More

    ಶತಮಾನೋತ್ಸವ ಹೊಸ್ತಿಲಲ್ಲಿ ಎಸ್‌ಎಸ್‌ಎಂಎಸ್ ಬ್ಯಾಂಕ್

    ಅಥಣಿ: ಶತಮಾನೋತ್ಸವ ಹೊಸ್ತಿಲಲ್ಲಿರುವ ಮುರುಘೇಂದ್ರ ಶಿವಯೋಗಿಗಳ ಸಹಕಾರಿ ಬ್ಯಾಂಕ್ ಸಾರ್ವಜನಿಕರಿಗೆ ಆರ್ಥಿಕ ಸದೃಡತೆ ಒದಗಿಸುವಲ್ಲಿ ಮುಂಚೂಣಿಯಲ್ಲಿದ್ದು, ತಾಲೂಕಿಗೆ ಮಾದರಿಯಾಗಿದೆ ಎಂದು ಗಚ್ಚಿನಮಠದ ಶಿವಬಸವ ಸ್ವಾಮೀಜಿ ಹೇಳಿದರು.

    ಪಟ್ಟಣದ ಎಸ್‌ಎಸ್‌ಎಂಎಸ್ ಬ್ಯಾಂಕಿನ ಶತಮಾನೋತ್ಸವ ನೆನಪಿನಲ್ಲಿ ನಿರ್ಮಿಸಿರುವ ಮೊದಲ ಮಹಡಿಯ ನವೀಕರಣ ಕಟ್ಟಡವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದ ಅವರು, ಅಥಣಿ ತಾಲೂಕಿನ ಸೌಭಾಗ್ಯ ಎನ್ನಬಹುದು. ಮುರುಘೇಂದ್ರ ಶಿವಯೋಗಿಗಳು ಬಸವ ತತ್ತ್ವವನ್ನು ನಾಡಿಗೆ ತಿಳಿಪಡಿಸುವ ಜತೆಗೆ ತಮ್ಮ ಬದುಕಿನುದ್ದಕ್ಕೂ ಅಳವಡಿಸಿಕೊಂಡು ನಡೆದು ತೋರಿದವರು. ಇದೀಗ ಅವರ ಹೆಸರಿನಲ್ಲಿರುವ ಬ್ಯಾಂಕ್ ಸಮೃದ್ಧವಾಗಿ ಬೆಳೆದು 100ರ ಗಡಿ ತಲುಪಿದೆ ಎಂದರು.

    ಶೆಟ್ಟರಮಠದ ಮರುಳಸಿದ್ದ ಸ್ವಾಮೀಜಿ ಮಾತನಾಡಿ, ಗ್ರಾಹಕರಿಗೆ ಉತ್ತಮ ಸೇವೆ ನೀಡಿ ಸಿಬ್ಬಂದಿ ಕ್ರಿಯಾಶೀಲರಾಗಿ ಶ್ರಮಿಸಿದರೆ ಬ್ಯಾಂಕುಗಳು ಉತ್ತಮವಾಗಿ ಸಾಗುತ್ತದೆ. ಈ ಬ್ಯಾಂಕ್ ಬೆಳೆಯಲು ತ್ರಿಮೂರ್ತಿಗಳಾದ ದಿ.ಸಿ.ಜಿ.ತೆಲಸಂಗ, ವಿ.ಜಿ.ತೆಲಸಂಗ, ಧರ್ಮಗೌಡ ಪಾಟೀಲ ಹಾಗೂ ಇನ್ನುಳಿದ ಎಲ್ಲ ಹಿರಿಯರ ಶ್ರಮ ಇಂದು ಶತಮಾನೋತ್ಸವಕ್ಕೆ ಬಂದು ನಿಂತಿದೆ ಎಂದರು. ಬ್ಯಾಂಕ್ ಅಧ್ಯಕ್ಷ ಸಂಜಯ ತೆಲಸಂಗ,ಉಪಾಧ್ಯಕ್ಷ ಮಹೇಂದ್ರ ಕಾವೇರಿ,ನಿರ್ದೇಶಕ ಡಾ.ರಮೇಶ ಮಂಗಸೂಳಿ,ಆರ.ಎ.ಹಿರೇಮಠ, ಐ.ಡಿ.ಪಾಟೀಲ, ಡಿ.ಎಸ್.ಹಡಪದ, ಎಸ್.ಎಂ.ಮಮದಾಪುರ, ಎಸ್.ಆರ್.ಹುನ್ನೂರ, ಡಿ.ಬಿ.ಬುರುಡ, ವಿ.ವಿ.ತೆಲಸಂಗ, ಎಸ್.ಎಸ್.ಅವಟಿ, ಎಸ್.ವಿ.ತೆಲಸಂಗ. ಡಾ.ಎಂ.ಜಿ.ಹಂಜಿ, ಪ್ರಕಾಶ ಮಹಾಜನ, ಎಂ.ಡಿ.ತೊದಲಬಾಗಿ, ಸಂತೋಷ ಶೆಟ್ಟಿ, ಅಜ್ಜಪ್ಪ ಕಾವೇರಿ, ಡಾ.ರಮೇಶ ಗುಳ್ಳ ಮತ್ತು ಬ್ಯಾಂಕ್ ಸಿಬ್ಬಂದಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts