೇಳಿದರು. ಮೆಣಸೆ ಸಂಘದ ಶಾಖೆಯಲ್ಲಿ ಶುಕ್ರವಾರ ಕಾಫಿ ಖರೀದಿಗೆ ಚಾಲನೆ ನೀಡಿ ಮಾತನಾಡಿದ ಅವರು, ಸಂಘದಿಂದ ರಿಪ್ಪನ್​ಪೇಟೆಯಲ್ಲಿ ಶೀಥಲಿಕರಣ ಘಟಕ ಸ್ಥಾಪಿಸಿ ರೈತರು ಬೆಳೆದ ಬೆಳೆಯನ್ನು ದಾಸ್ತಾನು ಮಾಡಲು ಅನುಕೂಲ ಕಲ್ಪಿಸಲಾಗಿದೆ. ಶೃಂಗೇರಿ, ಹೊಸನಗರ, ಶಿವಮೊಗ್ಗ, ಕಳಸದಲ್ಲಿ ಶಾಖೆ ಸ್ಥಾಪಿಸಿ ಅಡಕೆ ಖರೀದಿ ಮಾಡಲಾಗುತ್ತಿದೆ. ಶೃಂಗೇರಿ, ಕಳಸದಲ್ಲಿ ಕಾಫಿ ಖರೀದಿ ಆರಂಭಿಸಿ ರೈತರಿಗೆ ಹೆಚ್ಚಿನ ಧಾರಣೆ ನೀಡಲಾಗುತ್ತದೆ. ರೈತರ ಹಿತ ಕಾಪಾಡಲು ಸಂಘ ಹಲವಾರು ಕಾರ್ಯಕ್ರಮ ಆಯೋಜಿಸಿದೆ ಎಂದರು.

    ಸಂಸ್ಥೆ ನಿರ್ದೇಶಕ ಎಚ್.ಸಿ.ರಾಮಚಂದ್ರರಾವ್ ಮಾತನಾಡಿ, ಸ್ಥಳೀಯವಾಗಿ ಕಾಫಿ ಮುಖ್ಯ ಬೆಳೆಯಾಗಿದ್ದು, ಖರೀದಿ ಕೇಂದ್ರದಿಂದ ರೈತರಿಗೆ ಅನುಕೂಲವಾಗಲಿದೆ. ಸಂಸ್ಥೆ ಉತ್ತಮ ಗೋದಾಮು ಹೊಂದಿದ್ದು, ರೈತರು ದಾಸ್ತಾನು ಮಾಡಿ ಮಾರಾಟ ಮಾಡಬಹುದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts