More

    ವ್ಯಕ್ತಿತ್ವ ವಿಕಾಸದ ಪುಸ್ತಕಗಳನ್ನು ಓದಿ

    ಯಾದಗಿರಿ: ಗ್ರಾಮೀಣ ಭಾಗದಲ್ಲಿನ ವಿದ್ಯಾಥರ್ಿಗಳು ಉನ್ನತ ಶಿಕ್ಷಣ ಪಡೆದುಕೊಂಡು ನಿಮ್ಮ ತಂದೆ-ತಾಯಿಯರ ಕನಸು ನನಸು ಮಾಡಲು ಪ್ರಯತ್ನಿಸಿ. ಸಮಯ ಅತ್ಯಂತ ಅಮೂಲ್ಯ ಅದನ್ನು ಹಾಳುಮಾಡಬೇಡಿ ಎಂದು ಜಿಲ್ಲಾಕಾರಿ ಸ್ನೇಹಲ್ ಆರ್., ಕಿವಿಮಾತು ಹೇಳಿದರು.

    ಗುರುವಾರ ನಗರದ ಜಿಲ್ಲಾಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಹುಣಸಗಿ ತಾಲೂಕಿನ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಹೆಜ್ಜೆಗೊಂದು ದಾರಿ ವಿಶೇಷ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ಓದಿದ್ದಕ್ಕಿಂತ ಕೇಳಿದ್ದು, ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು ಹಾಗೂ ಕೇಳಿಸಿಕೊಂಡಿದ್ದು ದೀರ್ಘಕಾಲ ನೆನೆಪಿನಲ್ಲಿ ಉಳಿಯುತ್ತದೆ. ಈ ವಿಧಾನದ ಕಲಿಕೆಗೆ ಗುಂಪು ಚಚರ್ೆ ( ಗ್ರೂಪ್ ಸ್ಟಡಿ) ಸಹಕಾರಿಯಾಗುತ್ತದೆ ಎಂದರು.

    ಈ ಪರೀಕ್ಷೆಯಲ್ಲಿನ ಪ್ರಶ್ನೆಗಳು ಭಾರತದ ಇತಿಹಾಸಕ್ಕೆ ಮಾತ್ರ ಸೀಮೀತವಾಗಿರುವುದಿಲ್ಲ. ಪ್ರಪಂಚದ ಜ್ಞಾನ ತಿಳಿದುಕೊಳ್ಳಬೇಕು.ಮುಖ್ಯಪರೀಕ್ಷೆಗೆ ಸಿದ್ಧರಾಗುವವರು ಇಂಗ್ಲಿಷ್ ಮತ್ತು ಕನ್ನಡದ ದಿನಪತ್ರಿಕೆಗಳನ್ನು ಕಡ್ಡಾಯವಾಗಿ ಓದಿ. ಕೆಲವು ವಾರಪತ್ರಿಕೆಗಳು, ಮಾಸಪತ್ರಿಕೆಗಳು, ಸಾಮಾನ್ಯ ಜ್ಞಾನ ಕೈಪಿಡಿಗಳು, ವ್ಯಕ್ತಿತ್ವ ವಿಕಾಸದ ಪುಸ್ತಕಗಳನ್ನು ಓದಿ ಎಂದು ತಿಳಿಸಿದರು.
    ಸರಕಾರಿ ಕರ್ತವ್ಯದ ಬಗ್ಗೆ ಸೂಕ್ತ ಮಾಹಿತಿ ಪಡೆದ ವಿದ್ಯಾರ್ಥಿಗಳು ಆಡಳಿತಯಂತ್ರ, ಕಾರ್ಯಾಗದ ವ್ಯವಸ್ಥೆಯ ಬಗ್ಗೆ ಜಿಲ್ಲಾಕಾರಿಗಳ ಬಳಿ ಕೇಳಿ ತಿಳಿದುಕೊಂಡರು. ಜೀವನವು ಪ್ರತಿದಿನ ಹೊಸ ಸವಾಲುಗಳನ್ನು ನೀಡುತ್ತದೆ. ಅದನ್ನು ದಾಟಿದಾಗಲೇ ಯಶಸ್ಸನ್ನು ಪಡೆಯಲು ಸಾಧ್ಯ. ಜ್ಞಾನವನ್ನು ಹಂಚಿಕೊಂಡರೆ ಮತ್ತಷ್ಟು ಹೆಚ್ಚುತ್ತದೆ. ಶಿಕ್ಷಣದಲ್ಲಿ ಮೊದಲು ಓದು ನಂತರ ಪರೀಕ್ಷೆ ಎಂದು ಹೇಳಿದರು.

    ವಿಷಯ ಪರಿವೀಕ್ಷಕರಾದ ಹಣಮಂತ ಎಚ್, ಪ್ರಕಾಶ, ಶಿಕ್ಷಕರಾದ ರಾಮಣ್ಣ ಹೂಗಾರ್, ಗೌಡಪ್ಪಗೌಡ ವಜ್ವಲ್, ನಾಗರತ್ನ, ಭೀಮಣ್ಣಗೌಡ ದೊರೆಗೊಳಾ, ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts