More

    ಶತಕದ ಸಮೀಪಕ್ಕೆಕರೊನಾ ಸೋಂಕು

    ಕಾರವಾರ: ಜಿಲ್ಲೆಯ ಒಟ್ಟಾರೆ ಕೋವಿಡ್- 19 ಪ್ರಕರಣಗಳ ಸಂಖ್ಯೆ ಶತಕದ ಸಮೀಪಕ್ಕೆ ಬಂದು ನಿಂತಿದೆ. ಭಾನುವಾರ ಮತ್ತೆರಡು ಕರೊನಾ ಸೋಂಕಿತರು ಪತ್ತೆಯಾಗಿದ್ದು, ಜಿಲ್ಲೆಯ ಒಟ್ಟಾರೆ ಸೋಂಕಿತರ ಸಂಖ್ಯೆ 96ಕ್ಕೇರಿದೆ. ಇದುವರೆಗೆ 64 ಜನ ಗುಣಮುಖರಾಗಿದ್ದು, 32 ಸಕ್ರಿಯ ಪ್ರಕರಣಗಳಿವೆ.

    ಕತಾರ್​ನಿಂದ ವಾಪಸಾಗಿ, ಕರೊನಾ ಸೋಂಕಿಗೆ ತುತ್ತಾದ ಕಾರವಾರ ಕಾಜುಬಾಗದ ವ್ಯಕ್ತಿ (ಯುಕೆ-93) ಸಂಪರ್ಕಕ್ಕೆ ಬಂದ 24 ವರ್ಷದ ಮಹಿಳೆಗೆ (ಯುಕೆ-96) ರೋಗ ಖಚಿತವಾಗಿದೆ. ಇನ್ನು ಹಳಿಯಾಳಕ್ಕೂ ಕರೊನಾ ಲಗ್ಗೆ ಇಟ್ಟಿದೆ. ಜಿಲ್ಲೆಯ ಅಂಕೋಲಾ ಮಾತ್ರ ಸದ್ಯ ಕರೊನಾ ಮುಕ್ತ ಎಂಬ ಪಟ್ಟವನ್ನು ಉಳಿಸಿಕೊಂಡಿದೆ.

    ಬಾಲಕನಿಗೆ ಸೋಂಕು: ಜೂನ್ 3ರಂದು ತಂದೆಯ ಜತೆಗೆ ತಮಿಳುನಾಡಿನಿಂದ ಹಳಿಯಾಳಕ್ಕೆ ಬಂದು ಸಾಂಸ್ಥಿಕ ಕ್ವಾರಂಟೈನ್​ನಲ್ಲಿದ್ದ 14 ವರ್ಷದ ಬಾಲಕನಲ್ಲಿ (ಯುಕೆ-95) ಭಾನುವಾರ ಸೋಂಕು ದೃಢಪಟ್ಟಿದೆ.

    ಪಟ್ಟಣದ ದೇಶಪಾಂಡೆ ಆಶ್ರಯನಗರದ ಅಂಚಿನಲ್ಲಿರುವ ಸಕ್ಕರೆ ಕಾರ್ಖಾನೆ ಬಳಿಯ ತೋಟದಲ್ಲಿರುವ ಅಜ್ಜಿಯ ಮನೆಗೆ ಬಾಲಕ ಆಗಮಿಸಿದ್ದ. ಬಾಲಕನ ತಂದೆ ಮೂಲತಃ ವಿಜಯಪುರದವರಾಗಿದ್ದು, ಕೊಯಮುತ್ತೂರಿನಲ್ಲಿ ಮಗನನ್ನು ಓದಲು ಇಟ್ಟಿದ್ದರು. ಕರೊನಾದಿಂದ ಮಾರ್ಚ್​ನಲ್ಲಿ ಶಾಲೆ ಮುಚ್ಚಿದ್ದರಿಂದ ಬಾಲಕನನ್ನು ಕರೆತರಲು ತಂದೆ ತೆರಳಿದ್ದರು. ಆದರೆ, ಲಾಕ್​ಡೌನ್​ನಿಂದ ಅಲ್ಲಿಯೇ ಸಿಕ್ಕಿ ಹಾಕಿಕೊಂಡಿದ್ದರು. ಲಾಕ್​ಡೌನ್ ಸಡಿಲವಾಗುತ್ತಿದ್ದಂತೆ ಕಾರಿನಲ್ಲಿ ಹಳಿಯಾಳಕ್ಕೆ ಆಗಮಿಸಿದ್ದರು ಎನ್ನಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts