More

    ವ್ಯಕ್ತಿಯ ಹಕ್ಕು,ಸ್ವಾತಂತ್ರ್ಯಹರಣವೇ ಜೀತಪದ್ಧತಿ

    ಚಿತ್ರದುರ್ಗ:ವ್ಯಕ್ತಿಯ ಹಕ್ಕು,ಸ್ವಾತಂತ್ರ್ಯಹರಣವೇ ಜೀತಪದ್ಧತಿಯಾಗಿದೆ ಎಂದು ಬೆಂಗಳೂರಿನ ಇಂಟರ್ ನ್ಯಾಷನಲ್ ಜಸ್ಟಿಸ್ ಸಂಸ್ಥೆ ಸರ್ಕಾರದ ಸಂಬಂಧಗಳ ಸಂಯೋಜಕ ಹಾಗೂ ರಾಜ್ಯಜೀತ ಕಾರ್ಮಿಕ ಪದ್ಧತಿ ನಿರ್ಮೂಲನಾ ಉನ್ನತ ಮಟ್ಟದ ಸಮಿತಿ ಸದಸ್ಯ ವಿಲಿಯಂ ಕ್ರಿಸ್ಟೋಫರ್ ಹೇಳಿದರು. ಜಿಪಂದಲ್ಲಿ ಬುಧವಾರ ಏರ್ಪಡಿಸಿದ್ದ ಜೀತ ಕಾರ್ಮಿಕ ಪದ್ಧತಿ(ನಿರ್ಮೂಲನಾ) ಅಧಿನಿಯಮ-1976ರ ಅನುಷ್ಠಾನ ತರಬೇತಿ ಕಾರ್ಯಾ ಗಾರದಲ್ಲಿ ಮಾತನಾಡಿ,ಈ ಪದ್ಧತಿಯಲ್ಲಿ ವ್ಯಕ್ತಿಯ ಹಕ್ಕು ಹಾಗೂ ಸ್ವಾತಂತ್ರ್ಯವನ್ನು ಬಳಸಿಕೊಳ್ಳಲು ಸಾಧ್ಯ ಲ್ಲ.ಇದಕ್ಕೆ ಸಿಲುಕಿದ ಪ್ರತಿಯೊಬ್ಬರು ಆರ್ಥಿಕ ಹಾಗೂ ದೈಹಿಕ ಶೋಷಣೆಗೆ ಒಳಗಾದ ದುರ್ಬಲರಾಗಿದ್ದಾರೆ. ಇವರಲ್ಲಿ ಶೇ.95 ಪರಿಶಿಷ್ಟ ಜಾತಿ ಮತ್ತು ಪಂಗಡದವರೆಂದು ಅಧ್ಯಯ ನ ವರದಿಗಳು ತಿಳಿಸಿರುವುದಾಗಿ ಕಳವಳ ವ್ಯಕ್ತಪಡಿಸಿದರು.
    ಕಾರ‌್ಯಾಗಾರ ಉದ್ಘಾಟಿಸಿದ ಎಡಿಸಿ ಸಿ.ಸಂಗಪ್ಪ ಮಾತನಾಡಿ,ಜಿಲ್ಲಾಧಿಕಾರಿ ಅಧ್ಯಕ್ಷತೆ ಶೀಘ್ರ ಸಭೆ ಕರೆದು ಜಿಲ್ಲೆಯಲ್ಲಿ ಜೀತ ಪದ್ಧತಿ ಇದೆ ಯೇ ಎಂಬುದರ ಪತ್ತೆಗೆ ಸಮೀಕ್ಷೆ ನಡೆಸಲಾಗುವುದು. ಇದಕ್ಕಾಗಿ ಕಂದಾಯ ಹಾಗೂ ಕಾರ್ಮಿಕ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ತಂಡ ರಚಿಸಲಾ ಗುವುದು. ಈ ತಂಡ ಪ್ರತಿ ಹೋಬಳಿಯಲ್ಲಿ ಸಂಚರಿಸಿ ಜಂಟಿ ಸಮೀಕ್ಷೆ ನಡೆಸಲಿದೆ. ಜೀತ ಪದ್ಧತಿಗೆ ಒಳಗಾದ ನೊಂದವ ರು ಕಂಡು ಬಂದರೆ ಅವರಿಗೆ ಪುನರ್ವಸತಿ ಕಲ್ಪಿಸುವ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲಾಗುವುದೆಂದರು.

    ಎಸಿ ವಿ.ಪ್ರಸನ್ನ,ಜಿಪಂ ಮುಖ್ಯಲೆಕ್ಕಾಧಿಕಾರಿ ಓಂಕಾರಪ್ಪ, ಜಿಲ್ಲಾ ಕಾರ್ಮಿಕ ಅಧಿಕಾರಿ ವಿನುತಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ರಾಜಾನಾಯ್ಕ,ತಹಸೀಲ್ದಾರ್‌ಗಳು,ಉಪತಹಶೀಲ್ದಾರ್‌ಗಳು ಹಾಗೂ ಕಂದಾಯ,ಕಾರ್ಮಿಕ ಇಲಾಖೆ ಅಧಿಕಾರಿ ಗಳು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts