More

    ವ್ಯಾಪಾರ ವಹಿವಾಟು ಬಂದ್ ಯಶಸ್ವಿ

    ಕಲಬುರಗಿ: ವಿದ್ಯುತ್ ದರ ಏರಿಕೆ ವಿರೋಧಿಸಿ ಕಲ್ಯಾಣ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ (ಕೆಕೆಸಿಸಿಐ) ಗುರುವಾರ ಕರೆ ನೀಡಿದ ಅಂಗಡಿ-ಮುAಗಟ್ಟುಗಳ ವ್ಯಾಪಾರ ಬಂದ್ ನಗರದಲ್ಲಿ ಯಶಸ್ವಿಯಾಗಿದೆ. ಕೈಗಾರಿಕಾ ವಸಾಹತು ಪ್ರದೇಶದಲ್ಲಿ ಘಟಕಗಳು ಮುಚ್ಚಿದ್ದವು. ಎಪಿಎಂಸಿ ಚಟುವಟಿಕೆ ಸಂಪೂರ್ಣ ಸ್ಥಗಿತಗೊಂಡಿತ್ತು. ಆಸ್ಪತ್ರೆ ಇತರ ತುರ್ತು ಸೇವೆ, ಆಟೋ, ಬಸ್ ಸಂಚಾರ ಎಂದಿನಂತಿತ್ತು.

    ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ) ವಿದ್ಯುತ್ ದರವನ್ನು ಅವೈಜ್ಞಾನಿಕವಾಗಿ ಏರಿಸಿರುವುದನ್ನು ಖಂಡಿಸಿ ಕರೆ ನೀಡಿದ ಕರ್ನಾಟಕ ಬಂದ್‌ಗೆ ಬೆಂಬಲಿಸಿ ಕಲಬುರಗಿಯಲ್ಲಿ ಕೆಕೆಸಿಸಿಐ ಅಧ್ಯಕ್ಷ ಶಶಿಕಾಂತ ಪಾಟೀಲ್ ಮತ್ತು ಕಾರ್ಯದರ್ಶಿ ಮಂಜುನಾಥ ಜೇವರ್ಗಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ದರ ಏರಿಕೆ ಹಿಂಪಡೆಯುವಂತೆ ಆಗ್ರಹಿಸಲಾಯಿತು.

    ನಗರದ ವರ್ತಕರು ತಮ್ಮ ಅಂಗಡಿಗಳನ್ನು ಬಂದ್ ಮಾಡಿ ಚೌಕ್ ವೃತ್ತದಿಂದ ಸೂಪರ್ ಮಾರ್ಕೆಟ್, ಜಗತ್, ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿವರೆಗೆ ವರ್ತಕರು ಪ್ರತಿಭಟನಾ ಮೆರವಣಿಗೆ ನಡೆಸಿ ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.

    ಉದ್ಯಮಿಗಳಾದ ರಾಘವೇಂದ್ರ ಮೈಲಾಪುರ, ಪ್ರಶಾಂತ ಮಾನಕರ್, ಶರಣು ಪಪ್ಪಾ, ನರಸಿಂಹ ಮೆಂಡನ್, ಮಹಾದೇವ ಖೇಣಿ, ರವಿಚಂದ್ರ ಪಾಟೀಲ್, ಅಮಿತ್ ಜೈನ್, ಆನಂದ ದಂಡೋತಿ, ಶ್ರೀಮಂತ ಉದನೂರ, ಸಂಗಮೇಶ ಕಲ್ಯಾಣಿ, ಉತ್ತಮ ಬಜಾಜ್, ಗೋಪಾಲ ಬುಚನಳ್ಳಿ, ಮನೀಷ್ ಜಾಜು, ಭೀಮಾಶಂಕರ ಪಾಟೀಲ್, ರಾಮಕೃಷ್ಣ ಬೋರಾಳಕರ್, ಜಗದೀಶ ಕಡಗಂಚಿ, ಶಿವರಾಜ ಖೂಬಾ, ರಾಜು ನಾಗೂರ, ದಿನೇಶ ಪಾಟೀಲ್, ಮಂಜುನಾಥ ನಿಗ್ಗುಡಗಿ, ಶರಣ ನಿಗ್ಗುಡಗಿ, ಉಮಾಕಾಂತ ನಿಗ್ಗುಡಗಿ, ರಾಧಾಕೃಷ್ಣ ರಘೋಜಿ, ರಮೇಶ ಸ್ವಾಮಿ, ಉಮೇಶ ಶೆಟ್ಟಿ, ಓಂ ಲಾಹೋಟಿ, ಸತೀಶ ಘಂಟೋಜಿ, ಮೋಹನ ಪಂಡಿತ್, ಶರಣಬಸಪ್ಪ ಮಾಚೆಟ್ಟಿ, ನೀಲಕಂಠ ಬಿರಾದಾರ, ಸಂತೋಷ ಲಂಗರ್, ಬಸವರಾಜ ಬಿಲಗುಂದಿ, ವೇಣು ಮಾದಮಶೆಟ್ಟಿ, ಬಾವಗಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts