More

    ವ್ಯವಹಾರ ಜ್ಞಾನ ಹೆಚ್ಚಿಸಲು ಮಾರುಕಟ್ಟೆ ದಿನ

    ಚಿಕ್ಕಮಗಳೂರು: ರೈತರ ಕಷ್ಟ ಅವರ ಮಕ್ಕಳಿಗೆ ಅರಿವಾದಾಗ ಜೀವನದಲ್ಲಿ ಕಷ್ಟ, ಸುಖಗಳನ್ನು ಸಮನಾಗಿ ಸ್ವೀಕರಿಸಲು ಸಾಧ್ಯ. ಇದಕ್ಕೆ ಪೂರಕವಾಗಿ ಶಾಲೆಯಲ್ಲಿ ಮಾರುಕಟ್ಟೆ ದಿನ ಆಚರಿಸುವುದು ಅನುಕೂಲಕರ ಎಂದು ಆಡಳಿತ ಮಂಡಳಿ ಅಧ್ಯಕ್ಷ ಡಾ. ಚೇತನ್​ಕುಮಾರ್ ಹೇಳಿದರು.

    ನಗರದ ಚೇತನ ಪಬ್ಲಿಕ್ ಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ಮಕ್ಕಳ ಸಂತೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತರಕಾರಿ, ಹಣ್ಣು ಮಾರಾಟ ಮಾಡುವ ಬಗೆ ಹಾಗೂ ರೈತರ ಕಷ್ಟಗಳನ್ನು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಬೇಕು ಎಂದರು.

    ಸಿಆರ್​ಪಿ ಜಯರಾಮ್ ಮಾತನಾಡಿ, ಸ್ವಲ್ಪ ಬಂಡವಾಳ ಹೂಡಿ ಮಕ್ಕಳೊಂದಿಗೆ ನಗರದ ಮಾರುಕಟ್ಟೆಗೆ ತೆರಳಿ ಹಣ್ಣು, ತರಕಾರಿ ಖರೀದಿಸಿ ತಂದು ಶಾಲೆಯಲ್ಲಿ ಮಕ್ಕಳ ಸಂತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೇವೆ. ಇದೊಂದು ವಿಭಿನ್ನ ಅನುಭವ. ಇಲ್ಲಿ ಲಾಭ-ನಷ್ಟ ಮುಖ್ಯವಲ್ಲ. ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಉದ್ದೇಶವಿದೆ ಎಂದು ಹೇಳಿದರು. ನಿವೃತ್ತ ಪೊಲೀಸ್ ಅಧಿಕಾರಿ ಜಿ.ಪುಟ್ಟಪ್ಪ ಮಾತನಾಡಿ, ಮಕ್ಕಳು ಹೆದರದೆ ಮತ್ತು ಅಂಜಿಕೆ ಇಲ್ಲದೆ ವ್ಯವಹಾರ ಜ್ಞಾನಕ್ಕೆ ಮುಂದಾಗಿರುವುದು ಸಂತೋಷ ತಂದಿದೆ ಎಂದರು. ಕೆನರಾ ಬ್ಯಾಂಕ್ ಕಲ್ಯಾಣನಗರ ಶಾಖೆ ಮ್ಯಾನೇಜರ್ ವಿ.ಜಿ.ಮಹೇಶ್, ಪ್ರಾಚಾರ್ಯು ಸೀಮಾ ದೇಶಪಾಂಡೆ, ಶಿಕ್ಷಕರಾದ ಸುಷ್ಮಾ, ದಿವ್ಯಾ, ಮಹಾಲಕ್ಷ್ಮೀ, ಶರ್ವಿುಳಾ, ಲತಾ ಇದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts